ದೀಪಿಕಾ ಪಡುಕೋಣೆ ಮ್ಯಾನೇಜರ್ ಮನೆಯಲ್ಲಿ ಡ್ರಗ್ಸ್ ಪತ್ತೆ, ಆಕೆ ನಾಪತ್ತೆ!

|

Updated on: Oct 27, 2020 | 9:31 PM

ಸುಪ್ರಸಿದ್ಧ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮನೆಯಿಂದ ಮಾದಕವಸ್ತು ನಿಯಂತ್ರಣ ಸಂಸ್ಥೆಯ (ಎನ್​ಸಿಬಿ) ಅಧಿಕಾರಿಗಳು ಡ್ರಗ್ಸ್ ವಶಪಡಿಸಿಕೊಂಡಿದ್ದು, ನಾಪತ್ತೆಯಾಗಿರುವ ಆಕೆಗೆ ತಮ್ಮೆದುರು ಹಾಜರಾಗುವಂತೆ ನೊಟೀಸು ಜಾರಿ ಮಾಡಿದ್ದಾರೆ. ಕರಿಷ್ಮಾ ಮನೆಯಲ್ಲಿರದ ಕಾರಣ ಮನೆಬಾಗಿಲಿಗೆ ನೊಟೀಸನ್ನು ಅಂಟಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಆಕೆಯ ಮನೆಯಲ್ಲಿ ಕೆಲ ಬಗೆಯ ಡ್ರಗ್ಸ್ ಅಲ್ಪ ಪ್ರಮಾಣದಲ್ಲಿ ದೊರೆತಿವೆ. ಎನ್​ಸಿಬಿ, ನೊಟೀಸಿನ ಜೊತೆಗೆ ಸಮನ್ಸ್ ಕೂಡ ಜಾರಿಮಾಡಿದೆ. ಕೆಲ ಬಂಧಿತ ಡ್ರಗ್ ಪೆಡ್ಲರ್​ಗಳು ವಿಚಾರಣೆಯ ವೇಲೆ ಕರಿಷ್ಮಾಳ […]

ದೀಪಿಕಾ ಪಡುಕೋಣೆ ಮ್ಯಾನೇಜರ್ ಮನೆಯಲ್ಲಿ ಡ್ರಗ್ಸ್ ಪತ್ತೆ, ಆಕೆ ನಾಪತ್ತೆ!
Follow us on

ಸುಪ್ರಸಿದ್ಧ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮನೆಯಿಂದ ಮಾದಕವಸ್ತು ನಿಯಂತ್ರಣ ಸಂಸ್ಥೆಯ (ಎನ್​ಸಿಬಿ) ಅಧಿಕಾರಿಗಳು ಡ್ರಗ್ಸ್ ವಶಪಡಿಸಿಕೊಂಡಿದ್ದು, ನಾಪತ್ತೆಯಾಗಿರುವ ಆಕೆಗೆ ತಮ್ಮೆದುರು ಹಾಜರಾಗುವಂತೆ ನೊಟೀಸು ಜಾರಿ ಮಾಡಿದ್ದಾರೆ.

ಕರಿಷ್ಮಾ ಮನೆಯಲ್ಲಿರದ ಕಾರಣ ಮನೆಬಾಗಿಲಿಗೆ ನೊಟೀಸನ್ನು ಅಂಟಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಆಕೆಯ ಮನೆಯಲ್ಲಿ ಕೆಲ ಬಗೆಯ ಡ್ರಗ್ಸ್ ಅಲ್ಪ ಪ್ರಮಾಣದಲ್ಲಿ ದೊರೆತಿವೆ. ಎನ್​ಸಿಬಿ, ನೊಟೀಸಿನ ಜೊತೆಗೆ ಸಮನ್ಸ್ ಕೂಡ ಜಾರಿಮಾಡಿದೆ.

ಕೆಲ ಬಂಧಿತ ಡ್ರಗ್ ಪೆಡ್ಲರ್​ಗಳು ವಿಚಾರಣೆಯ ವೇಲೆ ಕರಿಷ್ಮಾಳ ಹೆಸರನ್ನು ಉಲ್ಲೇಖಿಸಿದ್ದರಿಂದ ಎನ್​ಸಿಬಿ ಆಕೆಯ ಮನೆ ಮೇಲೆ ದಾಳಿ ನಡೆಸಿತು. ಸಂಸ್ಥೆಯು ಈಗಾಗಲೇ ಆಕೆಯ ವಿಚಾರಣೆಯನ್ನು ಒಮ್ಮೆ ನಡೆಸಿದೆ. ಸಂಸ್ಥೆಯ ಮೂಲಗಳ ಪ್ರಕಾರ ಕರಿಷ್ಮಾ, ದೀಪಿಕಾ ಪಡುಕೋಣೆಯೊಂದಿಗೆ ವಾಟ್ಸ್ಯಾಪ್​ನಲ್ಲಿ ಚ್ಯಾಟ್ ಮಾಡುವಾಗ ಡ್ರಗ್ಸ್ ಬಗ್ಗೆ ಉಲ್ಲೇಖಿಸಿದ್ದಾಳೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಬಾಲಿವುಡ್ ಜೊತೆ ಡ್ರಗ್ಸ್ ನಂಟು ಹೊರಬಿದ್ದಿದೆ.

ಎನ್​ಸಿಬಿ ಅಧಿಕಾರಿಗಳು ಒಮ್ಮೆ ದೀಪಿಕಾರ ವಿಚಾರಣೆ ಕೂಡ ನಡೆಸಿದ್ದಾರೆ. ಆಕೆಯಲ್ಲದೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರನ್ನೂ ಪ್ರಶ್ನಿಸಲಾಗಿದೆ.

2017ರಲ್ಲಿ ಕರಿಷ್ಮಾ ಮತ್ತು ದೀಪಿಕಾ ನಡುವೆ ನಡೆದಿರುವ ಚ್ಯಾಟ್​ಗಳಲ್ಲಿ ಮಾಲ್, ವೀಡ್, ಹ್ಯಾಷ್, ಡೂಬ್ ಮೊದಲಾದ ಪದಗಳ ಬಳಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.