ಬೆಂಗಳೂರು: ಹಣ ನೀಡದಿದ್ದಕ್ಕೆ ಹೋಟೆಲ್ ಕ್ಯಾಷಿಯರ್ ಮೇಲೆ ಪೊಲೀಸ್ ಪೇದೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ 8 ಗಂಟೆ ವೇಳೆಗೆ ಹೋಟೆಲ್‌ಗೆ ಬಂದು ಪೊಲೀಸ್ ಪೇದೆ ಹಣ ಕೇಳಿದ್ದಾರೆ. ಆಗ ಹಣ ನೀಡಲು ಹೋಟೆಲ್ ಕ್ಯಾಷಿಯರ್ ನಿರಾಕರಿಸಿದ್ದಾರೆ.
ನಂತರ ರಾತ್ರಿ 11 ಗಂಟೆಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೇದೆ ಹೋಟೆಲ್ ಬಳಿ ಬಂದು ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸಮಯ ಮುಗಿದಿದ್ದರೂ ಹೋಟೆಲ್ ಕ್ಲೋಸ್ ಮಾಡಿಲ್ಲ ಎಂದು ಪೇದೆ ಕ್ಯಾತೆ ತೆಗೆದಿದ್ದಾರೆ. ಹೋಟೆಲ್ ಮುಚ್ಚುವುದಾಗಿ ಹೇಳಿದ್ರೂ ಸಾರ್ವಜನಿಕವಾಗಿ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿ ಪೊಲೀಸ್ ಪೇದೆ ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
Published On - 9:28 am, Tue, 11 February 20