ಪಾದರಾಯನಪುರ ಗೂಂಡಾಗಿರಿ: ವೈದ್ಯರು, ಪೊಲೀಸ್ರನ್ನ ಸಾಯಿಸಲು ನಡೆದಿತ್ತಾ ಷಡ್ಯಂತ್ರ?

ಪಾದರಾಯನಪುರ ಗೂಂಡಾಗಿರಿ: ವೈದ್ಯರು, ಪೊಲೀಸ್ರನ್ನ ಸಾಯಿಸಲು ನಡೆದಿತ್ತಾ ಷಡ್ಯಂತ್ರ?

ಬೆಂಗಳೂರು: ಪಾದರಾಯನಪುರದಲ್ಲಿ ನಿನ್ನೆ ವೈದ್ಯರನ್ನು, ಪೊಲೀಸರನ್ನು ಸಾಯಿಸಲು ನಡೆದಿತ್ತಾ ಷಡ್ಯಂತ್ರ..? ದಾಂಧಲೆ ಹೆಸರಲ್ಲಿ ನಡೆಯಲಿತ್ತಾ ರಕ್ತದೋಕುಳಿ..? ಪುಂಡಾಟಕ್ಕೂ ಮುನ್ನ ರೆಡಿಯಾಗಿತ್ತಾ ಹತ್ಯೆಯ ಬಿಗ್ ಸ್ಕೆಚ್..? ಇಂಥದ್ದೊಂದು ಆಘಾತಕಾರಿ ವಿಚಾರ ಹೊರಬಂದಿದೆ. ಪೊಲೀಸ್ ಅಧಿಕಾರಿಯ ದೂರಿನನ್ವಯ FIR ದಾಖಲಾಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸುವಂತಾ ಮಾಹಿತಿ ಲಭ್ಯವಾಗಿದೆ. ಸಂಜೆ 6.30ರ ಸುಮಾರಿಗೆ ಸೀಲ್‌ಡೌನ್‌ ಭದ್ರತೆ ಕಾರ್ಯದಲ್ಲಿದ್ದೆವು. ಬಿಬಿಎಂಪಿ ವೈದ್ಯಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದರು. ಸುಮಾರು 58 ಮಂದಿಯನ್ನ ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ರು. ಮೊದಲು 15 ಜನರಿಗೆ ವಿಷಯ ತಿಳಿಸಿ […]

sadhu srinath

|

Apr 20, 2020 | 5:48 PM

ಬೆಂಗಳೂರು: ಪಾದರಾಯನಪುರದಲ್ಲಿ ನಿನ್ನೆ ವೈದ್ಯರನ್ನು, ಪೊಲೀಸರನ್ನು ಸಾಯಿಸಲು ನಡೆದಿತ್ತಾ ಷಡ್ಯಂತ್ರ..? ದಾಂಧಲೆ ಹೆಸರಲ್ಲಿ ನಡೆಯಲಿತ್ತಾ ರಕ್ತದೋಕುಳಿ..? ಪುಂಡಾಟಕ್ಕೂ ಮುನ್ನ ರೆಡಿಯಾಗಿತ್ತಾ ಹತ್ಯೆಯ ಬಿಗ್ ಸ್ಕೆಚ್..? ಇಂಥದ್ದೊಂದು ಆಘಾತಕಾರಿ ವಿಚಾರ ಹೊರಬಂದಿದೆ.

ಪೊಲೀಸ್ ಅಧಿಕಾರಿಯ ದೂರಿನನ್ವಯ FIR ದಾಖಲಾಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸುವಂತಾ ಮಾಹಿತಿ ಲಭ್ಯವಾಗಿದೆ. ಸಂಜೆ 6.30ರ ಸುಮಾರಿಗೆ ಸೀಲ್‌ಡೌನ್‌ ಭದ್ರತೆ ಕಾರ್ಯದಲ್ಲಿದ್ದೆವು. ಬಿಬಿಎಂಪಿ ವೈದ್ಯಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದರು. ಸುಮಾರು 58 ಮಂದಿಯನ್ನ ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ರು. ಮೊದಲು 15 ಜನರಿಗೆ ವಿಷಯ ತಿಳಿಸಿ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು.

ಇನ್ನುಳಿದ 43 ಜನರನ್ನ ಕ್ವಾರಂಟೈನ್‌ಗೆ ಕಳಿಸುವ ಸಮಯದಲ್ಲಿ ಗಲಾಟೆಯಾಗಿದೆ. ಸ್ಥಳಕ್ಕೆ ಬಂದ ಕೆಲವರು ಜನರನ್ನ ಏಕೆ ಕರೆದುಕೊಂಡು ಹೋಗ್ತಿದ್ದೀರಿ, ಇಲ್ಲೇ ಪರೀಕ್ಷೆ ಮಾಡಿ ಎಂದು ಗಲಾಟೆ ಮಾಡಲು ಮುಂದಾಗಿದ್ದರು. ವೈದ್ಯಾಧಿಕಾರಿಗಳು ಕ್ವಾರಂಟೈನ್‌ನ ಉದ್ದೇಶ ತಿಳಿಸಲು ಮುಂದಾದ್ರು. ಆದ್ರೆ, ಈ ವೇಳೆ ವಾಜಿದ್, ಇರ್ಫಾನ್, ಕಬೀರ್‌, ಇರ್ಷದ್ ಅಹ್ಮದ್, ಜಕ್ರಿಯಾ ಅಹಮದ್, ಫರ್ಜೂವಾ ಎಂಬುವವರು ಗಲಾಟೆ ಆರಂಭಿಸಿದ್ರು.

ಕೈಯಲ್ಲಿ ದೊಣ್ಣೆ, ಕಲ್ಲುಗಳನ್ನ ಹಿಡಿದುಕೊಂಡು ಬಂದಿದ್ರು: ಕೈಯಲ್ಲಿ ಕಲ್ಲುಗಳನ್ನ ಹಿಡಿದಿದ್ರು, ಕಬೀರ್‌ ಎಂಬಾತ ಚಾಕು ಹಿಡಿದಿದ್ದ. 50ರಿಂದ 60 ಯುವಕರು ದೊಣ್ಣೆ, ಕಲ್ಲುಗಳನ್ನ ಹಿಡಿದು ಬಂದಿದ್ದರು. ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಗಳಿಂದ ಹೊಡೆದು, ನನ್ನನ್ನು ತಳ್ಳಿದ್ದರು. ರಾತ್ರಿ ಸುಮಾರು 7.10ರ ವೇಳೆಗೆ ಬೀದಿ ದೀಪಗಳಿಗೆ ಕಲ್ಲು ಹೊಡೆದ್ರು. ಬೀದಿ ದೀಪಗಳನ್ನ ಒಡೆದು ಹಾಕಿ ನಮ್ಮ ಮೇಲೂ ಕಲ್ಲುಗಳನ್ನ ಎಸೆದರು. ಸೀಲ್‌ಡೌನ್‌ಗಾಗಿ ಕರ್ತವ್ಯ ನಿರ್ವಹಿಸಲು ಬ್ಯಾರಿಕೇಡ್‌ ಕಿತ್ತು ಬಿಸಾಕಿದ್ರು.

ನಂತರ 11ನೇ ಕ್ರಾಸ್‌ನ ಚೆಕ್‌ಪೋಸ್ಟ್‌ ಕಡೆಗೆ ಕೂಗುತ್ತಾ ನುಗ್ಗಿದ್ದರು. ವೈದ್ಯರನ್ನ, ಪೊಲೀಸರನ್ನ ಸಾಯಿಸದೇ ಬಿಡಬಾರದು, ಹೊಡೆಯಿರಿ ಎಂದು ಕೂಗಾಡುತ್ತಾ ಓಡಿ ಬಂದ್ರು. ಗುಂಪು ಎಸೆದ ಕಲ್ಲುಗಳಿಂದ ನನಗೆ, ಸಿಬ್ಬಂದಿಗೆ ಗಾಯಗಳಾಗಿವೆ. ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರೂ ಗುಂಪು ಸೇರಿದ್ರು. ಉದ್ದೇಶಪೂರ್ವಕವಾಗಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯ ದೂರಿನನ್ವಯ FIR ದಾಖಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada