ಬೆಂಗಳೂರು: ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಖಾಕಿ ಗನ್ ಸದ್ದು ಮಾಡಿದೆ. ನಗರದ ಡಿ.ಜೆ.ಹಳ್ಳಿಯ ಚರ್ಮದ ಮಂಡಿಯಲ್ಲಿ ಕೊಲೆ ಆರೋಪಿ ಯೂನಿಸ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
2 ದಿನದ ಹಿಂದೆ ಅಮ್ಜದ್‌ನನ್ನು ಕೊಲೆ ಮಾಡಿದ್ದ ಗ್ಯಾಂಗ್ನ ಲೀಡರ್ ಆಗಿದ್ದ ಆರೋಪಿ ಯೂನಿಸ್ನನ್ನು ಡಿ.ಜೆ.ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದರು. ಬೆಳಗ್ಗೆ ಮಾರಕಾಸ್ತ್ರ ವಶಕ್ಕೆ ಪಡೆಯಲು ಅಮ್ಜದ್‌ನನ್ನು ಕೊಲೆ ಮಾಡಿದ್ದ ಸ್ಥಳಕ್ಕೆ ಆರೋಪಿಯನ್ನ ಕರೆದೊಯ್ಯಲಾಗಿತ್ತು.
ಈ ವೇಳೆ ಆರೋಪಿ ಯೂನಿಸ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವುದಕ್ಕೆ ಯತ್ನಿಸಿದ್ದಾನೆ. ಶರಣಾಗುವಂತೆ ಇನ್ಸ್‌ಪೆಕ್ಟರ್ ಕೇಶವಮೂರ್ತಿ ಸೂಚಿಸಿದ್ದಾರೆ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದ್ರೂ ಲೆಕ್ಕಿಸದೆ ಪೇದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಪೊಲೀಸ್ ಪೇದೆ ಮತ್ತು ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Published On - 9:19 am, Tue, 3 March 20