ನವದೆಹಲಿ: ಆತನ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಮಾತನಾಡಿದ ಒಂದೇ ಒಂದು ತಪ್ಪಿಗೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ತನ್ನ ಮಾಜಿ ಪ್ರೇಯಸಿಯೊಂದಿಗೆ ಕ್ಲೋಸ್ ಆಗಿದ್ದ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಯುವಕರನ್ನು ಹಿಡಿಯಲು ಪೊಲೀಸರು ಬರೋಬ್ಬರಿ 600 ಕಿ.ಮೀ. ಸಂಚರಿಸಿದ್ದಾರೆ. ಆ ಕೊಲೆಗಾರರು ಸೆರೆ ಸಿಕ್ಕಿದ್ದು ಹೇಗೆಂಬ ರೋಚಕ ಕತೆ ಇಲ್ಲಿದೆ…
ಆಗಸ್ಟ್ 4ರಂದು ನಡೆದಿದ್ದ ಕೊಲೆಯ ಬಗ್ಗೆ ಪೊಲೀಸರಿಗೆ ಫೋನ್ ಬಂದಿತ್ತು. ಹಂತಕರಿಗಾಗಿ ಉತ್ತರ ಪ್ರದೇಶದ 6 ಜಿಲ್ಲೆಗಳನ್ನು ಸುತ್ತಿದ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳನ್ನು ಹಿಡಿದಿದ್ದಾರೆ. ಮಂಗೋಲಿ ಏರಿಯಾದಲ್ಲಿ ನಡೆದಿದ್ದ ಕೊಲೆಯ ಆರೋಪಿಗಳನ್ನು ಬಂಧಿಸಲಾಗಿದೆ. ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಆಗಾಗ ಮಾತನಾಡುತ್ತಿದ್ದ ಆ ಯುವಕನಿಂದಲೇ ತಮ್ಮಿಬ್ಬರ ಬ್ರೇಕಪ್ ಆಗಿರಬಹುದು ಎಂದು ಅನುಮಾನಗೊಂಡ ಯುವಕ ತನ್ನ ತಮ್ಮನ ಜೊತೆ ಸೇರಿ ಆ ಯುವಕನ್ನೇ ಕೊಲೆ ಮಾಡಲು ನಿರ್ಧರಿಸಿದ್ದ. ಆದರೆ, ಆ ಯುವಕ ನನಗೆ ಒಂದೆರಡು ಬಾರಿ ಸಿಕ್ಕು ಪರಿಚಿತನಾಗಿದ್ದ, ಆತನ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹಂತಕನ ಮಾಜಿ ಪ್ರೇಯಸಿ ಹೇಳಿದ್ದಾಳೆ. ಕೊಲೆಗಾರನ ಅನುಮಾನದಿಂದ ಅಮಾಯಕ ಯುವಕನ ಜೀವ ಹೋಗಿದೆ.
23 ವರ್ಷದ ಯುವಕನೊಬ್ಬನನ್ನು ಇಬ್ಬರು ಬೈಕ್ನಲ್ಲಿ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದರು. ಅಲ್ಲಿದ್ದ ಪಾರ್ಕ್ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಇಬ್ಬರ ಮುಖ ಸೆರೆಯಾಗಿತ್ತು. ಆ ಇಬ್ಬರು ಉತ್ತರ ಪ್ರದೇಶದ ನಿವಾಸಿಗಳೆಂಬುದು ಪೊಲೀಸರಿಗೆ ತನಿಖೆ ಬಳಿಕ ಗೊತ್ತಾಗಿತ್ತು. ಅವರನ್ನು ಹಿಡಿಯಲು ಉತ್ತರ ಪ್ರದೇಶಕ್ಕೆ ಹೊರಟ ದೆಹಲಿ ಪೊಲೀಸರಿಗೆ ಆ ಆರೋಪಿಯ ಮನೆಯವರು ಅವರಿಬ್ಬರೂ ಕೆಲವು ತಿಂಗಳಿಂದ ಮನೆಗೆ ಬಂದೇ ಇಲ್ಲ ಎಂದು ಹೇಳಿದ್ದರು. ಅವರ ಸುಳಿವು ಹಿಡಿದು 600 ಕಿ.ಮೀ. ಸುತ್ತಾಡಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳ ಮೊಬೈಲ್ ನೆಟ್ವರ್ಕ್ ಆಧರಿಸಿ ಫಾಲೋ ಮಾಡಿದ ಪೊಲೀಸರ ಕಣ್ತಪ್ಪಿಸಿ ಹಲವು ಬಾರಿ ಆರೋಪಿಗಳು ತಪ್ಪಿಸಿಕೊಂಡರು. ಕೊನೆಗೆ ಬಸ್ವೊಂದರಲ್ಲಿ ಬೇರೆ ಊರಿಗೆ ಪರಾರಿಯಾಗುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳನ್ನು ಹಿಡಿಯಲು 170 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿರುವ ಪೊಲೀಸರು 230ಕ್ಕೂ ಹೆಚ್ಚು ಜನರ ಬಳಿ ಮಾಹಿತಿ ಕಲೆಹಾಕಿದ್ದಾರೆ. ಕೊಲೆ ನಡೆದ 5 ದಿನಗಳ ಬಳಿಕ ಹಂತಕರು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿಗಾಗಿ ಗೆಳೆಯನ ತಲೆಯನ್ನೇ ಕತ್ತರಿಸಿದ 17 ವರ್ಷದ ಯುವಕ; ತ್ರಿಕೋನ ಪ್ರೇಮಕತೆಯ ದುರಂತ ಅಂತ್ಯ
Murder: ಗೆಳೆಯನನ್ನೇ ಬರ್ಬರವಾಗಿ ಕೊಂದು, ರೂಮ್ ಕ್ಲೀನ್ ಮಾಡಿ ಮಲಗಿದ ಕೊಲೆಗಾರ
(Murder After 600 km chase Delhi Police Arrested Murder accused Who Killed Man for Speaking with his Lover)