ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಶಿವ ದೇವಾಲಯದ ಅರ್ಚಕರ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಕಣ್ಣುಗಳನ್ನು ಕೀಳಲಾಗಿತ್ತು, ಜನನಾಂಗವನ್ನು ಕತ್ತರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯು ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು, ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜಿಲ್ಲೆಯ ದಾನಾಪುರ ಗ್ರಾಮದ ಶಿವ ದೇವಸ್ಥಾನದ ಅರ್ಚಕ ಮನೋಜ್ ಕುಮಾರ್ ಎಂಬಾತ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ. ಅವರ ಸಹೋದರ ಅಶೋಕ್ ಕುಮಾರ್ ಶಾ ಬಿಜೆಪಿಯ ವಿಭಾಗೀಯ ಮಾಜಿ ಅಧ್ಯಕ್ಷರಾಗಿದ್ದಾರೆ.
ಮನೋಜ್ ಕುಮಾರ್ ಮನೆಯಿಂದ ದೇವಸ್ಥಾನಕ್ಕೆ ಹೋದಾಗ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದರೂ ಅವರ ಪತ್ತೆಗೆ ಸಾಧ್ಯವಾಗಿರಲಿಲ್ಲ.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಹಣ ಕೊಡಲಿಲ್ಲವೆಂದು ತಾಯಿಯನ್ನೇ ಕೊಂದು ಸೂಟ್ಕೇಸ್ನಲ್ಲಿ ಹೊತ್ತೊಯ್ದಿದ್ದ ವ್ಯಕ್ತಿಯ ಬಂಧನ
ಗ್ರಾಮದ ಪೊದೆಯಲ್ಲಿ ಶವ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮನೋಜ್ ಕುಮಾರ್ ನಾಪತ್ತೆಯಾದಾಗ ದೇವಸ್ಥಾನದಲ್ಲಿದ್ದ ಮತ್ತೊಬ್ಬ ಸಹೋದರ ಸುರೇಶ್ ಶಾ, ಮನೋಜ್ ಕುಮಾರ್ ಎಲ್ಲೋ ಹೊರಗೆ ಹೋಗಿದ್ದು, ಶೀಘ್ರದಲ್ಲೇ ವಾಪಸ್ ಬರುತ್ತಾರೆ ಎಂದು ಅವರ ಕುಟುಂಬದವರು ಭಾವಿಸಿದ್ದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ