ಮೊಲ ಬೇಟೆಯಾಡಿ ಟಿಕ್ ಟಾಕ್ ಮಾಡಿದ್ದ ಆರೋಪಿಗಳು ಅಂದರ್
ತುಮಕೂರು: ಕಾಡು ಮೊಲವನ್ನು ಬೇಟೆಯಾಡಿ ಟಿಕ್‌ಟಾಕ್ ಮಾಡಿ ವಿಡಿಯೋ ವೈರಲ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ತಾಲೂಕಿನ ಕರಿದುಗ್ಗನಹಳ್ಳಿ ಗ್ರಾಮದ ವಿನಯ್, ವಿನಯ್ ಕುಮಾರ್ ಬಂಧಿತ ಆರೋಪಿಗಳು. ಮೊಲ ಬೇಟೆಯಾಡಿ ಮಾಂಸ ಕತ್ತರಿಸುವುದನ್ನು ಟಿಕ್ ಟಾಕ್ ಮಾಡಿದ್ದರು. ಈ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತುಮಕೂರು ಉಪ ಅರಣ್ಯ ಸಂರಕ್ಷಾಣಾದಿಕಾರಿ ಹೆಚ್.ಸಿ.ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 2(16), 9, 39, 50, […]
ತುಮಕೂರು: ಕಾಡು ಮೊಲವನ್ನು ಬೇಟೆಯಾಡಿ ಟಿಕ್‌ಟಾಕ್ ಮಾಡಿ ವಿಡಿಯೋ ವೈರಲ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ತಾಲೂಕಿನ ಕರಿದುಗ್ಗನಹಳ್ಳಿ ಗ್ರಾಮದ ವಿನಯ್, ವಿನಯ್ ಕುಮಾರ್ ಬಂಧಿತ ಆರೋಪಿಗಳು.
ಮೊಲ ಬೇಟೆಯಾಡಿ ಮಾಂಸ ಕತ್ತರಿಸುವುದನ್ನು ಟಿಕ್ ಟಾಕ್ ಮಾಡಿದ್ದರು. ಈ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತುಮಕೂರು ಉಪ ಅರಣ್ಯ ಸಂರಕ್ಷಾಣಾದಿಕಾರಿ ಹೆಚ್.ಸಿ.ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 2(16), 9, 39, 50, 51 ಅಡಿ ಪ್ರಕರಣ ದಾಖಲಾಗಿದೆ.