ಹಾಸನದಲ್ಲಿ ಮಾರಕಾಸ್ತ್ರಗಳಿಂದ ಬರ್ಬರ ಹತ್ಯೆ

|

Updated on: Sep 30, 2019 | 2:58 PM

ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ನಗರದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ನಡೆದಿದೆ. ಹಾಸನ ತಾಲೂಕಿನ ಚಿಕ್ಕಗೇಣಗೆರೆಯ ರಮೇಶ್ ಎಂಬಾತನನ್ನ ಹಂತಕರು ರಾತ್ರಿ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆ:  ಆರು ತಿಂಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ಮೃತಪಟ್ಟ ರಮೇಶ್ ನ ಪತ್ನಿ ತೇಜಾ, ಕೊಟ್ಟ ಹಣ ವಾಪಸ್ ಕೇಳಿದ್ದ ಕಾರಣಕ್ಕೆ ಸೈನಿಕರೊಬ್ಬರ ಪತ್ನಿಯನ್ನ ಕೊಂದು ಜೈಲು ಸೇರಿದ್ದಳು. ಇದಕ್ಕೆ ರಮೇಶ ಸಹ ಕುಮ್ಮಕ್ಕು ನೀಡಿದ್ದ ಎಂದು ಆತನಿಗೆ […]

ಹಾಸನದಲ್ಲಿ ಮಾರಕಾಸ್ತ್ರಗಳಿಂದ ಬರ್ಬರ ಹತ್ಯೆ
Follow us on

ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ನಗರದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ನಡೆದಿದೆ. ಹಾಸನ ತಾಲೂಕಿನ ಚಿಕ್ಕಗೇಣಗೆರೆಯ ರಮೇಶ್ ಎಂಬಾತನನ್ನ ಹಂತಕರು ರಾತ್ರಿ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ.

ಘಟನೆ ಹಿನ್ನೆಲೆ:
 ಆರು ತಿಂಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ಮೃತಪಟ್ಟ ರಮೇಶ್ ನ ಪತ್ನಿ ತೇಜಾ, ಕೊಟ್ಟ ಹಣ ವಾಪಸ್ ಕೇಳಿದ್ದ ಕಾರಣಕ್ಕೆ ಸೈನಿಕರೊಬ್ಬರ ಪತ್ನಿಯನ್ನ ಕೊಂದು ಜೈಲು ಸೇರಿದ್ದಳು. ಇದಕ್ಕೆ ರಮೇಶ ಸಹ ಕುಮ್ಮಕ್ಕು ನೀಡಿದ್ದ ಎಂದು ಆತನಿಗೆ ಸಾರ್ವಜಕನಿಕರು ಈ ಹಿಂದೆ ಥಳಿಸಿದ್ದರು.

ಆದರೆ ರಮೇಶ್ ಮೇಲಿನ ಆರೋಪ ಸಾಬೀತಾಗಿರಲಿಲ್ಲ. ಘಟನೆ ನಡೆದ ಆರು ತಿಂಗಳ ಬಳಿಕ ಈಗ ರಮೇಶ್ ಭೀಕರವಾಗಿ ಕೊಲೆಯಾಗಿದ್ದಾನೆ. ರಮೇಶ್ ಪತ್ನಿ ಕೊಲೆ ಆರೋಪದಲ್ಲಿ ಇನ್ನೂ ಜೈಲಲ್ಲೇ ಇದ್ದಾಳೆ. ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:54 pm, Mon, 30 September 19