ಕಲಬುರಗಿ, ಜುಲೈ 02: ಸಿನಿಮೀಯ ಶೈಲಿಯಲ್ಲಿ ಬೆನ್ನತ್ತಿ ಬಂದು ಕಲಬುರಗಿ ಜಿಲ್ಲಾ ಕೋರ್ಟ್ (Kalaburagi District Court) ಆವರಣದಲ್ಲೇ ವ್ಯಕ್ತಿಯ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಧೀರಜ್ ಹಲ್ಲೆಗೊಳಗಾದ ವ್ಯಕ್ತಿ. ಪ್ರಶಾಂತ್ ಪಾಟೀಲ್ (20), ವೀರೇಶ್ ಪಾಟೀಲ್ (19), ರಾಮು ಪಾಟೀಲ್ (38) ಹಲ್ಲೆ ಮಾಡಿದ ಆರೋಪಿಗಳು. ತಲ್ವಾರ್ ದಾಳಿಯಿಂದ ಧೀರಜ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡುತ್ತಿದ್ದ ವೇಳೆ ಕೋರ್ಟ್ ಆವರಣದಲ್ಲಿದ್ದ ಸಾರ್ವಜನಿಕರು ಮತ್ತು ವಕೀಲರು ಆರೋಪಿಗಳನ್ನು ತಡೆದಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ವಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ (ಜು.02) ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲೇ ಪತ್ನಿಗೆ ಪತಿ, ಪೊಲೀಸ್ ಪೇದೆ ಲೋಕನಾಥ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಮಮತಾ ಮೃತ ದುರ್ದೈವಿ. ಮಮತಾ ಮತ್ತು ಲೋಕನಾಥ್ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದವರು. ಆದರೆ ದಂಪತಿ ಮಧ್ಯೆ ಕಳೆದ ನಾಲ್ಕು ದಿನಗಳಿಂದ ಜಗಳ ನಡೆಯುತ್ತಿತ್ತು.
ಇದನ್ನೂ ಓದಿ: ಸಮ್ಮಿಲನಕ್ಕೆ ಆಹ್ವಾನಿಸಿ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಗೆಳತಿ, ಕಾರಣ ಕೇಳಿ ಪೊಲೀಸರೇ ದಂಗು!
ನಿತ್ಯ ಗಲಾಟೆಯಿಂದ ರೋಸಿ ಹೋಗಿದ್ದ ಮಮತಾ ಪತಿ ಲೋಕನಾಥ್ ವಿರುದ್ಧ ದೂರು ನೀಡಲು ಎಸ್ಪಿ ಕಚೇರಿಗೆ ಆಗಮಿಸುತ್ತಿದ್ದರು. ಇದನ್ನು ತಿಳಿದ, ಪೊಲೀಸ್ ಪೇದೆ ಲೋಕನಾಥ್ ಪತ್ನಿ ಮಮತಾರನ್ನು ತಡೆದಿದ್ದಾನೆ. ಬಳಿಕ ಇಬ್ಬರ ನಡುವೆ ಕೆಲ ಕಾಲ ಮಾತುಕತೆ ನಡೆದಿತ್ತು. ನಂತರ, ಲೋಕನಾಥ್ ಪತ್ನಿ ಮಮತಾರಿಗೆ ಚಾಕುವಿನಿಂದ ಇರಿದಿದ್ದನು. ಕೂಡಲೆ, ಸ್ಥಳದಲ್ಲಿದ್ದ ಪೊಲೀಸರು ಲೋಕನಾಥ್ನನ್ನು ತಡೆದಿದು, ಬಂಧಿಸಿದ್ದರು.
ಬಳಿಕ, ಮಮತಾರನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ