ಬೆಂಗಳೂರು: ನಗರದ ಈಶಾನ್ಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೆದ್ದರಿಯಲ್ಲಿ ಸಂಚರಿಸುವವರನ್ನ ದರೋಡೆ ಮಾಡುತ್ತಿದ್ದ ಎರಡು ಪ್ರತ್ಯೇಕ ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಈಶಾನ್ಯ ಹಾಗೂ ಉತ್ತರ ವಿಭಾಗದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಕುಡಿದ ಮತ್ತಿನಲ್ಲಿ ದರೋಡೆಗಿಳಿಯುತ್ತಿದ್ದ ಕುಖ್ಯಾತ ಶಾಸ್ತ್ರಿ ಗ್ಯಾಂಗ್ ಸಹ ಬಂಧನವಾಗಿದ್ದು, ಗ್ಯಾಂಗ್ ಸದಸ್ಯರಾದ ಶ್ರೀಪಾದ ಶಾಸ್ತ್ರಿ, ವಿನ್ಸೆಂಟ್ ಬಾಬು, ಆಕಾಶ್ ನಾಯ್ಡು ಎಂಬುವವರನ್ನು ಬಂಧಿಸಲಾಗಿದೆ. ಕುಡಿದ ಅಮಲಿನಲ್ಲಿ ಸಾರ್ವಜನಿಕರನ್ನ ಆರೋಪಿಗಳು ದರೋಡೆ ಮಾಡುತ್ತಿದ್ದರು. ಬಂಧಿತರಿಂದ 1 ಲಕ್ಷದ 50 ಸಾವಿರ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.