ಬೆಂಗಳೂರು: ವೃದ್ಧರು, ಅನಕ್ಷರಸ್ಥರನ್ನು ನಂಬಿಸಿ ಕಳವು ಮಾಡುತ್ತಿದ್ದ ವ್ಯಕ್ತಿ ಸೆರೆಯಾದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಬಳಿ ನಡೆದಿದೆ.
ವೃದ್ಧಾಪ್ಯ ವೇತನ, ರೇಷನ್ ಕಾರ್ಡ್, ವಿಧವಾ ವೇತನ, ಆಧಾರ್ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ವಂಚಿಸಿರುವ ಪ್ರಕರಣ ನಡೆದಿದೆ. ಸೌಲಭ್ಯ ಕೋರಿ ಬಂದ ಜನರನ್ನು ನೀವು ಹಾಕಿಕೊಂಡಿರುವ ಚಿನ್ನಾಭರಣ ನೋಡಿದರೆ ಬಿಪಿಎಲ್ ಕಾರ್ಡ್ ಕೊಡಲ್ಲ ಎಂದು ನಂಬಿಸಿ ಅವರಿಂದ ಚಿನ್ನ ಪಡೆದು ಮೊಸ ಮಾಡುತ್ತಿದ್ದ ಆರೋಪಿ ಮಂಜೇಶ್ ಅಲಿಯಾಸ್ ಚೌಲ್ಟ್ರಿ ಮಂಜನನ್ನು ಸದ್ಯ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವೃದ್ಧರು ಹಾಗೂ ಅನಕ್ಷರಸ್ಥರನ್ನು ಗುರುತಿಸಿ, ಚಿನ್ನಾಭಾರಣ ಯಾಮಾರಿಸುತ್ತಿದ್ದ ಮಂಜೇಶ್, ಚೌಲ್ಟ್ರಿ ಮಂಜ, ಹೊಟ್ಟೆ ಮಂಜ, 420 ಮಂಜ ಎಂಬ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದು, ಕಳ್ಳತನದ ಬಳಿಕ ಅಮಾಯಕನಂತೆ ಜನರ ಮಧ್ಯೆ ಓಡಾಡಿಕೊಂಡಿದ್ದ. ಬಂಧಿತ ಆರೋಪಿಯಿಂದ 8.5 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದು, ಬಂಧಿತ ಮಂಜೇಶ್ ವಿರುದ್ಧ ಹಾಸನ, ಮಂಗಳೂರು ಹಾಗೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
CBI ಕಸ್ಟಡಿಯಲ್ಲಿದ್ದ 1 ಕ್ವಿಂಟಾಲ್ ಚಿನ್ನ ಮಂಗಮಾಯ: ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ
Published On - 2:33 pm, Thu, 7 January 21