ಪಾದರಾಯನಪುರ ಪುಂಡಾಟಿಕೆ ಹಿಂದೆ ಬರೋಬ್ಬರಿ 5 ಕಿಂಗ್​ಪಿನ್ಸ್! ಇನ್ನೂ ಒಬ್ಬನ ಅರೆಸ್ಟ್ ಆಗಬೇಕಿದೆ

|

Updated on: Apr 21, 2020 | 10:39 AM

ಬೆಂಗಳೂರು: ಭಾನುವಾರ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಗಲಾಟೆಯ ಉಸ್ತುವಾರಿ ಮಾಸ್ಟರ್ ಮೈಂಡ್? ಪಾದರಾಯನಪುರ ಗಲಾಟೆಗೆ ಪ್ರಮುಖ ಕಾರಣವೇನು? ಗಲಭೆಯ ಸೂತ್ರಧಾರಿಗಳು ಯಾರು? ಕುಮ್ಮಕ್ಕು ನೀಡಿದ್ದೇಕೆ? ಎಂಬ ಎಲ್ಲಾ ಸ್ಫೋಟಕ ಮಾಹಿತಿ ಬಯಲಾಗಿದೆ. ಪೊಲೀಸರ ತನಿಖೆಯಲ್ಲಿ ಕಿಡಿಗೇಡಿಗಳ ಪ್ಲ್ಯಾನ್ ರಿವಿಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರು ಪ್ರಮುಖ ಸೂತ್ರಧಾರಿಗಳಿದ್ದಾರೆ. ಇವರೇ ಈ ಎಲ್ಲಾ ಗಲಾಟೆಗೆ ಮಾಸ್ಟರ್ ಮೈಂಡ್. ಆರೋಪಿ 1-ವಜೀರ್: 65 ವರ್ಷದ ವಜೀರ್ ಮನೆಯಲ್ಲಿ ಇರುತ್ತಿದ್ದನು. ಜನರನ್ನು ಗುಂಪು ಸೇರಿಸಿಕೊಂಡು ಚರ್ಚೆ ಮಾಡುತ್ತಿದ್ದನು. ಆರೋಪಿ […]

ಪಾದರಾಯನಪುರ ಪುಂಡಾಟಿಕೆ ಹಿಂದೆ ಬರೋಬ್ಬರಿ 5 ಕಿಂಗ್​ಪಿನ್ಸ್! ಇನ್ನೂ ಒಬ್ಬನ ಅರೆಸ್ಟ್ ಆಗಬೇಕಿದೆ
Follow us on

ಬೆಂಗಳೂರು: ಭಾನುವಾರ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಗಲಾಟೆಯ ಉಸ್ತುವಾರಿ ಮಾಸ್ಟರ್ ಮೈಂಡ್? ಪಾದರಾಯನಪುರ ಗಲಾಟೆಗೆ ಪ್ರಮುಖ ಕಾರಣವೇನು? ಗಲಭೆಯ ಸೂತ್ರಧಾರಿಗಳು ಯಾರು? ಕುಮ್ಮಕ್ಕು ನೀಡಿದ್ದೇಕೆ? ಎಂಬ ಎಲ್ಲಾ ಸ್ಫೋಟಕ ಮಾಹಿತಿ ಬಯಲಾಗಿದೆ. ಪೊಲೀಸರ ತನಿಖೆಯಲ್ಲಿ ಕಿಡಿಗೇಡಿಗಳ ಪ್ಲ್ಯಾನ್ ರಿವಿಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಐವರು ಪ್ರಮುಖ ಸೂತ್ರಧಾರಿಗಳಿದ್ದಾರೆ. ಇವರೇ ಈ ಎಲ್ಲಾ ಗಲಾಟೆಗೆ ಮಾಸ್ಟರ್ ಮೈಂಡ್.
ಆರೋಪಿ 1-ವಜೀರ್: 65 ವರ್ಷದ ವಜೀರ್ ಮನೆಯಲ್ಲಿ ಇರುತ್ತಿದ್ದನು. ಜನರನ್ನು ಗುಂಪು ಸೇರಿಸಿಕೊಂಡು ಚರ್ಚೆ ಮಾಡುತ್ತಿದ್ದನು.
ಆರೋಪಿ 2-ಇರ್ಫಾನ್: ಈತ ಎಐಎಂಐಎಂ ಪಕ್ಷದ ಕಾರ್ಯಕರ್ತ. ಈ ಹಿಂದೆ ಗಲಾಟೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಸದ್ಯ ಇರ್ಫಾನ್ ಪಾರಾರಿಯಾಗಿದ್ದಾನೆ.
ಆರೋಪಿ 3-ಕಬೀರ್: ಈತ ಗುಜರಿ ಕೆಲಸವನ್ನು ಮಾಡುತ್ತಿದ್ದ. ಈತನನ್ನು ಏರಿಯಾದಲ್ಲಿ ಚಪ್ಪರ್ ಎಂದು ಕರೆಯುತ್ತಿದ್ರು.
ಆರೋಪಿ 4-ಇರ್ಷಾದ್ ಅಹ್ಮದ್: ಇವನು ಕಬೀರ್ ಜತೆ ಕೆಲಸ ಮಾಡ್ತಿದ್ದ.
ಆರೋಪಿ 5-ಹಲ್ಸಾನ್ ಅಲಿಯಾಸ್ ಫರೋಜ್ ಅಲಿಯಾಸ್ ಫರ್ಜನಾ ಅಲಿಯಾಸ್ ಲೇಡಿ ಡಾನ್
ಈಕೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಳು. ಈಕೆ ಹೆಸರಿಗೆ ಮಾತ್ರ ತರಕಾರಿ ಮಾರಾಟ ಮಾಡುತ್ತಿದ್ದಳು. ಆದರೆ ಗಾಂಜಾ ಮಾರಾಟ ಇವಳ ಹಣದ ಮೂಲ.
ಏರಿಯಾದ ಹುಡುಗರು ಅರೆಸ್ಟ್ ಅಗಿದ್ದಾಗ ಹಣ ಸಹಾಯ ಮಾಡುವುದು ಕದ್ದ ಮಾಲ್ ಮಾರಾಟ ಮಾಡುತ್ತಿದ್ದ ಆರೋಪಿ ಈಕೆ.

ಪಾದರಾಯನಪುರ ಗಲಾಟೆಗೆ ಕಾರಣವೇನು:
ಪಾದರಾಯನಪುರ ಸೀಲ್​​ಡೌನ್​ನನ್ನೇ ಬಂಡವಾಳ ಮಾಡ್ಕೊಂಡಿದ್ದ ಆರೋಪಿಗಳು ಸೀಲ್ ಡೌನ್​ನಿಂದ ಆಗುತ್ತಿದ್ದ ಕೆಲ ತೊಂದರೆಗಳನ್ನು ಮುಂದಿಟ್ಟುಕೊಂಡು ಈ ಕೃತ್ಯ ಎಸಗಿದ್ದಾರೆ. ಸೀಲ್ ಡೌನ್ ಹಿನ್ನೆಲೆಯಲ್ಲಿ ಜನರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕವಿರಲಿಲ್ಲ. ಹೀಗಾಗಿ ಪಾದರಾಯನಪುರ ನಿವಾಸಿಗಳು ಆವೇಶಕ್ಕೆ ಒಳಗಾಗಿದ್ದರು. ಎರಡು ದಿನದ ಹಿಂದೆ ಅಗತ್ಯವಸ್ತುಗಳು ಸರಿಯಾಗಿ ಸಿಕ್ಕಿರಲಿಲ್ಲ ಎಂದು ಪೊಲೀಸರ ಜತೆ ಜನರು ವಾಗ್ವಾದಕ್ಕಿಳಿದಿದ್ರು.

ಈ ವೇಳೆ ಸ್ಥಳೀಯ ಕಾರ್ಪೊರೇಟರ್ ಮಧ್ಯಪ್ರವೇಶಿಸಿ ಅಗತ್ಯವಸ್ತು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರೆ ಯಾವುದೇ ಅಗತ್ಯವಸ್ತುಗಳನ್ನು ಪೂರೈಕೆ ಮಾಡಿರಲಿಲ್ಲ. ಪಾದರಾಯನಪುರದಲ್ಲಿ ಗುಂಪಾಗಿ ಹೊರಗೆ ಬಂದ ಹಿನ್ನೆಲೆಯಲ್ಲಿ ಏನು ಮಾಡುತ್ತಿದ್ದೇವೆಂಬ ಅರಿವಿಲ್ಲದೆ ಮನೆಗಳಿಗೆ ನುಗ್ಗಿ ಗಲಾಟೆ ಮಾಡಿದ್ದರು. ಈ ಎಲ್ಲಾ ಸಮಸ್ಯೆ ಎದುರಿಸುತ್ತಿದ್ದ ಜನರ ಆಕ್ರೋಶವನ್ನು ಬಂಡವಾಳ ಮಾಡಿಕೊಂಡು ಐವರು ಆರೋಪಿಗಳು ಸ್ಥಳೀಯರನ್ನ ಪ್ರಚೋದಿಸಿ ಗಲಾಟೆ ಮಾಡಿಸಿದ್ದಾರೆ. ಪಕ್ಕಾ ಪ್ಲ್ಯಾನ್ ಮಾಡಿ ಜನರನ್ನು ಗುಂಪು ಗೂಡಿಸಿ ಅಟ್ಟಹಾಸ ಮೆರೆದಿದ್ದಾರೆ.

Published On - 9:41 am, Tue, 21 April 20