ಗೆಳತಿಯ ವಿವಾಹವಾಗಲು ಸೇನಾ ಕಮಾಂಡರ್ ಎಂದು ಪೋಸ್ ಕೊಟ್ಟು, ಜೈಲುಪಾಲಾದ ಕಾಲೇಜು ವಿದ್ಯಾರ್ಥಿ
ಪುಣೆ: ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಖಿಯನ್ನು ಮದುವೆಯಾಗಲು ಸೇನಾ ಕಮಾಂಡರ್ ಎಂದು ಹೇಳಿಕೊಂಡು ಜೈಲುಪಾಲಾಗಿದ್ದಾನೆ. ಪ್ರಕರಣದ ಸಂಬಂಧ ಅಗಮದ್ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ 20 ವರ್ಷದ ಮಹೇಶ್ ಜಗಪತ್ನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸೇನಾಧಿಕಾರಿಯಂತೆ ಪೋಸ್ ಕೊಟ್ಟಿದ್ದ ವಿದ್ಯಾರ್ಥಿ ಜಗಪತ್ನನ್ನು ಬಂಧಿಸುವಲ್ಲಿ ದಕ್ಷಿಣ ವಲಯದ ಸೇನಾ ಕಮಾಂಡ್ ಗುಪ್ತಚರ ಘಟಕ ಸಹ ನೆರವು ನೀಡಿದೆ. ಅಹಮದ್ ನಗರದ ರಾಹತಾ ತಾಲೂಕಿನ ಮಹೇಶ್ ಜಗಪತ್ ದ್ವಿತೀಯ ಬಿ ಕಾಂ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೇಶ್ ಜಗಪತ್ […]
ಪುಣೆ: ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಖಿಯನ್ನು ಮದುವೆಯಾಗಲು ಸೇನಾ ಕಮಾಂಡರ್ ಎಂದು ಹೇಳಿಕೊಂಡು ಜೈಲುಪಾಲಾಗಿದ್ದಾನೆ. ಪ್ರಕರಣದ ಸಂಬಂಧ ಅಗಮದ್ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ 20 ವರ್ಷದ ಮಹೇಶ್ ಜಗಪತ್ನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸೇನಾಧಿಕಾರಿಯಂತೆ ಪೋಸ್ ಕೊಟ್ಟಿದ್ದ ವಿದ್ಯಾರ್ಥಿ ಜಗಪತ್ನನ್ನು ಬಂಧಿಸುವಲ್ಲಿ ದಕ್ಷಿಣ ವಲಯದ ಸೇನಾ ಕಮಾಂಡ್ ಗುಪ್ತಚರ ಘಟಕ ಸಹ ನೆರವು ನೀಡಿದೆ.
ಅಹಮದ್ ನಗರದ ರಾಹತಾ ತಾಲೂಕಿನ ಮಹೇಶ್ ಜಗಪತ್ ದ್ವಿತೀಯ ಬಿ ಕಾಂ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೇಶ್ ಜಗಪತ್ ಅಹಮದ್ ನಗರದಲ್ಲಿ ದರ್ಜಿಯೊಬ್ಬನಿಂದ ಸೇನಾ ಸಮವಸ್ತ್ರವನ್ನು ಹೊಲಿಸಿಕೊಂಡಿದ್ದಾನೆ. ಅದಾದಮೇಲೆ ತಪ್ಪುತಪ್ಪಾಗಿ ಸೇನಾ ಗುರುತಿನ ಚೀಟಿಯನ್ನು ಮಾಡಿಸಿಕೊಂಡಿದ್ದಾನೆ. ಅದಕ್ಕೂ ಮುನ್ನ ಉದ್ಯೋಗ ನೇಮಕಾತಿ ಪತ್ರವನ್ನೂ ತಯಾರಿಸಿಕೊಂಡಿದ್ದಾನೆ.
ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡ ಮಹೇಶ್ ಜಗಪತ್, ತನ್ನ ಅಪ್ಪ-ಅಮ್ಮ ಮತ್ತು ಹತ್ತಿರದ ಸಂಬಂಧಿಗಳಿಗೆ ತಾನು ಅಧಿಕಾರಿಯಾಗಿ ಭಾರತೀಯ ಸೇನೆ ಸೇರಿದ್ದಾಗಿ ಹೇಳಿದ್ದಾನೆ. ಹೆಮ್ಮೆಯ ಸೇನೆ ಸೇರಿದ್ದಾಗಿ ಹೇಳಿಕೊಂಡು ಸಿಹಿಯನ್ನೂ ಸಹ ಹಂಚಿದ್ದಾನೆ. ಮುಂದೆ, ತಾನು ಸೇರಿಕೊಂಡಿರುವ ಸೇನಾ ಘಟಕದಲ್ಲಿ ಸಮವಸ್ತ್ರದಲ್ಲಿರುವ ಇತರೆ ಯೋಧರ ಫೋಟೋಗಳನ್ನು ಕಳಿಸುವಂತೆ ಮಹೇಶ್ ಜಗಪತ್ಗೆ ಆತನ ಪ್ರೇಯಸಿ ಕೋರಿದ್ದಾಳೆ.
ಮಹೇಶ್ ಜಗಪತ್ನ ಚಲನವಲನದ ಮೇಲೆ ಗುಮಾನಿಯಿಟ್ಟುಕೊಂಡಿದ್ದ ಸೇನಾಧಿಕಾರಿಗಳು ಆತನನ್ನು ಭಾನುವಾರ ವಿಚಾರಣೆಗಾಗಿ ಹಿಡಿದಿಟ್ಟುಕೊಂಡಿದ್ದಾರೆ. ಗುರುತಿನ ಚೀಟಿ, ನೇಮಕಾತಿ ಪತ್ರ ತೋರಿಸಿ ತಾನೂ ಸೇನಾಧಿಕಾರಿ ಎಂದು ಅಸಲಿ ಸೇನಾಧಿಕಾರಿಗಳ ಎದುರು ಬುರುಡೆ ಬಿಟ್ಟಿದ್ದಾನೆ. ಈ ಮಧ್ಯೆ, ಮಹೇಶ್ ಜಗಪತ್ ಒಬ್ಬ ನಕಲಿ ಸೇನಾಧಿಕಾರಿ ಎಂಬುದು ಖಚಿತಪಡಿಸಿಕೊಂಡ ಸೇನಾಧಿಕಾರಿಗಳು ಆತನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಾ, ವಶಕ್ಕೆ ತೆಗೆದುಕೊಂಡಿದ್ದಾರೆ. ಅದಾದ ಬಳಿಕ ಮಹೇಶ್ ಜಗಪತ್ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಡ ಕುಟುಂಬದ ಹಿನ್ನೆಲೆಯ ಮಹೇಶ್ ಜಗಪತ್ ತನ್ನ ವ್ಯಾಸಂಗ ಮುಂದುವರಿಸಲು ಸ್ಥಳೀಯವಾಗಿ ಖಾಸಗಿ ಕಂಪನಿಯೊಂದರಲ್ಲಿ ಕ್ಲರ್ಕ್ ಆಗಿ ಉದ್ಯೋಗ ಮಾಡಿಕೊಂಡಿದ್ದ. ಆತನ ಮಾತಾಪಿತರು ಕೃಷಿಕ ಕುಟುಂಬದವರು. ಆದರೆ ಯುವತಿಯೊಬ್ಬಳ ಪ್ರೇಮ ಪಾಶಕ್ಕೆ ಬಿದ್ದು ನಕಲಿ ಸೇನಾಧಿಕಾರಿ ಎಂದು ಪರಿಚಯಿಸಿಕೊಂಡು ಇದೀಗ ಜೈಲುಪಾಲಾಗಿದ್ದಾನೆ.
Jodi Hakki Serial Actor ಚೈತ್ರಾ ರಾವ್ ಟಾಮ್ ಆ್ಯಂಡ್ ಜೆರಿ ಬಗ್ಗೆ ಹೇಳಿದ್ದೇನು? |TV9Kannada
(Mahesh Jagtap college student in Ahmednagar Pune was arrested on charge of posing as army officer )