ರಾಜ್ಕೋಟ್: ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಕೊಲೆಗಳೇ ನಡೆದ ಅನೇಕ ಉದಾಹರಣೆಗಳಿವೆ. ಫಿಶ್ ಕರಿಗಾಗಿ ವ್ಯಕ್ತಿಯೊಬ್ಬನನ್ನು ಕೊಂದಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಗುಜರಾತ್ನಲ್ಲಿ ನಡೆದಿದೆ. ರಂಜಿತ್ ಕುನ್ವರಿಯ ಎಂಬ 32 ವರ್ಷದ ವ್ಯಕ್ತಿ ಸಾವನ್ನಪ್ಪಿದಾತ. ಆತನನ್ನು ಕಾರಿನ ಕೆಳಗೆ ಹಾಕಿ ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ.
ಮಲಿಯ ಮಿಯಾನ ತಾಲೂಕಿನ ವೆನಸರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಂಜಿತ್ ಕುನ್ವರಿಯ, ಆತನ ಕಸಿನ್ಗಳಾದ ಅಶೋಕ್, ಸುನಿಲ್ ಮತ್ತು ಪ್ರಕಾಶ್ ಪಾರ್ಟಿಯೊಂದಕ್ಕೆ ಹೋಗಿದ್ದರು. ಡ್ರಿಂಕ್ ಪಾರ್ಟಿ ಮಾಡಿದ ನಂತರ ಅವರು ನದಿಯಲ್ಲಿ ಫಿಶಿಂಗ್ಗೆ ಹೋದರು. ಅಲ್ಲಿ ಪಿಶ್ ಕರಿ ಮತ್ತು ಅನ್ನ ಮಾಡಿಕೊಂಡು ಭರ್ಜರಿಯಾಗಿ ಊಟ ಮಾಡಲು ಎಲ್ಲ ರೆಡಿ ಮಾಡಿಕೊಂಡರು.
ಫಿಶಿಂಗ್ಗೆ ಹೋದಾಗ ಅಲ್ಲಿ ಬಹಳಷ್ಟು ಮೀನುಗಳು ಸಿಕ್ಕವು. ಇದರಿಂದ ಸುನಿಲ್ ತನ್ನ ಅಣ್ಣ ಸಂದೀಪ್ನನ್ನು ಕೂಡ ಪಾರ್ಟಿಗೆ ಬರುವಂತೆ ಆಹ್ವಾನಿಸಿದ. ಆಗ ಎಲ್ಲರೂ ಕುಳಿತು ಊಟ ಮಾಡುವಾಗ ಸಂದೀಪ್ ಇನ್ನೂ ಹೆಚ್ಚು ಫಿಶ್ ಕರಿ ಬೇಕೆಂದು ಹಠ ಹಿಡಿದ. ಆದರೆ, ಸಂದೀಪ್ ಅಡುಗೆಗೆ ಯಾವುದೇ ಸಹಾಯ ಮಾಡದ ಕಾರಣ ರಂಜಿತ್ ಹೆಚ್ಚು ಫಿಶ್ ಕರಿ ನೀಡಲು ಒಪ್ಪಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆಯಿತು.
ಈ ಅವಮಾನದಿಂದ ಸಂದೀಪ್ನ ಸೋದರ ಸುನಿಲ್ಗೆ ಬಹಳ ಕೋಪ ಬಂದು ಅಲ್ಲಿಂದ ಎದ್ದು ಹೋದ. ಆತ ಮನೆಗೆ ವಾಪಾಸ್ ಹೋಗುತ್ತಿರಬಹುದು ಎಂದು ಗೆಳೆಯರೆಲ್ಲ ಅಂದುಕೊಂಡರು. ಆದರೆ, ಕೋಪದಿಂದ ಕಾರು ಸ್ಟಾರ್ಟ್ ಮಾಡಿದ ಸುನಿಲ್ ರಂಜಿತ್ನನ್ನು ಕಾರಿನ ಕೆಳಗೆ ಬೀಳಿಸಿ ಆತನ ಮೇಲೆ ಕಾರು ಹತ್ತಿಸಿದ. ಇದರಿಂದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ. ಬಳಿಕ ಸುನಿಲ್ ಅಲ್ಲೇ ಕಾರನ್ನು ಬಿಟ್ಟು ಓಡಿಹೋದ. ಬಳಿಕ ಪೊಲೀಸರು ಸುನಿಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: Murder: ಪ್ರೀತಿಸಲು ಒಪ್ಪದ ವಿವಾಹಿತ ಮಹಿಳೆಯನ್ನು ಕೊಂದು, ಹೆಣವನ್ನು ತಬ್ಬಿ ಮಲಗಿದ ಪಾಗಲ್ ಪ್ರೇಮಿ!
Murder: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ; ಬೆಳ್ಳಿ ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು