ಬೆಳ್ಳಂಬೆಳಗ್ಗೆ ಪೊಲೀಸ್ ಗನ್ ಸದ್ದು , ಆರೋಪಿಗಳ ಕಾಲಿಗೆ ಗುಂಡು

|

Updated on: Nov 25, 2019 | 12:49 PM

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಗರದಲ್ಲಿ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. ಬೆಂಗಳೂರು ನಗರದ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಜಿಕೆಡಬ್ಲ್ಯು ಲೇಔಟ್‌ನಲ್ಲಿ ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್‌ ಆಗಿದೆ. ಕೊಲೆ ಆರೋಪಿಗಳಾದ ಚಂದನ್ ಅಲಿಯಾಸ್‌ ಚಂದ್ರು ಮತ್ತು ರೋಹಿತ್‌ ಮೇಲೆ ಪೊಲೀಸರು ಗುಂಡುಹಾರಿಸಿ ಬಂಧಿಸಿದ್ದಾರೆ. ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯ ಗಣೇಶ ಬ್ಲಾಕ್‌ನಲ್ಲಿ ನವೆಂಬರ್ 21ರಂದು ಒಬ್ಬ ಯುವಕನನ್ನು ಕೊಂದು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಈ ವೇಳೆ ಆತ್ಮರಕ್ಷಣೆಗಾಗಿ ನಂದಿನಿ […]

ಬೆಳ್ಳಂಬೆಳಗ್ಗೆ ಪೊಲೀಸ್ ಗನ್ ಸದ್ದು , ಆರೋಪಿಗಳ ಕಾಲಿಗೆ ಗುಂಡು
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಗರದಲ್ಲಿ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. ಬೆಂಗಳೂರು ನಗರದ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಜಿಕೆಡಬ್ಲ್ಯು ಲೇಔಟ್‌ನಲ್ಲಿ ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್‌ ಆಗಿದೆ.

ಕೊಲೆ ಆರೋಪಿಗಳಾದ ಚಂದನ್ ಅಲಿಯಾಸ್‌ ಚಂದ್ರು ಮತ್ತು ರೋಹಿತ್‌ ಮೇಲೆ ಪೊಲೀಸರು ಗುಂಡುಹಾರಿಸಿ ಬಂಧಿಸಿದ್ದಾರೆ. ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯ ಗಣೇಶ ಬ್ಲಾಕ್‌ನಲ್ಲಿ ನವೆಂಬರ್ 21ರಂದು ಒಬ್ಬ ಯುವಕನನ್ನು ಕೊಂದು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಈ ವೇಳೆ ಆತ್ಮರಕ್ಷಣೆಗಾಗಿ ನಂದಿನಿ ಲೇಔಟ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್ ಲೋಹಿತ್‌ರಿಂದ ಆರೋಪಿಗಳ ಮೇಲೆ ಫೈರಿಂಗ್ ಆಗಿದೆ.

ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದು, ಘಟನೆಯಲ್ಲಿ PSI ನಿತ್ಯಾನಂದ, ಪೇದೆ ಬಸವಣ್ಣಗೆ ಗಾಯಗಳಾಗಿವೆ. ಆರೋಪಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published On - 8:41 am, Sun, 24 November 19