ಸೈಕೋನಂತೆ ಆಡುತ್ತಿದ್ದ ಬ್ರಿಟಿಷ್ ಯುವಕ ತನ್ನ ಗರ್ಲ್​ಫ್ರೆಂಡ್​ಳನ್ನು 90 ಬಾರಿ ಇರಿದು ಕೊಂದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2022 | 7:44 AM

ಅದರೆ ಕೆಲವೇ ದಿನಗಳ ನಂತರ ಅವನು ತನ್ನ ಅಸಲಿ ರೂಪ ಪ್ರದರ್ಶಿಸಲಾರಂಭಿಸಿದ್ದ. ಅವಳ ಪೋನಲ್ಲಿ ಒಬ್ಬ ಬೆತ್ತಲೆ ಹೆಂಗಸಿನ ಪೋಟೋ ನೋಡಿದ ಬಳಿಕ ಅವಳಿಗೆ ಮನಬಂದಂತೆ ಹೊಡೆದಿದ್ದ.

ಸೈಕೋನಂತೆ ಆಡುತ್ತಿದ್ದ ಬ್ರಿಟಿಷ್ ಯುವಕ ತನ್ನ ಗರ್ಲ್​ಫ್ರೆಂಡ್​ಳನ್ನು 90 ಬಾರಿ ಇರಿದು ಕೊಂದ!
ಜ್ಯಾಕ್ ಸೆಪ್ಲ್​​ ಮತ್ತು ಆ್ಯಶ್ಲೀ ವಾಡ್ಸ್​​​ವರ್ತ್
Follow us on

ತನ್ನ ಪ್ರೇಯಸಿಯನ್ನು ಕೊಂದ ಬಳಿಕ ತನ್ನಮ್ಮನ ಕಾರನ್ನು ಜಜ್ಜಿದ ಒಬ್ಬ ಬ್ರಿಟಿಷ್ ಯುವಕನನ್ನು ಪೊಲೀಸರು ಬಂಧಿಸಿದ ಬಳಿಕ ತಾಯಿಯನ್ನು ಭೇಟಿಯಾಗುವ ಪ್ರಯತ್ನ ಮಾಡಕೂಡದೆಂದು ಕೋರ್ಟ್ ಆದೇಶಿಸಿದೆ. ಎಸ್ಸೆಕ್ಸ್ ನ ಚೆಮ್ಸ್ ಫೋರ್ಡ್ ನಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ 23-ವರ್ಷ-ವಯಸ್ಸಿನ ಜ್ಯಾಕ್ ಸೆಪ್ಲ್ ನನ್ನು (Jack Sepple) 19-ವರ್ಷದ ತನ್ನ ಗರ್ಲ್ ಫ್ರೆಂಡ್ ಆ್ಯಶ್ಲೀ ವಾಡ್ಸ್‌ವರ್ತ್ ಳನ್ನು (Ashley Wadsworth) ಕೊಂದ ಅಪರಾಧದಲ್ಲಿ ಎರಡು ವಾರಗಳ ಹಿಂದೆ ಜೈಲಿಗೆ ಹಾಕಲಾಗಿದೆ. ವಿಚಾರಣೆ ನಡೆಯುತ್ತಿದ್ದಾಗ ಸೆಪ್ಲ್ ವಿರುದ್ಧ ಕೌಟುಂಬಿಕ ಹಿಂಸೆಯ (domestic violence) 12 ಪ್ರಕರಣಗಳ ಪೈಕಿ 8 ರಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿ ಶಿಕ್ಷೆಯಾಗಿದ್ದು ಕೋರ್ಟಿನ ಗಮನಕ್ಕೆ ತರಲಾಯಿತು.

ಅವನ ಇಬ್ಬರು ಮಾಜಿ ಗೆಳತಿಯರನ್ನು ಸಹ ಯಾವತ್ತೂ ಭೇಟಿಯಾಗದ ಹಾಗೆ ನಿಷೇಧವನ್ನು ಅವನ ಮೇಲೆ ಹೇರಲಾಗಿತ್ತು. ಖುದ್ದು ಅವನ ತಾಯಿ ಟ್ರೇಸಿ ಡಾಲ್ಟನ್ 55, ಸಹ ಸೆಪ್ಲ್ ತನ್ನನ್ನು ಯಾವತ್ತೂ ಭೇಟಿಯಾಗದ ಹಾಗೆ ಕೋರ್ಟ್ ನಿಂದ ಆದೇಶ ಪಡೆದುಕೊಂಡಿದ್ದಾರೆ. 2018 ರಲ್ಲಿ ಅವನು ತನ್ನ ತನ್ನಮ್ಮ ಟ್ರೇಸಿಯ ಕಾರಿಗೆ ಹಾನಿಯುಂಟು ಮಾಡಿದಕ್ಕಾಗಿ, ಎಸ್ಸೆಕ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿತ್ತು. ಅಮ್ಮನ ಕಾರನ್ನು ಜಖಂಗೊಳಿಸಿದ ಅಪರಾಧವನ್ನು ಸೆಪ್ಲ್ ನಾಯಾಧೀಶರೆದರು ಅಂಗೀಕರಿಸಿದ್ದ.

ಬಾಲಾಪರಾಧಿಯಾಗಿಯೂ ಅವನು 8 ವಾರಗಳ ಶಿಕ್ಷೆಯನ್ನು ಬಾಲಾಪರಾಧಿಗಳ ಗೃಹದಲ್ಲಿ ಕಳೆದಿದ್ದ. ಮಾಜಿ ಪ್ರೇಯಸಿಯೊಬ್ಬಳಿಗೆ ಕಿರುಕುಳ ನೀಡಿದ ಅಪರಾಧದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾಗಲೂ ಅವನು ಶಿಕ್ಷೆಯ ಕ್ರಮವನ್ನು ಉಲ್ಲಂಘಿಸಿದ್ದ.

ಈ ಹಿಂದೆ, ತಾಯಿಯ ಮನೆಗೆ ಹೋಗದಂತೆ ಕೋರ್ಟ್ ವಿಧಿಸಿದ್ದ ನಿಷೇಧ ಜುಲೈ 2019 ರಲ್ಲಿ ಕೊನೆಗೊಂಡಿತ್ತು. ಅದಾದ ಮೇಲೆ ಅವನು ತಾಯಿಯೊಂದಿಗೆ ರಾಜಿ ಮಾಡಿಕೊಂಡಿದ್ದರಿಂದ ಟ್ರೇಸಿ ತನ್ನ ಮಗನನ್ನು ಈ ವರ್ಷದ ಆರಂಭದಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದರು. ಜನೆವರಿ 18 ರಂದು ಅವರು ತಮ್ಮ ಪ್ರವಾಸದ ಪೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು. ಒಂದು ಫೋಟೋದಲ್ಲಿ ಸೆಪ್ಲ್ ತನ್ನ ಗೆಳತಿ ವಾಡ್ಸ್‌ವರ್ತ್ ಸುತ್ತ ಕೈಬಳಸಿ ನೆಲದ ಮೇಲೆ ಕುಳಿತಿದ್ದಾನೆ.

ಅದಾದ ಕೇವಲ ಎರಡು ವಾರಗಳ ನಂತರ ಸೆಪ್ಲ್ ವಾಡ್ಸ್‌ವರ್ತ್ ಳನ್ನು ಇರಿದು ಕೊಂಡುಬಿಟ್ಟ. ನಂತರ ಅವನು ತನ್ನ ಸಹೋದರಿಗೆ ಫೇಸ್ ಟೈಮ್ ನಲ್ಲಿ ಫೋನ್ ಮಾಡಿ ತಾನು ಕೊಂದ ಹದಿಹರೆಯದ ಯುವತಿಯ ಮೃತದೇಹ ತೋರಿಸಿದ್ದ!

‘ವಿನಾಕಾರಣ ಹುಚ್ಚನಂತೆ ಸೆಪ್ಲ್ ಕೊಂದ ಯುವತಿಯ ದೇಹ ಅವನ ಫ್ಲ್ಯಾಟ್ ನಲ್ಲಿ ಪತ್ತೆಯಾಯಿತು, ಅವಳ ದೇಹದ ಮೇಲೆ 90 ಇರಿತದ ಗಾಯಗಳಿದ್ದವು,’ ಎಂದು ನ್ಯಾಯಾಧೀಶ ಮುರ್ರೇ ಹೇಳಿದ್ದರು.

ವಾಡ್ಸ್‌ವರ್ತ್ ಕೇವಲ 12 ವರ್ಷದವಳಾಗಿದ್ದಾಗ ಸೆಪ್ಲ್ ನನ್ನು ಆನ್ಲೈನ್ ಮೂಲಕ ಭೇಟಿಯಾಗಿದ್ದಳು.

ಮೂಲತಃ ಕೆನಡಾದವಳಾಗಿದ್ದ ವಾಡ್ಸ್ ವರ್ತ್ ತನ್ನ ವ್ಯಾಸಂಗದ ಒಂದು ವರ್ಷ ಬಿಡುವಿನ ಅವಧಿಯನ್ನು ತನ್ನಿನಿಯನೊಂದಿಗೆ ಕಳೆಯಲು ಕಳೆದ ವರ್ಷ ನವೆಂಬರ್ 12 ರಂದು ತನ್ನ ದೇಶದಿಂದ ಇಂಗ್ಲೆಂಡ್ ಗೆ ಬಂದಿದ್ದಳು.

ಅದರೆ ಕೆಲವೇ ದಿನಗಳ ನಂತರ ಅವನು ತನ್ನ ಅಸಲಿ ರೂಪ ಪ್ರದರ್ಶಿಸಲಾರಂಭಿಸಿದ್ದ. ಅವಳ ಪೋನಲ್ಲಿ ಒಬ್ಬ ಬೆತ್ತಲೆ ಹೆಂಗಸಿನ ಪೋಟೋ ನೋಡಿದ ಬಳಿಕ ಅವಳಿಗೆ ಮನಬಂದಂತೆ ಹೊಡೆದಿದ್ದ.

ವಾಡ್ಸ್‌ವರ್ತ್ ತನ್ನ ಸಾವಿಗೆ ಒಂದು ವಾರದ ಮೊದಲು ತನ್ನ ತಾಯಿಗೆ ಮನೆಗೆ ಬರಲು ಬಯಸುವುದಾಗಿ ಹೇಳಿದ್ದಳು ಮತ್ತು ಫೆಬ್ರವರಿ 3 ಕ್ಕೆ ವಿಮಾನದ ಟಿಕೆಟ್ ಕಾಯ್ದಿರಿಸಿದ್ದಳು

ಆದರೆ, ಫೆಬ್ರವರಿ 1 ರಂದು ಸೆಪ್ಲ್ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ.
ವಾಡ್ಸ್‌ವರ್ತ್ ತಾಯಿ ಕ್ರಿಸ್ಟಿ ಗೆಂಡ್ರಾನ ತನ್ನ ಮಗಳು ಕುಟುಂಬದ ಬೆನ್ನುಮೂಳೆ ಆಗಿದ್ದಳು ಎಂದು ಹೇಳಿದ್ದರು.

‘ನಿಮ್ಮ ಮಗಳು ತುಂಬಾ ಒಳ್ಳೆಯವಳು ಅಂತ ಜನ ನನಗೆ ಹೇಳುತ್ತಿದ್ದರು. ನನ್ನೊಬ್ಬ ಗೆಳತಿ, ‘ಅವಳು ನನ್ನ ಮಗನಿಗೆ ಅದ್ಭುತವಾದ ಸಂಗಾತಿಯಾಗುತ್ತಾಳೆ’ ಎಂದು ಹೇಳುತ್ತಿದ್ದಳು. ಬೇರೆ ಬೇರೆ ದೇಶದ ಸಂಸ್ಕೃತಿ, ಧರ್ಮ ಮತ್ತು ಭಾಷೆಗಳನ್ನು ಕಲಿಯಲು ವಾಡ್ಸ್‌ವರ್ತ್ ಉತ್ಸುಕಳಾಗಿರುತ್ತಿದ್ದಳು. ಪ್ರವಾಸ ಮಾಡುವುದನ್ನು ಅತಿಯಾಗಿ ಇಷ್ಟಪಡುತ್ತಿದ್ದಳು-ಅವಳು ಹಾಗೇನೇ; ತನಗೆ ಇಷ್ಟವಾಗುತ್ತಿದ್ದುದನ್ನು ಮಾಡುತ್ತಿದ್ದಳು,’ ಎಂದು ವಾಡ್ಸ್‌ವರ್ತ್ ತಾಯಿ ಹೇಳಿದ್ದರು.

‘ಅವಳನ್ನು ನಾನು ಆಧುನಿಕ ಯುಗದ ಹಿಪ್ಪೀ ಎನ್ನುತ್ತಿದ್ದೆ. ಅಸಲಿಗೆ ಅವಳು ಹಾಗೆಯೇ ಇದ್ದಳು,’ ಎಂದು ಕ್ರಿಸ್ಟಿ ಗೆಂಡ್ರಾನ ಹೇಳಿದ್ದರು.

‘ಜನರೆಂದರೆ ಅವಳಿಗೆ ತುಂಬಾ ಇಷ್ಟ, ಎಲ್ಲರನ್ನೂ ಅವಳು ಪ್ರೀತಿಸುತ್ತಿದ್ದಳು, ಸಹಾಯ ಮಾಡಲು ಇಷ್ಟಪಡುತ್ತಿದ್ದಳು, ಅವಳಿಗೆ ಬದುಕಿನ ಮೇಲೆ ಅಪಾರವಾದ ಪ್ರೀತಿ ಇತ್ತು. ಅಲ್ಪಾಯುಷಿಯಾಗಿಯೇ ಅವಳು ಜೀವನವನ್ನು ಪೂರ್ತಿಯಾಗಿ ಬದುಕಿದಳು,’ ಎಂದು ಅವರು ಹೇಳಿದ್ದರು.

‘ನಾನು ಅವಳಿಗೆ ನಿನ್ನ ರೂಮು ಸ್ವಚ್ಛ ಮಾಡಿಕೋ ಎಂದು ಹೇಳುತ್ತಿದ್ದೆ. ಅದಕ್ಕವಳು ‘ಅಮ್ಮಾ, ಅದು ನನಗೆ ಮುಖ್ಯವಲ್ಲ ಅಂತ ನಿನಗೂ ಗೊತ್ತು, ಆದರೆ ನೀನು ಹಾಗೆ ಭಾವಿಸುತ್ತೀ, ಎಂದು ಹೇಳುತ್ತಿದ್ದಳು.’

‘ಸಾಯಲೆಂದೇ ಬದುಕುತ್ತಿದ್ದೇನೆ ಎಂಬಂಥ ರೀತಿಯಲ್ಲಿ ಅವಳು ಜೀವಿಸಿದಳು!’

‘ಅವಳು ಎಲ್ಲವೂ ಆಗಿದ್ದಳು ಆದರೆ ನಾನು ಅವಳಂತಿರಲಿಲ್ಲ, ಅವಳು ನಿರ್ಭಿಡೆ ಸ್ವಭಾವದಳಾಗಿದ್ದಳು, ಮೂರು ಸದಸ್ಯರ ನಮ್ಮ ಕುಟುಂಬದ ಬೆನ್ನೆಲುಬಾಗಿದ್ದಳು! ನಾನೊಬ್ಬ ಸಿಂಗಲ್ ಮದರ್,’ ಎಂದು ತಾಯಿ ಕ್ರಿಸ್ಟಿ ಗೆಂಡ್ರಾನ ಹೇಳಿದ್ದರು.