Online fraud: ಷೇರ್ ಮಾರ್ಕೆಟ್ನಲ್ಲಿ ಬಂಪರ್ ಲಾಭದ ಆಸೆ ತೋರಿಸಿ, ಆನ್ಲೈನ್ನಲ್ಲಿ ಸೈಬರ್ ದೋಖಾ
ಚಂದೂಲಾಲ್ ತಮ್ಮ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಚಂದೂಲಾಲ್ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ವಂಚಕನ ಮೋಡಸ್ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಸೈಬರ್ ಖದೀಮರು ಷೇರ್ ಮಾರ್ಕೆಟ್ನಲ್ಲಿ ಹಣ ಹೂಡಿದರೆ ಬಂಪರ್ ಲಾಭದ ತಂದುಕೊಡುವ ಆಸೆ ತೋರಿಸಿ, ಆನ್ಲೈನ್ನಲ್ಲಿ ಸೈಬರ್ ಮೋಸಾ ಮಾಡಿದ್ದಾರೆ. ಹೈದರಾಬಾದ್ನ ರಾಮನಗರ ನಿವಾಸಿ ಚಂದೂಲಾಲ್ ಚೌಧರಿ ಅವರ ವಾಟ್ಸಪ್ ನಂಬರಿಗೆ ವ್ಯಕ್ತಿಯೊಬ್ಬ ಮೆಸೆಜ್ ಕಳಿಸಿದ್ದಾನೆ. ಸಣ್ಣ ಮೊತ್ತದ ಹೂಡಿಕೆಯಿಂದಲೆ ಬಂಪರ್ ಲಾಭದ ತಂದುಕೊಡುವ ಆಮಿಷವೊಡ್ಡಿದ್ದಾನೆ. ಮತ್ತು ಇದರಲ್ಲಿ ಆಸಕ್ತಿಯಿದ್ದರೆ ತಾನುಕಳಿಸಿರುವ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ವಂಚಕ ಸೂಚಿಸಿದ್ದಾನೆ.
ಮೊದಲು ಚಂದೂಲಾಲ್ ತಮ್ಮ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಚಂದೂಲಾಲ್ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ವಂಚಕನ ಮೋಡಸ್ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಆದರೆ ಕ್ರಮೇಣ ತಾನು ಮೋಸ ಹೋಗಿರುವುದು ಚಂದೂಲಾಲ್ ಚೌಧರಿ ಅನುಭವಕ್ಕೆ ಬಂದಿದೆ. ಸೈಬರ್ ವಂಚಕನು ತನ್ನ ಲಕ್ಷಾಂತರ ರೂಪಾಯಿ ಹಣವನ್ನು ಸ್ವಾಹಾ ಮಾಡಿರುವುದು ಗೊತ್ತಾಗಿದೆ. ಆಗ ಚಂದೂಲಾಲ್ ಚೌಧರಿ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರ ಬಳಿ ಹೋಗಿ ತನಗೆ ಮೋಸವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನೈಸ್ ಮುಖ್ಯಸ್ಥ ಸೂಟ್ಕೇಸ್ ತಗೊಂಡು ದೇವೇಗೌಡ್ರ ಮನೆಗೆ ಬಂದಿದ್ರು |TV9Kannada
(Hyderabad man Chandulal Chowdhary duped lakhs of rupees in online fraud say Hyderabad Cyber crime officials )