ರಾತ್ರಿ ಕಳ್ಳರ ಸೆರೆ: 6 ಪ್ರಕರಣ ಪತ್ತೆ, 916 ಗ್ರಾಂ ಚಿನ್ನಾಭರಣ ವಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 20, 2021 | 2:14 PM

ಬೆಂಗಳೂರಿನ ಮನೆಗಳಲ್ಲಿ ಬೀಗ ಬಿದ್ದಿರುವುದನ್ನು ಗುರುತು ಮಾಡಿಕೊಂಡು ಕಳ್ಳತನ ಮಾಡುತ್ತಿದ್ದವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಕಳ್ಳರ ಸೆರೆ: 6 ಪ್ರಕರಣ ಪತ್ತೆ, 916 ಗ್ರಾಂ ಚಿನ್ನಾಭರಣ ವಶ
ಬಂಧಿತ ಆರೋಪಿಗಳು
Follow us on

ಬೆಂಗಳೂರು: ಬೀಗ ಹಾಕಿದ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಗುಂಪನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಈ ಕಳ್ಳರು ರಾತ್ರಿ ಹೊತ್ತು ಕಳ್ಳತನ ಮಾಡುತ್ತಿದ್ದರು.

ಅಬ್ರಾಹಂ, ಧನುಷ್, ಕಾಂತರಾಜು, ಅನಂತರಾಜು, ಗಗನ್, ಕಾರ್ತಿಕ್‌ ಬಂಧಿತರು. ಬಂಧಿತರಿಂದ  ಕೋಣನಕುಂಟೆ ಪೊಲೀಸರು 916 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಒಟ್ಟು 6 ಪ್ರಕರಣಗಳು ಪತ್ತೆಯಾಗಿವೆ.

ವಿಲಾಸಿ ಜೀವನಕ್ಕಾಗಿ ಮನೆಗಳವು ಮಾಡ್ತಿದ್ದ ಆರೋಪಿಯ ಬೆರಳಚ್ಚು ಆಧರಿಸಿ ಅರೆಸ್ಟ್​​