Murder: ಪ್ರೀತಿಸಲು ಒಪ್ಪದ ವಿವಾಹಿತ ಮಹಿಳೆಯನ್ನು ಕೊಂದು, ಹೆಣವನ್ನು ತಬ್ಬಿ ಮಲಗಿದ ಪಾಗಲ್ ಪ್ರೇಮಿ!

Crime News : ರಾಜಸ್ಥಾನದ ಯುವಕ ತನ್ನನ್ನು ಪ್ರೀತಿಸಲು ಒಪ್ಪದ ವಿವಾಹಿತ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ನಂತರ ಆಕೆಯ ಶವವನ್ನು ತಬ್ಬಿ ಮಲಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Murder: ಪ್ರೀತಿಸಲು ಒಪ್ಪದ ವಿವಾಹಿತ ಮಹಿಳೆಯನ್ನು ಕೊಂದು, ಹೆಣವನ್ನು ತಬ್ಬಿ ಮಲಗಿದ ಪಾಗಲ್ ಪ್ರೇಮಿ!
ವಿವಾಹಿತ ಮಹಿಳೆಯನ್ನು ಕೊಂದ ಜಾಗ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 26, 2021 | 4:43 PM

ಜೈಪುರ: ವಿವಾಹಿತ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದ ಯುವಕ ಆಕೆಯ ಪ್ರೀತಿಯನ್ನು ಪಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದ. ಆದರೆ, ಆಕೆ ಆತನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ಆತ ತನಗೆ ಸಿಕ್ಕದ ಆ ಮಹಿಳೆ ಆಕೆಯ ಗಂಡನಿಗೂ ಸಿಗಬಾರದು ಎಂದು ಆಕೆಯನ್ನು ಕೊಂದು ಕತ್ತರಿಸಿದ್ದಾನೆ. ಬಳಿಕ ಆಕೆಯ ಶವವನ್ನು ತಬ್ಬಿ ನೆಲದ ಮೇಲೆ ಮಲಗಿದ್ದಾನೆ. ಈ ದೃಶ್ಯ ನೋಡಿದ ಜನರು ಶಾಕ್ ಆಗಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಅಹೋರ್ ಪ್ರದೇಶದಲ್ಲಿ ಈ ದುರಂತ ಘಟನೆ ನಡೆದಿದೆ. ಇಲ್ಲಿನ ಶಾಂತಿ ದೇವಿ ಎಂಬ ಮಹಿಳೆಗೆ ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದರು. ಆಕೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಅವರು ಕೆಲಸಕ್ಕೆ ಜೋಜಾವರ್ ನಾಡಿ ಎಂಬ ಊರಿಗೆ ಹೋಗಿದ್ದರು. ಆಗ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶಾಂತಿ ದೇವಿಯ ಬಳಿ ಬಂದ ಅದೇ ಗ್ರಾಮದ 21 ವರ್ಷದ ಗಣೇಶ್ ಮೀನಾ ಎಂಬಾತ ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದನು.

ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿ ಹೇಳಿ ಕಿರುಕುಳ ನೀಡುತ್ತಿದ್ದ ಗಣೇಶ್​ ವಿರುದ್ಧ ಕೋಪಗೊಂಡ ಶಾಂತಿ ದೇವಿ ನಾನು ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ, ನನಗೆ ಮದುವೆಯಾಗಿ ಮಕ್ಕಳಿದ್ದಾರೆ ಎಂದು ಬುದ್ಧಿ ಹೇಳಿದ್ದಾಳೆ. ಇದರಿಂದ ಕೆರಳಿದ ಗಣೇಶ್ ಕೊಡಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅವಳು ಕೊನೆಯುಸಿರೆಳೆಯುವವರೆಗೂ ಆಕೆಯ ದೇಹದ ಒಂದೊಂದೇ ಭಾಗವನ್ನು ಕತ್ತರಿಸುತ್ತಿದ್ದ ಆತ ತನ್ನನ್ನು ಮದುವೆಯಾಗುವಂತೆ ಗೋಗರೆದಿದ್ದಾನೆ. ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಆಕೆ ತನ್ನನ್ನು ಕಾಪಾಡುವಂತೆ ಜೋರಾಗಿ ಕೂಗಾಡಿದ್ದಾಳೆ.

ಆಕೆಯ ಕಿರುಚಾಟ ಕೇಳಿ ಸುತ್ತಮುತ್ತಲಿನ ಮನೆಯವರು ಆಕೆಯ ಮನೆಗೆ ಬರುವಷ್ಟರಲ್ಲಿ ಆಕೆ ನರಳಾಡುತ್ತಿದ್ದಳು. ಕೆಲವರು ಆಕೆಯನ್ನು ಉಳಿಸಲು ಮುಂದೆ ಹೋದಾಗ ಅವರನ್ನೂ ಕೊಲ್ಲುವುದಾಗಿ ಗಣೇಶ್ ಬೆದರಿಕೆ ಹಾಕಿದ್ದ. ಇದರಿಂದ ಎಲ್ಲರೂ ಹಿಂದೆ ಸರಿದರು. ಬಳಿಕ, ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ಗಣೇಶ್ ಆಕೆಯ ಹೆಣವನ್ನು ತಬ್ಬಿ ಅಲ್ಲೇ ಮಲಗಿದ್ದ. ಇದನ್ನು ನೋಡಿದ ಸುತ್ತಮುತ್ತಲಿನವರಿಗೆ ಆಘಾತವಾಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿದರೂ ಗಣೇಶ್ ತನ್ನ ಪ್ರೇಯಸಿಯ ಶವ ಬಿಡಲು ಒಪ್ಪಲಿಲ್ಲ. ಕೊನೆಗೆ ಆತನನ್ನು ಬಂಧಿಸಿ ವ್ಯಾನ್‌ನಲ್ಲಿ ಕರೆದುಕೊಂಡು ಹೋಗಲಾಯಿತು.

ಗಣೇಶನ ಒನ್​​ ಸೈಡೆಡ್ ಪ್ರೀತಿಯಿಂದ ಶಾಂತಿ ದೇವಿಯ ಪ್ರಾಣ ಹೋಗಿದ್ದು, ಈ ಭೀಕರ ಘಟನೆಯಿಂದ ಸುತ್ತಮುತ್ತಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಹಲವು ತಿಂಗಳುಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಗಣೇಶ್ ವಿರುದ್ಧ ಶಾಂತಿ ದೇವಿ ತನ್ನ ಪತಿ ಶಾಂತಿಲಾಲ್ ಚೌಧರಿ ಬಳಿ ಹೇಳಿಕೊಂಡಿದ್ದಳು. ಆಕೆಯ ಗಂಡ ಕೂಡ ಹಲವು ಬಾರಿ ಗಣೇಶ್‌ಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.

ಇದನ್ನೂ ಓದಿ: Murder: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ; ಬೆಳ್ಳಿ ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

Kerala Snake Bite Murder: ಹೆಂಡತಿಗೆ ಹಾವಿನಿಂದ ಕಚ್ಚಿಸಿ ಕೊಲೆ ಪ್ರಕರಣ; ಅಪರಾಧಿ​ಗೆ ಜೀವಾವಧಿ ಶಿಕ್ಷೆ ಪ್ರಕಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ