ಎಲ್ಲೆ ಮೀರಿದ ನೈಜೀರಿಯ ಪ್ರಜೆಗಳ ಹಾವಳಿ, ATMಗೂ ಕೈಹಾಕಿದ್ದಾರೆ!

|

Updated on: Dec 03, 2019 | 1:32 PM

ಬೆಂಗಳೂರು: ನಗರದಲ್ಲಿ ನೈಜೀರಿಯ ಪ್ರಜೆಗಳ ಹಾವಳಿ ಮಿತಿಮೀರಿದೆ. ದೇಶ ಬಿಟ್ಟು ದೇಶಕ್ಕೆ ಬಂದಿರುವ ವಿದೇಶಿಗರಿಗೆ ಇಲ್ಲಿ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ಡ್ರಗ್ಸ್​ ಸೇರಿದಂತೆ ಹಲವು ದಂಧೆಗಳಲ್ಲಿ ತೊಡಗಿದ್ದಾರೆ. ಇದೂ ಸಾಲದು ಅಂತಾ ಖರ್ಚಿಗಾಗಿ ATMಗೂ ಕೈಹಾಕಿದ್ದಾರೆ! ನೈಜೀರಿಯ ಪ್ರಜೆಗಳು ಎಂಟಿಎಂ ಮಷಿನ್​ಗೆ ಸ್ಕಿಮ್ಮರ್ ಡಿವೈಸ್ ಅಳವಡಿಸಿ ಮತ್ತೊಂದು ದಂಧೆಗೆ ಕೈಹಾಕಿರೋದು ಬೆಳಕಿಗೆ ಬಂದಿದೆ. ಕ್ಯಾಮರಾ ಸಹಾಯದಿಂದ ಪಾಸ್​ವರ್ಡ್ ​ಕದಿಯುತ್ತಿದ್ರು: ನ.13ರಂದು ನ್ಯೂ ಬಿಇಎಲ್ ಬಳಿಯ ಎಂಇಎಸ್ ರಸ್ತೆ ಸಮೀಪದ ಎಸ್​ಬಿಐ ಎಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸಿದ್ದಾರೆ. […]

ಎಲ್ಲೆ ಮೀರಿದ ನೈಜೀರಿಯ ಪ್ರಜೆಗಳ ಹಾವಳಿ, ATMಗೂ ಕೈಹಾಕಿದ್ದಾರೆ!
Follow us on

ಬೆಂಗಳೂರು: ನಗರದಲ್ಲಿ ನೈಜೀರಿಯ ಪ್ರಜೆಗಳ ಹಾವಳಿ ಮಿತಿಮೀರಿದೆ. ದೇಶ ಬಿಟ್ಟು ದೇಶಕ್ಕೆ ಬಂದಿರುವ ವಿದೇಶಿಗರಿಗೆ ಇಲ್ಲಿ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ಡ್ರಗ್ಸ್​ ಸೇರಿದಂತೆ ಹಲವು ದಂಧೆಗಳಲ್ಲಿ ತೊಡಗಿದ್ದಾರೆ. ಇದೂ ಸಾಲದು ಅಂತಾ ಖರ್ಚಿಗಾಗಿ ATMಗೂ ಕೈಹಾಕಿದ್ದಾರೆ! ನೈಜೀರಿಯ ಪ್ರಜೆಗಳು ಎಂಟಿಎಂ ಮಷಿನ್​ಗೆ ಸ್ಕಿಮ್ಮರ್ ಡಿವೈಸ್ ಅಳವಡಿಸಿ ಮತ್ತೊಂದು ದಂಧೆಗೆ ಕೈಹಾಕಿರೋದು ಬೆಳಕಿಗೆ ಬಂದಿದೆ.

ಕ್ಯಾಮರಾ ಸಹಾಯದಿಂದ ಪಾಸ್​ವರ್ಡ್ ​ಕದಿಯುತ್ತಿದ್ರು:
ನ.13ರಂದು ನ್ಯೂ ಬಿಇಎಲ್ ಬಳಿಯ ಎಂಇಎಸ್ ರಸ್ತೆ ಸಮೀಪದ ಎಸ್​ಬಿಐ ಎಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸಿದ್ದಾರೆ. ATM ಡಾಟಾ ಮತ್ತು ಕ್ಯಾಮರಾ ಸಹಾಯದಿಂದ ಗ್ರಾಹಕರ ಪಾಸ್​ವರ್ಡ್​ ಕಳ್ಳತನ ಮಾಡುತ್ತಿದ್ರು. ಥಾಮಸ್ ಎಂಬುವರು ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಜಾಲಹಳ್ಳಿ ಪೊಲೀಸರು ಸ್ಕಿಮ್ಮರ್ ಮತ್ತು ಕ್ಯಾಮರಾ ವಶಪಡಿಸಿಕೊಂಡಿದ್ದಾರೆ. ನೈಜೀರಿಯನ್ ಪ್ರಜೆಗಳು ಸ್ಕಿಮ್ಮರ್ ಅಳವಡಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಭದ್ರತೆ ಲೋಪದ ಬಗ್ಗೆ ಬ್ಯಾಂಕ್​ ಸಿಬ್ಬಂದಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.