ಉನ್ನಾವ್: ಉತ್ತರ ಪ್ರದೇಶದ ಉನ್ನಾವೊದಲ್ಲಿ ಯುವತಿಯೊಬ್ಬಳು ತನ್ನ ಅತ್ತಿಗೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ 6 ತಿಂಗಳಿನಿಂದ ಅವರಿಬ್ಬರ ನಡುವೆ ಆಪ್ತ ಸಂಬಂಧ ಬೆಳೆದಿತ್ತು. ಯುವತಿಗೆ ತನ್ನ ಅತ್ತಿಗೆ ತನ್ನ ಅಣ್ಣನೊಂದಿಗೆ ಆತ್ಮೀಯವಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಣ್ಣನನ್ನು ಬಿಟ್ಟು ತನ್ನನ್ನೇ ಮದುವೆಯಾಗಬೇಕೆಂದು ಆಕೆ ಅತ್ತಿಗೆಗೆ ಒತ್ತಾಯಿಸುತ್ತಿದ್ದಳು. ಇಬ್ಬರೂ ಸಲಿಂಗ ವಿವಾಹವಾಗಲು ಮನೆ ಬಿಟ್ಟು ಓಡಿಹೋಗಲು ನಿರ್ಧರಿಸಿದ್ದರು.
ಈ ವಿಷಯ ಮನೆಯಲ್ಲಿ ಗೊತ್ತಾಗಿ ಅವರ ಪ್ರಣಯ ಸಂಬಂಧವು ವಿವಾದಗಳಿಗೆ ಕಾರಣವಾಯಿತು. ನಂತರ ಅತ್ತಿಗೆ ವಿಷ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿವಾಹಿತ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಮತ್ತು ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ಬಂಗಾರ್‌ಮೌ ಸಿಎಚ್‌ಸಿಗೆ ದಾಖಲಿಸಿದ್ದಾರೆ.
उन्नाव के बांगरमऊ कोतवाली क्षेत्र में एक युवती रिश्ते की भाभी से विवाह की जिद पर अड़ी हुई थी। महिला और युवती के बीच पिछले छह महीनों से नजदीकियां थीं। दोनों के बीच प्रेम संबंधों को लेकर विवाद बढ़ा, और युवती ने महिला पर जहर खाने का आरोप लगाया। महिला की हालत गंभीर हो गई, जिसके बाद… pic.twitter.com/D15wRIxBFg
— भारत समाचार | Bharat Samachar (@bstvlive) January 6, 2025
ಐದು ದಿನಗಳ ಹಿಂದೆ, ಯುವತಿ ಮತ್ತು ಆಕೆಯ ಅತ್ತಿಗೆ ಇಬ್ಬರೂ ಪರಾರಿಯಾಗಿದ್ದರು. ಆದರೆ ಪೊಲೀಸರು ಅವರನ್ನು ಪತ್ತೆ ಮಾಡಿ ಅವರ ಕುಟುಂಬಗಳಿಗೆ ಒಪ್ಪಿಸಿದ್ದಾರೆ. ವಿವಾಹಿತ ಮಹಿಳೆಯ ಪತಿ ಆಕೆಯಿಂದ ದೂರವಾಗಿದ್ದ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ