ಹೆಂಡತಿ-ಅತ್ತೆ ಜೊತೆ ಜಗಳವಾಡಿ, ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತ ಕುಡುಕ ಪತಿ! ದಂಪತಿಗೆ ಮೂವರು ಮಕ್ಕಳು

3 ತಿಂಗಳಿಂದ ತವರು ಮನೆ ಸೇರಿದ್ದ ಹೆಂಡತಿಯನ್ನು ತವರು ಮನೆಯಿಂದ ಕರೆತರಲು ಪತಿ ಪಬುರಾಮ್​ ತನ್ನ ಮಾವನ ಊರಿಗೆ ಹೋಗಿದ್ದ. ಅಲ್ಲಿ ಹೆಂಡತಿ ಮತ್ತು ಅತ್ತೆಯ ಜೊತೆ ಜಗಳ ಶುರುವಾಗಿದೆ. ಅದಾಗುತ್ತಿದ್ದಂತೆ ಆತ ಶರಾಬು ಕುಡಿದಿದ್ದಾನೆ. ಅದೇ ಕೋಪದಲ್ಲಿ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತಿದ್ದಾನೆ. ಘಟನೆ ನಡೆದಾಗ ಮನಯೆಲ್ಲಿ ಪಬುರಾಮ್​ ಮಾವ ಇರಲಿಲ್ಲ ಎಂದು ತಿಳಿದುಬಂದಿದೆ.

ಹೆಂಡತಿ-ಅತ್ತೆ ಜೊತೆ ಜಗಳವಾಡಿ, ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತ ಕುಡುಕ ಪತಿ! ದಂಪತಿಗೆ ಮೂವರು ಮಕ್ಕಳು
ಘೋರ ಸುದ್ದಿ: ಅಕ್ರಮ ವಿದ್ಯುತ್​ಗೆ ರೈತ ಬಲಿ; ಅದಕ್ಕೆ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನನ್ನು ಹೊಡೆದು ಸಾಯಿಸಿದ ಸ್ಥಳೀಯರು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 25, 2021 | 5:36 PM

ಜೈಸಲ್ಮೇರ್, ರಾಜಸ್ಥಾನ: ಕುಡುಕ ಪತಿಯೊಬ್ಬ ತನ್ನ ಹೆಂಡತಿಯ ಜೊತೆ ಜಗಳ ಮಾಡಿಕೊಂಡು ಹೋಗಿ ಸಮೀಪದ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಇಹಲೋಕ ಯಾತ್ರೆ ತ್ಯಜಿಸಿದ್ದಾನೆ! ಇಲ್ಲಿನ ಬರ್ಮರ್ ಗ್ರಾಮೀಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಯುವಕನೊಬ್ಬ ತನ್ನ ಪತ್ನಿ ಮತ್ತು ಅತ್ತೆ ಜೊತೆ ಗಂಭೀರವಾಗಿ ಜಗಳವಾಡಿಕೊಂಡು ಅದೇ ಗುಂಗಿನಲ್ಲಿ ಸಮೀಪದ ವಿದ್ಯುತ್​ ಕಂಬಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದಾನೆ.

ದಂಪತಿಗೆ ಮೂವರು ಮಕ್ಕಳು: ಘಟನೆಯ ಬಳಿಕ ಸ್ಥಳೀಯ ಪೊಲೀಸರು ಪಬುರಾಮ್​ ಎಂಬ ಯುವಕನ ಶವ ಪರೀಕ್ಷೆ ನಡೆಸಿ, ದೇಹವನ್ನುಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಪಬುರಾಮ್​ ಹಾಪೋಂ ಕಿ ಧಣಿ ಪ್ರದೇಶದಲ್ಲಿ ವಾಸವಾಗಿದ್ದ. ಆರು ವರ್ಷ ಹಿಂದೆ ಆತ ದರುಡಾ ಗ್ರಾಮದ ಧೂಡಿ ದೇವಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಮದುವೆಯ ಬಳಿಕ ದಂಪತಿಗೆ ಮೂವರು ಮಕ್ಕಳು ಇದ್ದರು.

ಕಳೆದ 2-3 ತಿಂಗಳಿಂದ ತವರು ಮನೆ ಸೇರಿದ್ದ ಹೆಂಡತಿಯನ್ನು ತವರು ಮನೆಯಿಂದ ಕರೆತರಲು ಪತಿ ಪಬುರಾಮ್​ ತನ್ನ ಮಾವನ ಊರಿಗೆ ಹೋಗಿದ್ದ. ಅಲ್ಲಿ ಹೆಂಡತಿ ಮತ್ತು ಅತ್ತೆಯ ಜೊತೆ ಜಗಳ ಶುರುವಾಗಿದೆ. ಅದಾಗುತ್ತಿದ್ದಂತೆ ಆತ ಶರಾಬು ಕುಡಿದಿದ್ದಾನೆ. ಅದೇ ಕೋಪದಲ್ಲಿ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತಿದ್ದಾನೆ. ಘಟನೆ ನಡೆದಾಗ ಮನಯೆಲ್ಲಿ ಪಬುರಾಮ್​ ಮಾವ ಇರಲಿಲ್ಲ ಎಂದು ತಿಳಿದುಬಂದಿದೆ.

ಕೊನೆಗೆ, ಅಕ್ಕಪಕ್ಕದವರು ವಿದ್ಯುತ್​ ಕಂಬದಲ್ಲಿ ನೇತಾಡುತ್ತಿದ್ದ ಪಬುರಾಮ್​ ಶವವನ್ನು ನೋಡಿ, ಆತನ ಪತ್ನಿಗೆ ಮಾಹಿತಿ ನೀಡಿದ್ದಾರೆ. ಘಟನೆ ವರದಿಯಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಪ್ರಕರಣನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿರುವುದಾಗಿ ಠಾಣಾಧಿಕಾರಿ ಪರಬತ್ ಸಿಂಗ್​ ತಿಳಿಸಿದ್ದಾರೆ.

(Drunk Man Argue With Wife and Mother in-law in Barmer in Jaisalmer in Rajasthan Ends Life by Hanging Self From Electricity Tower)

Published On - 5:35 pm, Mon, 25 October 21

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ