AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttarakhand Rain: ಉತ್ತರಾಖಂಡದಲ್ಲಿ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 76ಕ್ಕೆ ಏರಿಕೆ; 14 ಜನ ಇನ್ನೂ ನಾಪತ್ತೆ

Uttarakhand Flood: ಮಳೆ, ಭೂಕುಸಿತದಿಂದ ಉತ್ತರಾಖಂಡದಲ್ಲಿ 76 ಜನರು ಸಾವನ್ನಪ್ಪಿದ್ದಾರೆ. ಕುಮಾನ್‌ನಲ್ಲಿ 59 ಜನರು ಮತ್ತು ಗರ್ವಾಲ್‌ನಲ್ಲಿ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ.

Uttarakhand Rain: ಉತ್ತರಾಖಂಡದಲ್ಲಿ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 76ಕ್ಕೆ ಏರಿಕೆ; 14 ಜನ ಇನ್ನೂ ನಾಪತ್ತೆ
ಉತ್ತರಾಖಂಡದಲ್ಲಿ ಮಳೆ
TV9 Web
| Edited By: |

Updated on: Oct 25, 2021 | 5:48 PM

Share

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಉತ್ತರಾಖಂಡ ಪೊಲೀಸರು ಮತ್ತು ಎಸ್‌ಡಿಆರ್‌ಎಫ್‌, ಎನ್​ಡಿಆರ್​ಎಫ್ ತಂಡಗಳಿಂದ 65,000 ಜನರನ್ನು ರಕ್ಷಿಸಲಾಗಿದೆ. ಉತ್ತರಾಖಂಡದಲ್ಲಿ ಮಳೆ, ಪ್ರವಾಹ, ಭೂಕುಸಿತದಿಂದ ಸಾವನ್ನಪ್ಪಿರುವವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಇನ್ನೂ 14 ಜನರು ನಾಪತ್ತೆಯಾಗಿದ್ದು, ಅವರ ಶವಗಳು ಪತ್ತೆಯಾಗಿಲ್ಲ.

ಉತ್ತರಾಖಂಡದಲ್ಲಿ ಅಕ್ಟೋಬರ್ 18ರಿಂದ ಮೂರ್ನಾಲ್ಕು ದಿನ ಸುರಿದ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗಿತ್ತು. ಹಾಗೇ, ಹಿಮಪಾತವೂ ಆದ ಕಾರಣ ಅನೇಕ ಚಾರಣಿಗರು ಸಿಲುಕಿದ್ದರು. ನೈನಿತಾಲ್ ಮುಂತಾದ ಪ್ರದೇಶಗಳಲ್ಲಿ ಭಾರೀ ಭೂಕುಸಿತ ಉಂಟಾಗಿ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭೂಕುಸಿತದಲ್ಲಿ ನಾಪತ್ತೆಯಾಗಿರುವ 14 ಜನರ ಪೈಕಿ 8 ಮಂದಿ ಚಾರಣಿಗರು ಕೂಡ ಇದ್ದಾರೆ. ಇವರೆಲ್ಲರೂ ಉತ್ತರಕಾಶಿ ಹಾಗೂ ಬಾಘೇಶ್ವರಕ್ಕೆ ಟ್ರೆಕಿಂಗ್ ಹೋಗಿದ್ದರು.

ಮಳೆಯ ಅಬ್ಬರ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ಸಿಕ್ಕಿದ್ದರಿಂದ 48,000 ಜನರನ್ನು ಮೊದಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿತ್ತು. ಪ್ರವಾಹ, ಭೂಕುಸಿತ ಹೆಚ್ಚಾದ ಪ್ರದೇಶಗಳಲ್ಲಿ ಸಿಲುಕಿದ್ದ 10,000 ಜನರನ್ನು ನಂತರ ರಕ್ಷಿಸಲಾಯಿತು. ಜೊತೆಗೆ ಕುಮಾವಾನ್‌ನಲ್ಲಿ 9,500 ಮತ್ತು ಗರ್ವಾಲ್‌ನಲ್ಲಿ 500 ಜೀವಗಳನ್ನು ಉಳಿಸಲಾಗಿದೆ.

ಮಳೆ, ಭೂಕುಸಿತದಿಂದ ಉತ್ತರಾಖಂಡದಲ್ಲಿ 76 ಜನರು ಸಾವನ್ನಪ್ಪಿದ್ದಾರೆ. ಕುಮಾನ್‌ನಲ್ಲಿ 59 ಜನರು ಮತ್ತು ಗರ್ವಾಲ್‌ನಲ್ಲಿ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೇ 33 ಜನರು ಗಾಯಗೊಂಡಿದ್ದಾರೆ. 14 ಜನರು ಇನ್ನೂ ನಾಪತ್ತೆಯಾಗಿದ್ದು, ಕೆಲವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಪಿಥೋರಘರ್ ಜಿಲ್ಲೆಯ ಗುಂಜಿ ಮತ್ತು ದರ್ಮ, ಬಾಗೇಶ್ವರ್ ಜಿಲ್ಲೆಯ ಪಿಂಡಾರಿ ಮತ್ತು ಉತ್ತರಕಾಶಿ ಜಿಲ್ಲೆಯ ಹರ್ಸಿಲ್‌ನ ಕೆಲವು ಸ್ಥಳಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಪ್ರಗತಿಯಲ್ಲಿವೆ ಎಂದು ಉತ್ತರಾಖಂಡದ ಡಿಜಿಪಿ ತಿಳಿಸಿದ್ದಾರೆ. ಹಾಗೇ, ಈ ದುರಂತದ ಸಮಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದವರಿಗೆ ಮುಂದಿನ ವರ್ಷ ಜನವರಿ 26ರಂದು ಅವರ ಕೆಲಸವನ್ನು ಮೆಚ್ಚಿ ಪದಕಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Uttarakhand Rain: ಉತ್ತರಾಖಂಡ್​ಗೆ ತೆರಳಿದ್ದ ಕರ್ನಾಟಕದ 60 ಜನ ಸುರಕ್ಷಿತ

Uttarakhand Rain: ಉತ್ತರಾಖಂಡದಲ್ಲಿ ಭೀಕರ ಮಳೆ; ಪ್ರವಾಹದಿಂದ 46 ಜನ ಸಾವು, 11 ಮಂದಿ ನಾಪತ್ತೆ