PUBG: ಪಬ್​ಜಿ ಪ್ರಭಾವ; ತನ್ನ ಕುಟುಂಬದ ಎಲ್ಲರನ್ನೂ ಶೂಟ್ ಮಾಡಿ ಕೊಂದ 14 ವರ್ಷದ ಬಾಲಕ

| Updated By: ಸುಷ್ಮಾ ಚಕ್ರೆ

Updated on: Jan 28, 2022 | 7:55 PM

PUBG ವ್ಯಸನಿಯಾಗಿದ್ದ ಹುಡುಗ ಆಟದ ಪ್ರಭಾವದಿಂದ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

PUBG: ಪಬ್​ಜಿ ಪ್ರಭಾವ; ತನ್ನ ಕುಟುಂಬದ ಎಲ್ಲರನ್ನೂ ಶೂಟ್ ಮಾಡಿ ಕೊಂದ 14 ವರ್ಷದ ಬಾಲಕ
ಪಬ್​ಜಿ
Follow us on

ಲಾಹೋರ್: ಆನ್‌ಲೈನ್ ಗೇಮ್ ಪಬ್​ಜಿ (PUBG) ಪ್ರಭಾವದಿಂದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಅಣ್ಣ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ಸೇರಿದಂತೆ ಇಡೀ ಕುಟುಂಬವನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯಲ್ಲಿ ನಡೆದಿದೆ. ಕಳೆದ ವಾರ ಲಾಹೋರ್‌ನ ಕಹ್ನಾ ಪ್ರದೇಶದಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್ ತನ್ನ 22 ವರ್ಷದ ಮಗ ತೈಮೂರ್ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶವವಾಗಿ ಪತ್ತೆಯಾಗಿದ್ದರು.

PUBG ವ್ಯಸನಿಯಾಗಿದ್ದ ಹುಡುಗ ಆಟದ ಪ್ರಭಾವದಿಂದ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ದಿನದ ಹೆಚ್ಚಿನ ಸಮಯವನ್ನು ಆನ್‌ಲೈನ್ ಆಟವಾಡುತ್ತಾ ಕಳೆಯುವುದರಿಂದ ಆತ ಕೆಲವು ಮಾನಸಿಕ ಸಮಸ್ಯೆಗಳನ್ನು ಬೆಳೆಸಿಕೊಂಡಿದ್ದ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಹೀದ್ ವಿಚ್ಛೇದಿತೆಯಾಗಿದ್ದು, ತನ್ನ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸದಿದ್ದಕ್ಕಾಗಿ ಮತ್ತು PUBG ಆಟದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದಕ್ಕಾಗಿ ಆಗಾಗ ಆ ಹುಡುಗನಿಗೆ ಬುದ್ಧಿ ಹೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಘಟನೆಯ ದಿನ ನಹೀದ್ ಈ ವಿಷಯದ ಬಗ್ಗೆ ಹುಡುಗನನ್ನು ಗದರಿಸಿದ್ದರು. ಇದರಿಂದ ಕೋಪಗೊಂಡ ಆ ಹುಡುಗನು ತನ್ನ ತಾಯಿಯ ಪಿಸ್ತೂಲ್ ಅನ್ನು ಕಬೋರ್ಡ್‌ನಿಂದ ಹೊರತೆಗೆದು ಅವಳನ್ನು ಕೊಲೆ ಮಾಡಿದ್ದ. ಹಾಗೇ, ನಿದ್ರೆಯಲ್ಲಿದ್ದ ಇಬ್ಬರು ಸೋದರಿಯರನ್ನು ಶೂಟ್ ಮಾಡಿದ್ದ. ಮರುದಿನ ಬೆಳಿಗ್ಗೆ ಆ ಹುಡುಗ ಜೋರಾಗಿ ಕಿರುಚಾಡಿ ನೆರೆಹೊರೆಯವರನ್ನು ಕರೆದಿದ್ದ. ಅಕ್ಕಪಕ್ಕದ ಮನೆಯವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಆ ಸಮಯದಲ್ಲಿ ನಾನು ಮನೆಯ ಮೇಲಿನ ಮಹಡಿಯಲ್ಲಿದ್ದೆ, ನನ್ನ ಕುಟುಂಬದವರು ಹೇಗೆ ಸತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ ಎಂದು ಆ ಹುಡುಗ ಪೊಲೀಸರಿಗೆ ತಿಳಿಸಿದ್ದ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶಂಕಿತ ವ್ಯಕ್ತಿಯ ರಕ್ತದ ಬಟ್ಟೆಯನ್ನು ವಶಪಡಿಸಿಕೊಳ್ಳಲಾಗಿದೆ. ಡಾನ್ ಪತ್ರಿಕೆಯ ವರದಿಯ ಪ್ರಕಾರ, ಲಾಹೋರ್‌ನಲ್ಲಿ ಆನ್‌ಲೈನ್ ಆಟಕ್ಕೆ ಸಂಬಂಧಿಸಿದಂತೆ ಇದು ನಾಲ್ಕನೇ ಅಪರಾಧವಾಗಿದೆ. 2020 ರಲ್ಲಿ ಪಬ್​ಜಿ ಕಾರಣಕ್ಕೆ ಮೊದಲ ಸಾವಿನ ಪ್ರಕರಣ ಕಾಣಿಸಿಕೊಂಡಾಗ ಅಂದಿನ ಪೊಲೀಸ್ ಅಧಿಕಾರಿ ಜುಲ್ಫಿಕರ್ ಹಮೀದ್ ಲಕ್ಷಾಂತರ ಹದಿಹರೆಯದವರ ಜೀವ, ಸಮಯ ಮತ್ತು ಭವಿಷ್ಯವನ್ನು ಉಳಿಸಲು ಪಬ್​ಜಿ ಆಟವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದ್ದರು.

ಕಳೆದ ಎರಡು ವರ್ಷಗಳಲ್ಲಿ ಮೂವರು ಯುವ ಆಟಗಾರರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಮತ್ತು ಪೊಲೀಸರು ಅದರ ವರದಿಗಳಲ್ಲಿ PUBG ಸಾವಿನ ಹಿಂದಿನ ಕಾರಣ ಎಂದು ಘೋಷಿಸಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಪಬ್‌ಜಿ ಗೇಮ್​ ಹುಚ್ಚಿಗೆ ಬಲಿಯಾದ ನಾಲ್ವರು ಸ್ನೇಹಿತರು

Viral Video: ಮದುವೆ ದಿನದಂದೇ ಮೊಬೈಲ್​ನಲ್ಲಿ ಗೇಮ್ ಆಡುತ್ತಾ ಕುಳಿತ ವಧು ವರರು; ವಿಡಿಯೋ ವೈರಲ್

Published On - 7:54 pm, Fri, 28 January 22