ರಾಮನಗರ: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ 54 ಆರೋಪಿಗಳನ್ನು ರಾಮನಗರ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡುವಂತೆ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ.
ಪಾದರಾಯನಪುರದ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಬದಲಿಗೆ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗುತ್ತೆ. ಹೀಗಾಗಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ 177 ಖೈದಿಗಳನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜೈಲ್ ಬಳಿ ಬ್ಯಾರಿಕೇಡ್ಗಳನ್ನ ಹಾಕಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಮೂರು ಬ್ಯಾಚ್ಗಳ ಮೂಲಕ ರಾಮನಗರದ ವಿಚಾರಣಾಧೀನ ಖೈದಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಪಾದರಾಯನಪುರದ ಗಲಾಟೆಗೆ ಸಂಬಂಧಿಸಿ ಬಂಧಿತ ಆರೋಪಿಗಳಿಗೆ ಕೊರೊನಾ ಸೋಂಕು ಇರಬಹುದೇನೂ ಎಂಬ ಅನುಮಾನ ಉಂಟಾಗಿದೆ. ಹೀಗಾಗಿ ರಾಮನಗರ ಜೈಲನ್ನು ಕ್ವಾರಂಟೈನ್ ಆಗಿ ಮಾಡಿ ಅದರಲ್ಲಿ 54 ಜನ ಆರೋಪಿಗಳನ್ನು ಶಿಫ್ಟ್ ಮಾಡಲಾಗ್ತಿದೆ. ಅಲ್ಲದೆ ಸೀಲ್ಡೌನ್ ಆದ ಏರಿಯಾದ ಆರೋಪಿಗಳನ್ನು ಗ್ರೀನ್ ಜೋನ್ ಆಗಿರುವ ರಾಮನಗರ ಜೈಲಿಗೆ ಕರೆತರುತ್ತಿರುವುದು ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.
Published On - 10:46 am, Tue, 21 April 20