ಬೆಂಗಳೂರು: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಕುಖ್ಯಾತ ದರೋಡೆಕೋರ ಹಾಗೂ ರೌಡಿಶೀಟರ್ ಕುಣಿಗಲ್ ಗಿರಿ ಬಂಧನವಾಗಿದೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ಗಿರಿ ಬಂಧನವಾಗಿದೆ. ಕಳೆದ ತಿಂಗಳು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮಂಜುನಾಥ್ ಎಂಬಾತನ ಕೊಲೆ ಕೇಸ್‌ನಲ್ಲಿ ಕುಣಿಗಲ್ ಗಿರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಂದ ಹಾಗೆ, ಪೊಲೀಸರು ಕುಣಿಗಲ್ ಗಿರಿ ಬಂಧನಕ್ಕೆ ತೆರಳಿದ್ದಾಗ ರೌಡಿಶೀಟರ್ ನಾಮಿನೇಷನ್ ಹಾಕಲು ತಯಾರಿ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಆದರೆ ಇದೀಗ, ಚುನಾವಣಾ ಮೂಡ್‌ನಲ್ಲಿದ್ದ ರೌಡಿಶೀಟರ್ ಗಿರಿಗೆ ಖಾಕಿ ಪಡೆ ಶಾಕ್ ಕೊಟ್ಟಿದೆ. ಅಂದ ಹಾಗೆ, ಎಲೆಕ್ಷನ್ಗೆ ರೆಡಿಯಾಗ್ತಿದ್ದ ಗಿರಿ ಫುಲ್ ಬಿಲ್ಡಪ್ ವಿಡಿಯೋಗಳನ್ನು ಮಾಡಿಸಿ ಚುನಾವಣೆ ಪ್ರಚಾರಕ್ಕೆ ಇಳಿದಿದ್ದ ಎಂದು ತಿಳಿದುಬಂದಿದೆ.
ಇದಲ್ಲದೆ, ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದಲ್ಲಿ ಕುಣಿಗಲ್ ಗಿರಿಯನ್ನು ಸಹ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ರೌಡಿಶೀಟರ್ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್: ಕಾರ್ನಲ್ಲಿ ಪತ್ತೆಯಾದ ವೇಲ್ ಬಟ್ಟೆ ಬಿಚ್ಚಿಟ್ಟ ರಹಸ್ಯವೇನು?
ವರ್ತೂರು ಪ್ರಕಾಶ್ ಅಪಹರಣದ ಹಿಂದೆ ಮಹಿಳೆ? ಮಾಜಿ ಸಚಿವರು ಹೇಳಿದ ಕಿಡ್ನಾಪ್ ಪ್ರಸಂಗದ ಸುತ್ತ ಅನುಮಾನದ ಹುತ್ತ!