Mysore News: 37 ವರ್ಷ ಆದ್ರೂ ಮದ್ವೆ ಆಗಿಲ್ಲ, ನಿಂಗೆ ಯಾರೂ ಹುಡುಗಿ ಕೊಡಲ್ಲಾಂತ ಕಿಚಾಯಿಸಿದವನ ಕೊಲೆ

| Updated By: Rakesh Nayak Manchi

Updated on: Jan 10, 2023 | 7:39 AM

ನಿನಗೆ 37 ವರ್ಷ ಆಯ್ತು, ನಿಂಗೆ ಯಾರೂ ಹುಡುಗಿ ಕೊಡಲ್ಲ ಅಂತಾ ಕಿಚಾಯಿಸಿದ ವ್ಯಕ್ತಿಯನ್ನು ಸ್ನೇಹಿತನೇ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

Mysore News: 37 ವರ್ಷ ಆದ್ರೂ ಮದ್ವೆ ಆಗಿಲ್ಲ, ನಿಂಗೆ ಯಾರೂ ಹುಡುಗಿ ಕೊಡಲ್ಲಾಂತ ಕಿಚಾಯಿಸಿದವನ ಕೊಲೆ
ಸಾಂದರ್ಭಿಕ ಚಿತ್ರ
Follow us on

ಮೈಸೂರು: ಮದ್ಯ ಸೇವನೆ ಮಾಡಿದ ನಂತರ ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಸ್ನೇಹಿತರ ನಡುವಿನ ಜಗಳ ಓರ್ವನ ಕೊಲೆಯಲ್ಲಿ (Murder of friend in Mysore) ಅಂತ್ಯಗೊಂಡ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕು ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ. ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ (48) ಕೊಲೆಯಾದ ವ್ಯಕ್ತಿ. ಸಣ್ಣಸ್ವಾಮಿ ನಾಯಕನ ಸ್ನೇಹಿತನೇ ಆಗಿರುವ ಕುಮಾರ ನಾಯಕ ಈ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸಣ್ಣಸ್ವಾಮಿ ನಾಯಕ ಮತ್ತು ಕುಮಾರ ನಾಯಕ ಸ್ನೇಹಿತರಾಗಿದ್ದಾರೆ. ಹರವೆ ಗ್ರಾಮದಲ್ಲಿ ಇವರಿಬ್ಬರು ಸೇವೆ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಅಮಲೇರಿದಾಗ ಸಣ್ಣಸ್ವಾಮಿ ನಾಯಕ ಕುಮಾರನನ್ನು ಕಿಚಾಯಿಸಲು ಆರಂಭಿಸಿದ್ದಾನೆ. ನಿನಗೆ 37 ವರ್ಷವಾದರೂ ಮದುವೆಯಾಗಿಲ್ಲ. ನಿನಗೆ ಯಾರೂ ಹುಡುಗಿ ಕೊಡುತ್ತಿಲ್ಲ ಅಂತಾ ಸಣ್ಣಸ್ವಾಮಿ ನಾಯಕ ಕಿಚಾಯಿಸಿದ್ದಾನೆ.

ತನ್ನ ವೈಯಕ್ತಿ ವಿಚಾರದಲ್ಲಿ ಕಿಚಾಯಿಸಿದ ಹಿನ್ನಲೆ ಕುಪಿತಗೊಂಡ ಕುಮಾರ ನಾಯಕ ಸಣ್ಣಸ್ವಾಮಿ ನಾಯಕನೊಂದಿಗೆ ಮಾತಿಗೆ ಇಳಿದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವೇ ನಡೆದಿದೆ. ಅದರಂತೆ ಚಾಕು ಕೈಗೆತ್ತಿಕೊಂಡ ಕುಮಾರ ನಾಯಕ, ಸಣ್ಣಸ್ವಾಮಿ ನಾಯಕನಿಗೆ ಇರಿದಿದ್ದಾನೆ. ಪರಿಣಾಮ ಸಣ್ಣಸ್ವಾಮಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರಿನಲ್ಲಿ ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು

ತುಮಕೂರು: ಎರಡು ಬೈಕ್​​ಗಳಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ (Accident in Tumakuru) ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಬಂಡಿಹಳ್ಳಿ ಗೇಟ್ ಬಳಿ ನಡೆದಿದೆ. ಹಣ್ಣೆಮನೆಯಲ್ಲಿ ಗ್ರಾಮದ ನಿವಾಸಿ ಲಿಂಗರಾಜು (35) ಮೃತ ದುರ್ದೈವಿಯಾಗಿದ್ದು, ಇದೇ ಗ್ರಾಮದ ಮತ್ತೊಬ್ಬ ಬೈಕ್ ಸವಾರ ಗಂಗಾಧರ್ (41) ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇವರನ್ನು ಬೆಂಗಳೂರಿನ ನಿಮಾನ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರಿಚಿತ ಲಾರಿಯೊಂದು ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮನೆಯ ಮುಂದೆ ಸಿಲಿಂಡರ್ ಕದ್ದ ಆರೋಪಿ ಬಂಧನ

ಬೆಂಗಳೂರು: ಮನೆಯ ಮುಂದೆ ಸಿಲಿಂಡರ್ ಕಳವು (Cylinder Theft) ಮಾಡುತ್ತಿದ್ದ ಆರೋಪಿಯನ್ನು ಸಿದ್ದಾಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಿಕ್ ಪಾಷ ಬಂಧಿತ ಆರೋಪಿಯಾಗಿದ್ದು, ಈತನಿಂದ 8 ಸಿಲಿಂಡರ್ ಹಾಗೂ 500 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಒಂದೇ ತಿಂಗಳಲ್ಲಿ ಎಂಟು‌ ಸಿಲಿಂಡರ್​ಗಳು ಕಳವಾದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 am, Tue, 10 January 23