
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕವಸ್ತು ಮಾರುತ್ತಿದ್ದ ವಿದೇಶಿ ಪ್ರಜೆಯ ಜತೆ ಸ್ಥಳೀಯ ಡ್ರಗ್ಸ್ ಪೆಡ್ಲರ್‌ಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಹಮ್ಮದ್ ಓಮರ್, ತಬಶೀರ್, ಲಸೀಮ್, ನಾಸೀರ್, ಸೈಯದ್ ಶಾಕೀರ್, ಮೊಹಮ್ಮದ್ ಸೀಹಂ ಬಂಧಿತರು.
ಡ್ರಗ್ಸ್ ತರಿಸಿ ಸಂಗ್ರಹಿಸ್ತಿದ್ದ. ಸದ್ಯ ಖಚಿತ ಮಾಹಿತಿ ಮೇರೆಗೆ ಓಮರ್ನನ್ನ ಬಂಧಿಸಲಾಗಿತ್ತು. ಆತ ಕೊಟ್ಟ ಮಾಹಿತಿ ಮೇರೆಗೆ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 50 ಗ್ರಾಂ ತೂಕದ 100 ಜುರಾಸಿಸ್ ಟಾಬ್ಲೆಟ್. 10 ಗ್ರಾಂ MDMA ಕ್ರಿಸ್ಟಲ್ ಸೇರಿ 5 ಲಕ್ಷ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಲಾಗಿದೆ.