ಮುತ್ತೂಟ್ ಫೈನಾನ್ಸ್ ದರೋಡೆ ಪ್ರಕರಣ: ದರೋಡೆಕೋರರು ಹೊತ್ತೊಯ್ದ ಚಿನ್ನಾಭರಣದ ಬಾಕ್ಸ್​​ಗಳು ಪತ್ತೆ

ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಮುತ್ತೂಟ್ ಫೈನಾನ್ಸ್ ಕಚೇರಿಯಿಂದ 25 ಕೆ.ಜಿ ಚಿನ್ನ ಮತ್ತು ನಗದು ಕದ್ದೊಯ್ದ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ವರದಿಯಾಗಿದೆ. ಕಳ್ಳರು ಹೊತ್ತೊಯ್ದಿದ್ದ ಚಿನ್ನಾಭರಣದ ಬಾಕ್ಸ್​ಗಳು ರಾಜ್ಯದ ಗಡಿಯಲ್ಲಿ ಪತ್ತೆಯಾಗಿದೆ.

ಮುತ್ತೂಟ್ ಫೈನಾನ್ಸ್ ದರೋಡೆ ಪ್ರಕರಣ: ದರೋಡೆಕೋರರು ಹೊತ್ತೊಯ್ದ ಚಿನ್ನಾಭರಣದ ಬಾಕ್ಸ್​​ಗಳು ಪತ್ತೆ
ದರೋಡೆಕೋರರು ಹೊತ್ತೊಯ್ದ ಚಿನ್ನಾಭರಣದ ಬಾಕ್ಸ್​​ಗಳು ಪತ್ತೆ

Updated on: Jan 22, 2021 | 7:19 PM

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಮುತ್ತೂಟ್ ಫೈನಾನ್ಸ್ ಕಚೇರಿಯಿಂದ 25 ಕೆ.ಜಿ ಚಿನ್ನ ಮತ್ತು ನಗದು ಕದ್ದೊಯ್ದ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ವರದಿಯಾಗಿದೆ. ಕಳ್ಳರು ಹೊತ್ತೊಯ್ದಿದ್ದ ಚಿನ್ನಾಭರಣದ ಬಾಕ್ಸ್​ಗಳು ರಾಜ್ಯದ ಗಡಿಯಲ್ಲಿ ಪತ್ತೆಯಾಗಿದೆ.

ಅತ್ತಿಬೆಲೆ-ಆನೇಕಲ್ ರಸ್ತೆಯ ಭಕ್ತಿಪುರ ಗೇಟ್ ಬಳಿ ಚಿನ್ನಾಭರಣದ ಬಾಕ್ಸ್‌ಗಳು ಪತ್ತೆಯಾಗಿದೆ. ಚಿನ್ನಾಭರಣ ಬಾಕ್ಸ್‌ಗೆ GPS ಸಿಸ್ಟಂ ಅಳವಡಿಸಲಾಗಿತ್ತು. ಹೀಗಾಗಿ, ದರೋಡೆ ಬಳಿಕ GPS ಟ್ರ್ಯಾಕ್‌ ಮಾಡಿದ್ದ ಪೊಲೀಸರು ಚಿನ್ನಾಭರಣವಿದ್ದ ಬಾಕ್ಸ್‌ಗಳನ್ನು ಪೊದೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ. ಖದೀಮರು ರಸ್ತೆ ಪಕ್ಕದ ಪೊದೆಯಲ್ಲಿ ಖಾಲಿ ಬಾಕ್ಸ್ ಎಸೆದು ಪರಾರಿಯಾಗಿದ್ದಾರೆ.

ಬಾಕ್ಸ್​ಗಳ ಜೊತೆ ಚಿನ್ನಾಭರಣದ ಬಿಲ್‌ಗಳು ಸಹ ಪತ್ತೆಯಾಗಿದೆ. ಹೀಗಾಗಿ, ಬಾಕ್ಸ್ ಪತ್ತೆಯಾದ ಅಕ್ಕಪಕ್ಕದಲ್ಲಿ ಪೊಲೀಸರು ಮತ್ತು ಮುತ್ತೂಟ್ ಫೈನಾನ್ಸ್‌ ಸಿಬ್ಬಂದಿಯಿಂದ ಶೋಧ ನಡೆಸಲಾಯಿತು. ಜೊತೆಗೆ, ಸ್ಥಳಕ್ಕೆ ಬಂದ ಅತ್ತಿಬೆಲೆ ಠಾಣೆ ಪೊಲೀಸರು ಸಹ ಪರಿಶೀಲನೆ ನಡೆಸಿದರು.

ಸಿನಿಮೀಯ ರೀತಿಯಲ್ಲಿ.. ಇಂದು ಬೆಳಗ್ಗೆ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ದರೋಡೆ, ಎಷ್ಟು ಚಿನ್ನ ದೋಚಿದ್ದಾರೆ ಗೊತ್ತಾ?