Jharkhand: ನವಜಾತ ಶಿಶುವನ್ನು ರೂ. 4.5 ಲಕ್ಷಕ್ಕೆ ಮಾರಾಟ ಮಾಡಿದ ತಾಯಿ!

|

Updated on: Mar 24, 2023 | 4:53 PM

ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಗಂಡು ಮಗುವನ್ನು ಹುಟ್ಟಿದ ಕೂಡಲೇ ತಾಯಿ ಮಾರಾಟ ಮಾಡಿರುವ ಪ್ರಕರಣ ಬೆಳಕಿದೆ ಬಂದಿದೆ. ಈ ಪ್ರಕರಣದಲ್ಲಿ ನವಜಾತ ಶಿಶುವಿನ ತಾಯಿ ಆಶಾದೇವಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ

Jharkhand: ನವಜಾತ ಶಿಶುವನ್ನು ರೂ. 4.5 ಲಕ್ಷಕ್ಕೆ ಮಾರಾಟ ಮಾಡಿದ ತಾಯಿ!
Mother sells new born baby for 4.5 lakhs in Jharkhand
Follow us on

ಜಾರ್ಖಂಡ್‌ನ ಛತ್ರಾ (Chatra) ಜಿಲ್ಲೆಯಲ್ಲಿ ಗಂಡು ಮಗುವನ್ನು ಹುಟ್ಟಿದ ಕೂಡಲೇ ತಾಯಿ ಮಾರಾಟ ಮಾಡಿರುವ ಪ್ರಕರಣ ಬೆಳಕಿದೆ ಬಂದಿದೆ. ಈ ಪ್ರಕರಣದಲ್ಲಿ ನವಜಾತ ಶಿಶುವಿನ (newborn baby) ತಾಯಿ ಆಶಾದೇವಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಅಬು ಇಮ್ರಾನ್ ಘಟನೆಯ ಬಗ್ಗೆ ತಿಳಿದ ನಂತರ, ಅವರು ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಕೇಶ್ ರಂಜನ್ ಅವರಿಗೆ ತಿಳಿಸಿದ್ದಾರೆ. ಪೊಲೀಸರು 24 ಗಂಟೆಗಳಲ್ಲಿ ಬೊಕಾರೊ ಜಿಲ್ಲೆಯಿಂದ ನವಜಾತ ಶಿಶುವನ್ನು ರಕ್ಷಿಸಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅವಿನಾಶ್ ಕುಮಾರ್ ತಿಳಿಸಿದ್ದಾರೆ.

ಆಶಾದೇವಿ ಅವರು ಶನಿವಾರ (ಮಾರ್ಚ್ 18) ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಂಗಳವಾರ ನವಜಾತ ಶಿಶುವಿಲ್ಲದೆ ಛತ್ರದ ದಿಭಾ ಮೊಹಲ್ಲಾದಲ್ಲಿರುವ ಮನೆಗೆ ಬಂದರು, ಮಗು ಇಲ್ಲದ್ದನ್ನು ಕಂಡ ಸಂಬಂಧಿಕರಲ್ಲಿ ಸಂಶಯ ಮೂಡಿದೆ.

ಮಗುವಿನ ತಾಯಿ ಆಶಾ ದೇವಿಯನ್ನು ಬಂದಿಸಿದ ಪೊಲೀಸರಿಗೆ ಡಿಂಪಲ್ ದೇವಿ ಎಂದು ಗುರುತಿಸಲಾದ ‘ಸಾಹಿಯಾ ದೀದಿ’ಗೆ ಕರೆದೊಯ್ಯಿತು. ಡಿಂಪಲ್ ದೇವಿ ನೀಡಿದ ಲೀಡ್ ಆಧಾರದ ಮೇಲೆ ಪೊಲೀಸರು ಇತರ ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಬೊಕಾರೊದಿಂದ ಮಗುವನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಶಾಲೆಯ ಪ್ಯೂನ್ ಬಂಧನ

ತನಿಖೆಯಲ್ಲಿ ಹಜಾರಿಬಾಗ್ ಜಿಲ್ಲೆಯ ಬಡ್ಕಗಾಂವ್ ಗ್ರಾಮದ ದಂಪತಿಗಳು ನವಜಾತ ಶಿಶುವಿಗೆ 4.5 ಲಕ್ಷ ರೂ.ಗೆ ಚಾತ್ರಾ ಮತ್ತು ಬೊಕಾರೊದ ಇಬ್ಬರು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇದರಲ್ಲಿ ರೂ. 1 ಲಕ್ಷವನ್ನು ಆಶಾ ದೇವಿಗೆ ನೀಡಿ ಉಳಿದ ರೂ. 3.5 ಲಕ್ಷವನ್ನು ದಲ್ಲಾಳಿಗಳು ತೆಗೆದುಕೊಂಡಿದ್ದಾರೆ.

ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ.ಮನೀಷ್ ಲಾಲ್ ಹೇಳಿಕೆ ಮೇರೆಗೆ ಛತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 4:53 pm, Fri, 24 March 23