Crime News: 39 ದಿನಗಳ ಶಿಶುವನ್ನು 14ನೇ ಮಹಡಿಯಿಂದ ಕೆಳಗೆಸೆದು ಕೊಂದ ತಾಯಿ!

|

Updated on: Sep 23, 2023 | 12:28 PM

ಮಗುವಿನ ತಾಯಿಗೆ ಕಿವಿ ಕೇಳಿಸುತ್ತಿರಲಿಲ್ಲ. ಆ ತಾಯಿ 14ನೇ ಮಹಡಿಯಿಂದ ತನ್ನ ಮಗುವನ್ನು ಹೊರಗೆ ಎಸೆದಿದ್ದಾರೆ. ಮಗುವಿನ ತಾಯಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ, ಈ ಕೃತ್ಯದ ಹಿಂದಿನ ಉದ್ದೇಶ ಇನ್ನೂ ಖಚಿತವಾಗಿಲ್ಲ.

Crime News: 39 ದಿನಗಳ ಶಿಶುವನ್ನು 14ನೇ ಮಹಡಿಯಿಂದ ಕೆಳಗೆಸೆದು ಕೊಂದ ತಾಯಿ!
ಸಾಂದರ್ಭಿಕ ಚಿತ್ರ
Image Credit source: pexels.com
Follow us on

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಅಪಾರ್ಟ್​ವೊಂದರ 14ನೇ ಮಹಡಿಯಿಂದ ತಾಯಿಯೊಬ್ಬರು ತನ್ನ 39 ದಿನಗಳ ಶಿಶುವನ್ನು ಕೆಳಗೆ ಬಿಸಾಡಿರುವ ಭಯಾನಕ ಘಟನೆ ನಡೆದಿದೆ. ಮುಂಬೈ ಉಪನಗರ ಮುಲುಂಡ್‌ನಲ್ಲಿರುವ ಅಪಾರ್ಟ್​ಮೆಂಟ್​ನ 14ನೇ ಮಹಡಿಯಲ್ಲಿ ವಾಸವಾಗಿದ್ದ ಅಂಗವಿಕಲ ತಾಯಿ ತನ್ನನ್ನು ತನ್ನ ಗಂಡನ ಮನೆಯವರು ಮನೆಯಿಂದ ಹೊರಹಾಕಿದ ಹಿನ್ನೆಲೆಯಲ್ಲಿ 39 ದಿನಗಳ ಹೆಣ್ಣು ಮಗುವನ್ನು ಕೆಳಗೆ ಎಸೆದು ಕೊಂದಿದ್ದಾರೆ.

ಗುರುವಾರ ಸಂಜೆ ಮುಲುಂಡ್ ವೆಸ್ಟ್‌ನ ಜಾವೆರ್ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಮಗುವಿನ ತಾಯಿಗೆ ಕಿವಿ ಕೇಳಿಸುತ್ತಿರಲಿಲ್ಲ. ಕಿವುಡುತನದಿಂದ ಬಳಲುತ್ತಿದ್ದ ಆ ತಾಯಿ ತನ್ನ ಮಗುವನ್ನು ಬಾಲ್ಕನಿಯ ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ತಕ್ಷಣ ಕೆಳಗೆ ಓಡಿದ ಆ ಮಗುವಿನ ಚಿಕ್ಕಪ್ಪ ಆ ಶಿಶುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಆ ಮಗು ಮೃತಪಟ್ಟಿತ್ತು.

ಇದನ್ನೂ ಓದಿ: ಗಂಡ, ಮಕ್ಕಳೆದುರೇ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಮಗುವಿನ ತಾಯಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ, ಈ ಕೃತ್ಯದ ಹಿಂದಿನ ಉದ್ದೇಶ ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಚಿತ್ರ ಸಂಗತಿಯೆಂದರೆ, ಅದೇ ಮಹಿಳೆಯ 7 ತಿಂಗಳ ಮಗ 2022ರ ಜುಲೈನಲ್ಲಿ ಊಟ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದ. ಇದೀಗ ಆ ಪ್ರಕರಣವನ್ನು ಕೂಡ ಪೊಲೀಸರು ಮರುತನಿಖೆ ಮಾಡುವ ಸಾಧ್ಯತೆಯಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ