ಚಲಿಸುತ್ತಿರುವ ಬಸ್ನಲ್ಲಿ ಇಬ್ಬರು ಚಾಲಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ, ಜೈಪುರ ಪೊಲೀಸರು ಎರಡನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸೆಂಬರ್ 9-10 ರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ನಾವು ಆರೋಪಿಗಳಲ್ಲಿ ಒಬ್ಬನನ್ನು ಆರಿಫ್ ಖಾನ್ (22) ಎಂದು ಗುರುತಿಸಿದ್ದೇವೆ ಮತ್ತು ಎರಡನೇ ಶಂಕಿತ ಲಲಿತ್ ಕುಮಾರ್ (24) ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಯುವತಿ ತನ್ನ ಚಿಕ್ಕಪ್ಪನನ್ನು ಭೇಟಿಯಾಗಲು ಉತ್ತರ ಪ್ರದೇಶದಿಂದ ಜೈಪುರಕ್ಕೆ ಪ್ರಯಾಣಿಸಿದ್ದಳು, ಅವರು ಹೊಲಿಗೆ ಕಂಪನಿಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು.
ಯುವತಿ ಕಾನ್ಪುರದಲ್ಲಿ ಬಸ್ ಹತ್ತಿದ್ದಳು, ತುಂಬಿದ ಬಸ್ನಲ್ಲಿ ಪ್ರಯಾಣಿಸುತ್ತಿದ್ದಳು, ಜಾಗವಿಲ್ಲದ ಕಾರಣ ಡ್ರೈವರ್ ಕ್ಯಾಬಿನ್ನಲ್ಲಿ ಮಲಗುವಂತೆ ಕೇಳಿದ್ದರು. ಬಸ್ನಲ್ಲಿರುವ ಇತರೆ ಪ್ರಯಾಣಿಕರಿಗೆ ಶಬ್ಧ ಕೇಳಿಸದಂತೆ ಮ್ಯೂಸಿಕ್ ದೊಡ್ಡದಾಗಿ ಹಾಕಿದ್ದರು. ಅಲ್ಲೇ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಓದಿ: ದೆಹಲಿ: 6 ಸ್ನೇಹಿತರಿಂದ ಅಪ್ರಾಪ್ತ ಬಾಲಕನ ಕೊಲೆ
ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ಸು ಹಾದು ಹೋಗುತ್ತಿದ್ದಾಗ ಕೆಲವು ಪ್ರಯಾಣಿಕರಿಗೆ ಕೂಗು ಕೇಳಿಸಿತ್ತು, ಪೆಟ್ರೋಲ್ ಪಂಪ್ ಬಳಿ ಬಸ್ ನಿಲ್ಲಿಸಿದಾಗ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿದ್ದಾರೆ ಮತ್ತೊಬ್ಬ ಪರಾರಿಯಾಗಿದ್ದಾನೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ