ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್​ನಲ್ಲೇ ಮತ್ತೊಂದು ಮಹಿಳೆ ಶವ ಪತ್ತೆ, ಒಂದೇ ಮಾದರಿಯ 3ನೇ ಕೇಸ್​ ಬೆಳಕಿಗೆ

|

Updated on: Mar 14, 2023 | 11:15 AM

ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್​ನಲ್ಲಿ ಮತ್ತೊಂದು ಮಹಿಳೆಯ ಶವಪತ್ತೆಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ಮಹಿಳೆಯರ ಶವವನ್ನು ಡ್ರಮ್​ ಹಾಗೂ ಚೀಲದಲ್ಲಿ ತುಂಬಿಕೊಂಡು ಬಂದು ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಇಟ್ಟು ಹೋಗಿದ್ದರು. ಇದೀಗ ಇದೇ ಮಾದಿರಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್​ನಲ್ಲೇ ಮತ್ತೊಂದು ಮಹಿಳೆ ಶವ ಪತ್ತೆ, ಒಂದೇ ಮಾದರಿಯ 3ನೇ ಕೇಸ್​ ಬೆಳಕಿಗೆ
ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್​ನಲ್ಲಿ ಶವ ಪತ್ತೆ
Follow us on

ಬೆಂಗಳೂರು: ಎರಡು ತಿಂಗಳ ಹಿಂದೆ ಬೆಂಗಳೂರಿನ(Bengaluru) ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ(railway station )ಬಳಿ ಡ್ರಮ್ ಹಾಗೂ ಚೀಲದಲ್ಲಿ ಮಹಿಳೆ ಶವಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಮತ್ತೊಂದು ಮಹಿಳೆಯ ಶವ ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಪತ್ತೆಯಾಗಿದೆ. ಮೊದಲ ಎರಡು ಕೇಸ್ ಗಳ ಬೆನ್ನತ್ತಿರುವ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈಗ ಮತ್ತದೇ ಹಳೇ ಮಾದರಿಯಲ್ಲಿ ಮತ್ತೊಂದು ಮಹಿಳೆಯ ಶವವನ್ನು ಡ್ರಮ್​ನಲ್ಲಿ ಹಾಕಿಕೊಂಡು ಬಂದು ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಇಟ್ಟು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: Bengaluru: ಡ್ರಮ್​ನಲ್ಲಿ ಯುವತಿ ಶವ ಪತ್ತೆ; ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ1 ತಿಂಗಳಲ್ಲಿ 2ನೇ ಮೃತದೇಹ

ನಿನ್ನೆ(ಮಾರ್ಚ್ 13) ಸಂಜೆ 7 ಗಂಟೆ ಗ ರೈಲ್ವೆ ನಿಲ್ದಾಣದ ಎಂಟ್ರಿ ಗೇಟ್ ಬಳಿ ಇದ್ದ ಪ್ಲಾಸ್ಟಿಕ್ ಡ್ರಮ್ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಆಟೋ ಚಾಲಕರೊಬ್ಬರು ಡ್ರಮ್‌ನ ಮುಚ್ಚುಳ ತೆರೆದು ನೋಡಿದ್ದಾರೆ. ಡ್ರಮ್ ಮುಚ್ಚುಳ ತೆರೆಯುತ್ತಿದ್ದಂತೆ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಕಂಡಿದೆ. ಮಹಿಳೆ ಡೆಡ್‌ಬಾಡಿ ನೋಡಿ ಗಾಬರಿಯಾದ ಆಟೋ ಚಾಲಕ ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ ಎಫ್‌ಎಸ್‌ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ಬೆಳಗ್ಗೆ 10 ಗಂಟೆ ಸುಮಾರಿಗೆ ಆಟೋದಲ್ಲಿ ತಂದು ರೈಲ್ವೆ ನಿಲ್ದಾಣದ ಡ್ರಮ್‌ನಲ್ಲಿಟ್ಟು ಹಂತಕರು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಡ್ರಮ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಮಹಿಳೆ 35ವರ್ಷದ ಆಸುಪಾಸಿನವಳೆಂದು ತಿಳಿದುಬಂದಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆಟೋದಲ್ಲಿ ಬಂದು ಡ್ರಮ್ ಇಟ್ಟು ಎಸ್ಕೇಪ್ ಆಗಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.

ಇದನ್ನೂ ಓದಿ: ಕೆಜಿಎಫ್​ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಮಹಿಳೆಯ ಶವ ಪತ್ತೆ, ತನಿಖೆ ಕೈಗೊಂಡ ರೈಲ್ವೆ ಪೊಲೀಸ್ರು

ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿಯಲ್ಲಿ ಇದೇ ಮಾದರಿಯಲ್ಲಿ ಡ್ರಮ್ ಹಾಗೂ ಗೋಣಿ ಚೀಲದಲ್ಲಿ ಮಹಿಳೆಯರ ಶವಗಳ ಪತ್ತೆಯಾಗಿದ್ವು. ಆ ಪ್ರಕರಣಗಳ ತನಿಖೆ ಕೈಗೊಂಡಿರೋ ರೈಲ್ವೇ ಪೊಲೀಸರು, ಹತ್ಯೆಯಾದವರ ಪತ್ತೆ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅದೇ ಮಾದರಿಯಲ್ಲಿ ಮಹಿಳೆಯನ್ನ ಹತ್ಯೆಗೈದು ಡ್ರಮ್‌ನಲ್ಲಿ ತುಂಬಿದ್ದಾರೆ. ಇದರ ಸೀರಿಯಲ್ ಕಿಲ್ಲರ್ ಗ್ಯಾಂಗ್ ಕೈವಾಡವಿರುವ ಶಂಕೆ ಶುರುವಾಗಿದೆ. ಸದ್ಯ ಈ ಹಿಂದಿನ ಪ್ರಕರಣಗಳ ಜೊತೆಗೆ ಈಗ ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರೈಲ್ವೆ ಪೊಲೀಸರು ಹಂತಕರ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

Published On - 11:11 am, Tue, 14 March 23