ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಅಂದಿದ್ದು ನಿಜ; ಆದರೆ ಯಾವ ಪಕ್ಷದ ಅಭ್ಯರ್ಥಿ ಅನ್ನೋದು ಹೇಳಿಲ್ಲ ಅಂತ ರೇಣುಕಾಚಾರ್ಯ ಹೇಳಿದ್ಯಾಕೆ?

ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಅಂದಿದ್ದು ನಿಜ; ಆದರೆ ಯಾವ ಪಕ್ಷದ ಅಭ್ಯರ್ಥಿ ಅನ್ನೋದು ಹೇಳಿಲ್ಲ ಅಂತ ರೇಣುಕಾಚಾರ್ಯ ಹೇಳಿದ್ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 25, 2023 | 6:41 PM

ಶಿವಕುಮಾರ್ ಅವರೊಂದಿಗೆ ರಾಜಕೀಯೇತರ ವಿಷಯಗಳನ್ನು ಚರ್ಚಿಸಿದಾಗಿ ಹೇಳಿದ ರೇಣುಕಾಚಾರ್ಯ ಲೋಕ ಸಭಾ ಚುನಾವಣೆಗಾಗಿ ದಾವಣಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವುದು ನಿಜ ಆದರೆ ಯಾವ ಪಾರ್ಟಿಯಿಂದ ಅಂತ ಹೇಳಿಲ್ಲ ಅಂತ ಹೇಳಿದ್ದು ಪಕ್ಷನಿಷ್ಠೆ ಬದಲಾವಣೆಯಾಗುವ ಬಗ್ಗೆ ಸುಳಿವು ನೀಡಿದಂತಿತ್ತು!

ಬೆಂಗಳೂರು: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಇಂದು ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾದ ಬಿಜೆಪಿ ನಾಯಕ ಮತ್ತು ಎಂಪಿ ರೇಣುಕಾಚಾರ್ಯ (MP Renukacharya) ಉಪ ಮುಖ್ಯಮಂತ್ರಿಯವರ ಮನೆಯಿಂದ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ (CM Siddaramaiah) ತನಗೆ ಉತ್ತಮ ಬಾಂಧವ್ಯವಿದೆ. ಹೊನ್ನಾಳಿಯಲ್ಲಿ ಕೃಷಿ ಮೇಳ ಮತ್ತು ದಾವಣಗೆರೆಯಲ್ಲಿ ಇನ್ನೊಂದು ಕಾರ್ಯಕ್ರಮವನ್ನು ಆಯೋಜಿಸಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ರನ್ನು ಆಹ್ವಾನಿಸಿದಾಗ ತನ್ನ ಮಾತಿಗೆ ಗೌರವ ನೀಡಿ ಆಗಮಿಸಿದ್ದರು. ಬಿಜೆಪಿ ಸರಕಾರದ ಅವಧಿಯಲ್ಲಿ ತಾನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ಶಿವಕುಮಾರ್ ತನ್ನೊಂದಿಗೆ ಬಹಳ ವಿಶ್ವಾಸದಿಂದ ಮಾತಾಡುತ್ತಿದ್ದರು ಎಂದು ರೇಣುಕಾಚಾರ್ಯ ಹೇಳಿದರು. ಶಿವಕುಮಾರ್ ಅವರೊಂದಿಗೆ ರಾಜಕೀಯೇತರ ವಿಷಯಗಳನ್ನು ಚರ್ಚಿಸಿದಾಗಿ ಹೇಳಿದ ರೇಣುಕಾಚಾರ್ಯ ಲೋಕ ಸಭಾ ಚುನಾವಣೆಗಾಗಿ ದಾವಣಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವುದು ನಿಜ ಆದರೆ ಯಾವ ಪಾರ್ಟಿಯಿಂದ ಅಂತ ಹೇಳಿಲ್ಲ ಅಂತ ಹೇಳಿದ್ದು ಪಕ್ಷನಿಷ್ಠೆ ಬದಲಾವಣೆಯಾಗುವ ಬಗ್ಗೆ ಸುಳಿವು ನೀಡಿದಂತಿತ್ತು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ