Mohammad Fazil: ಫಾಜಿಲ್ ಹತ್ಯೆ ಪ್ರಕರಣ; ತಡರಾತ್ರಿ ಪೊಲೀಸರ ಕಾರ್ಯಾಚರಣೆ, ನಾಲ್ವರ ಬಂಧನ

ಬೆಂಗಳೂರು, ಉತ್ತರ ಕನ್ನಡ ಸೇರಿದಂತೆ ಹಲವೆಡೆ ತಡರಾತ್ರಿಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

Mohammad Fazil: ಫಾಜಿಲ್ ಹತ್ಯೆ ಪ್ರಕರಣ; ತಡರಾತ್ರಿ ಪೊಲೀಸರ ಕಾರ್ಯಾಚರಣೆ, ನಾಲ್ವರ ಬಂಧನ
ಮೃತ ಫಾಜಿಲ್ ಮಂಗಳಪೇಟೆ
Edited By:

Updated on: Aug 02, 2022 | 8:15 AM

ಮಂಗಳೂರು: ಸುರತ್ಕಲ್​ನಲ್ಲಿ ಮೊಹಮದ್ ಫಾಜಿಲ್ ಮಂಗಳಪೇಟೆ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು, ಉತ್ತರ ಕನ್ನಡ ಸೇರಿದಂತೆ ಹಲವೆಡೆ ತಡರಾತ್ರಿಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮಂಕಿ ಕ್ಯಾಪ್​ ಹಾಕಿಕೊಂಡು ಫಾಜಿಲ್ ಅವರನ್ನು ಹಂತಕರು ಹತ್ಯೆ ಮಾಡಿದ್ದರು. ಇದೀಗ ಸುರತ್ಕಲ್ ಠಾಣೆಗೆ ಆರೋಪಿಗಳನ್ನು ಕರೆತರಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಫಾಜಿಲ್ ಹತ್ಯೆಗೆ ಬಿಳಿ ಬಣ್ಣದ ಹ್ಯುಂಡೈ ಕಾರ್ ಬಳಕೆಯಾಗಿತ್ತು. ಕಾರಿನ ವಿವರ ಕಲೆಹಾಕಿದ್ದ ಪೊಲೀಸರು ಮಾಲೀಕ ಅಜಿತ್ ಕ್ರಾಸ್ತಾನನ್ನು ಬಂಧಿಸಿದ್ದರು. ಫಾಜಿಲ್ ಹತ್ಯೆ ಪ್ರಕರಣದ ತನಿಖೆಯು ಮಂಗಳೂರಿನ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದೆ.

ಫಾಜಿಲ್​ಗೂ ಮೊದಲು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯೂ ಚುರುಕಾಗಿದೆ. 40ಕ್ಕೂ ಹೆಚ್ಚು ಆರೋಪಿಗಳನ್ನು ವಿಚಾರಣೆ ನಡೆಸಲಾಗಿದೆ.

Published On - 8:01 am, Tue, 2 August 22