AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MDMA ಡ್ರಗ್ಸ್ ಮಾತ್ರೆ ಖರೀದಿಸಲು ಬಿಟ್​ಕಾಯಿನ್​ ಬಳಕೆ -NCB ಬಿಚ್ಚಿಟ್ಟ ರೋಚಕ ಮಾಹಿತಿ

ಬೆಂಗಳೂರು: ನಗರದಲ್ಲಿ ಭಾರಿ ಡ್ರಗ್ಸ್​ ಜಾಲ ಪತ್ತೆಯಾಗಿದ್ದು ಇದೀಗ ಕೆಲವು ಪ್ರಮುಖ ಸಂಗೀತಗಾರರು ಹಾಗೂ, ನಟ-ನಟಿಯರ ಮೇಲೆ NCB ಕಣ್ಣು ಇಟ್ಟಿದೆ. ಜೊತೆಗೆ, ಡ್ರಗ್ಸ್ ಜಾಲದಲ್ಲಿ ಸಿಲುಕಿರುವವರ ಬಗ್ಗೆ ತನಿಖೆ ಸಹ ನಡೆಸುತ್ತಿದೆ. ಕಲ್ಯಾಣನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ MDMA ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆದ NCBಗೆ ಇದೀಗ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೆ 96 MDMA ಮಾತ್ರೆಗಳ ಪತ್ತೆಯಾಗಿದೆ. ಪ್ರಕರಣದ ಹಿಂದೆ ಮುಖ್ಯ ಆರೋಪಿ ಅನಿಕಾ D ಈ […]

MDMA ಡ್ರಗ್ಸ್ ಮಾತ್ರೆ ಖರೀದಿಸಲು ಬಿಟ್​ಕಾಯಿನ್​ ಬಳಕೆ -NCB ಬಿಚ್ಚಿಟ್ಟ ರೋಚಕ ಮಾಹಿತಿ
KUSHAL V
|

Updated on:Aug 27, 2020 | 2:11 PM

Share

ಬೆಂಗಳೂರು: ನಗರದಲ್ಲಿ ಭಾರಿ ಡ್ರಗ್ಸ್​ ಜಾಲ ಪತ್ತೆಯಾಗಿದ್ದು ಇದೀಗ ಕೆಲವು ಪ್ರಮುಖ ಸಂಗೀತಗಾರರು ಹಾಗೂ, ನಟ-ನಟಿಯರ ಮೇಲೆ NCB ಕಣ್ಣು ಇಟ್ಟಿದೆ. ಜೊತೆಗೆ, ಡ್ರಗ್ಸ್ ಜಾಲದಲ್ಲಿ ಸಿಲುಕಿರುವವರ ಬಗ್ಗೆ ತನಿಖೆ ಸಹ ನಡೆಸುತ್ತಿದೆ.

ಕಲ್ಯಾಣನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ MDMA ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆದ NCBಗೆ ಇದೀಗ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೆ 96 MDMA ಮಾತ್ರೆಗಳ ಪತ್ತೆಯಾಗಿದೆ. ಪ್ರಕರಣದ ಹಿಂದೆ ಮುಖ್ಯ ಆರೋಪಿ ಅನಿಕಾ D ಈ ಡ್ರಗ್ಸ್ ಜಾಲದ ಕಿಂಗ್‌ಪಿನ್ ಎಂದು NCBಮಾಹಿತಿ ನೀಡಿದೆ. ಹೀಗಾಗಿ, ಮಹಿಳೆಯ ದೊಡ್ಡಗುಬ್ಬಿ ಮನೆಯ ಮೇಲೂ NCB ದಾಳಿ ನಡೆಸಿದ್ದು ಆಕೆಯ ಮನೆಯಿಂದ 270 MDMA ಮಾತ್ರೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

ಪ್ರಾಥಮಿಕ ತನಿಖೆಯ ವೇಳೆ ಸಮಾಜದ ಪ್ರಮುಖ ವ್ಯಕ್ತಿಗಳು, ಪ್ರಭಾವಿಗಳು, ಸಂಗೀತಗಾರರು, ನಟರು ಮತ್ತು ವಿದ್ಯಾರ್ಥಿಗಳ ಕೈವಾಡ ಪತ್ತೆಯಾಗಿದ್ದು ಈ ಪ್ರಕರಣದಲ್ಲಿ ಇನ್ನೂ ಕೆಲವು ವ್ಯಕ್ತಿಗಳ ಬಂಧನದ ಸಾಧ್ಯತೆಯಿದೆ ಎಂದು NCB ಬೆಂಗಳೂರಿನ ಉಪನಿರ್ದೇಶಕ KPS ಮಲ್ಹೋತ್ರಾ ಹೇಳಿಕೆ ನೀಡಿದ್ದಾರೆ.

ಆಗಸ್ಟ್ ತಿಂಗಳ ಆರಂಭದಲ್ಲಿ ಕೆ.ರೆಹಮಾನ್ ಎಂಬಾತನನ್ನು ಬಂಧಿಸಿದ್ದ NCB ಈತ MDMA ಸೇರಿ ಇತರೆ ಡ್ರಗ್ಸ್ ವಿದ್ಯಾರ್ಥಿಗಳಿಗೆ ಮಾರುತ್ತಿದ್ದ ಎಂದು KPS ಮಲ್ಹೋತ್ರಾ ತಿಳಿಸಿದ್ದಾರೆ. ಜೊತೆಗೆ, MDMA ಮಾತ್ರೆಗಳ ಬದಲಿಗೆ ಗ್ರಾಹಕರಿಂದ ಬಿಟ್​ ಕಾಯಿನ್​ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.

ಈ ಮಾತ್ರೆಗಳನ್ನು ರೇವ್​ ಪಾರ್ಟಿಗಳಲ್ಲಿ ಬಳಸಲಾಗುತ್ತಿದ್ದು ಇದರ ಸೇವನೆಯಿಂದ ಜನರಲ್ಲಿ ಶಕ್ತಿ ಹೆಚ್ಚಾದಂತೆ ಭಾಸವಾಗುತ್ತದೆ ಹಾಗೂ ಖುಷಿ ಸಿಕ್ಕಿರುವ ಅನುಭವದಲ್ಲಿ ಇರುತ್ತಾರೆಂ. MDMAಯ ಒಂದು ಮಾತ್ರೆಗೆ 1,500ರಿಂದ 2 ಸಾವಿರ ರೂಪಾಯಿ ಬೆಲೆ ಇದೆ ಎಂದು NCB ಬೆಂಗಳೂರಿನ ಉಪನಿರ್ದೇಶಕ KPS ಮಲ್ಹೋತ್ರಾ ಹೇಳಿಕೆ ನೀಡಿದ್ದಾರೆ.

Published On - 2:03 pm, Thu, 27 August 20

Follow Us
KUSHAL V
KUSHAL V
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!