ಬೇರೆ ಕಡೆ ಹತ್ಯೆ ಮಾಡಿ ಚೀಲದಲ್ಲಿ ಶವ ತಂದು ಎಸೆದು ಹೋದ ಹಂತಕರು

|

Updated on: Nov 15, 2019 | 9:18 PM

ಬೆಂಗಳೂರು: ಬೇರೆ ಕಡೆ ಬರ್ಬರ ಹತ್ಯೆ ಮಾಡಿ ನಗರದ ಲಗ್ಗೆರೆ ಬ್ರಿಡ್ಜ್ ಬಳಿ ವ್ಯಕ್ತಿಯ ಮೃತದೇಹವನ್ನು ಬಿಸಾಡಿ ಹೋಗಿರುವ ಘಟನೆ ತಡರಾತ್ರಿ ನಡೆದಿದೆ. ಜೆಡಿಎಸ್​ನಲ್ಲಿ ಗುರುತಿಸಿಕೊಂಡಿದ್ದ ಸಂತೋಷ್(35)ನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮೃತ ಸಂತೋಷ್ ಒಂದು ವರ್ಷದ ಹಿಂದೆ ಮದುವೆಯಾಗಿದ್ದ.  ಪತ್ನಿ ಯಮುನಾ ಹಾಗೂ ಸಂತೋಷ್ ನಡುವೆ ಗಲಾಟೆಯಾಗುತ್ತಿತ್ತು. ನಿನ್ನೆ ಅಷ್ಟೇ ಗಂಡನ ಮೇಲೆ ಪತ್ನಿ ಯಮುನಾ ದೂರುಕೊಟ್ಟಿದ್ದಳು. ಹೀಗಾಗಿ ಪತ್ನಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಸುಮಾರು ಐದಾರು ದುಷ್ಕರ್ಮಿಗಳು ಕೊಲೆ ಮಾಡಿ […]

ಬೇರೆ ಕಡೆ ಹತ್ಯೆ ಮಾಡಿ ಚೀಲದಲ್ಲಿ ಶವ ತಂದು ಎಸೆದು ಹೋದ ಹಂತಕರು
Follow us on

ಬೆಂಗಳೂರು: ಬೇರೆ ಕಡೆ ಬರ್ಬರ ಹತ್ಯೆ ಮಾಡಿ ನಗರದ ಲಗ್ಗೆರೆ ಬ್ರಿಡ್ಜ್ ಬಳಿ ವ್ಯಕ್ತಿಯ ಮೃತದೇಹವನ್ನು ಬಿಸಾಡಿ ಹೋಗಿರುವ ಘಟನೆ ತಡರಾತ್ರಿ ನಡೆದಿದೆ.

ಜೆಡಿಎಸ್​ನಲ್ಲಿ ಗುರುತಿಸಿಕೊಂಡಿದ್ದ ಸಂತೋಷ್(35)ನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮೃತ ಸಂತೋಷ್ ಒಂದು ವರ್ಷದ ಹಿಂದೆ ಮದುವೆಯಾಗಿದ್ದ.  ಪತ್ನಿ ಯಮುನಾ ಹಾಗೂ ಸಂತೋಷ್ ನಡುವೆ ಗಲಾಟೆಯಾಗುತ್ತಿತ್ತು. ನಿನ್ನೆ ಅಷ್ಟೇ ಗಂಡನ ಮೇಲೆ ಪತ್ನಿ ಯಮುನಾ ದೂರುಕೊಟ್ಟಿದ್ದಳು. ಹೀಗಾಗಿ ಪತ್ನಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು ಐದಾರು ದುಷ್ಕರ್ಮಿಗಳು ಕೊಲೆ ಮಾಡಿ ಮೂಟೆ ಕೊಟ್ಟಿ ಎಸೆದು ಹೋಗಿದ್ದಾರೆ. ಅರ್ಧ ತೆರೆದ ಸ್ಥಿತಿಯಲ್ಲಿ ಮೃತದೇಹವಿದ್ದು, ರಕ್ತದ ಕಲೆಗಳ ಕಂಡು ಹೆದರಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿದ್ದಾರೆ. ಮೃತದೇಹ ತಗೆಯಲು ಸಂತೋಷ್ ಮನೆಯವರು ಬಿಡದ ಕಾರಣ ಕೊಲೆ ನಡೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

Published On - 9:30 am, Fri, 15 November 19