ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಸುತ್ತ ಅನುಮಾನದ ಸುಳಿ ಸುಂಟರಗಾಳಿಯಂತೆ ಸುಳಿಯುತ್ತಿದೆ. ಈ ಹಿಂದೆ, ಐಟಿ ಅಧಿಕಾರಿಗಳ ಕಿರುಕುಳವೇ ರಮೇಶ್ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಲಾಗುತ್ತಿತ್ತು. ಆದರೆ ಈಗ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ.
ಪ್ರಕರಣ 1: ಪರಮೇಶ್ವರ್ ಹೆಸರಲ್ಲಿ IMA ಸಂಸ್ಥೆಯಿಂದ ಪಡೆದ ಹಣವೇ ಉರುಳು
ಪರಮೇಶ್ವರ್ ಗೃಹ ಸಚಿವರಾಗಿದ್ದಾಗ ಅವರ ಹೆಸರನ್ನು ಪಿಎ ರಮೇಶ್ ದುರ್ಬಳಕೆ ಮಾಡಿದ್ದಾಗಿ ತಿಳಿದು ಬಂದಿದೆ. ಬಹು ಕೋಟಿ ವಂಚನೆ ಮಾಡಿದ್ದ ಐಎಂಎ ಪ್ರಕರಣದಲ್ಲಿ ರಮೇಶ್, ಪರಮೇಶ್ವರ್ ಹೆಸರು ಬಳಸಿ ಐಎಂಎ ಸಂಸ್ಥೆಯಿಂದ 5 ಕೋಟಿ ರೂ ಪಡೆದಿದ್ದ. ಈ ವಿಚಾರವನ್ನು ಐಟಿ ಅಧಿಕಾರಿಗಳು ಮನೆಯಿಂದ ವಶಪಡಿಸಿಕೊಂಡಿರುವ ರಮೇಶ್ ಡೈರಿಯಲ್ಲಿ ಪತ್ತೆಯಾಗಿದೆ.
ಪ್ರಕರಣ 2: ಹೇಗಿದ್ದವನು ಹೇಗಾದೆ!
ಪ್ರಕರಣ 3: ಎರಡು ಕೋಟಿ ಹಣದ ಲೆಕ್ಕ ಮಾತ್ರ ಸಿಕ್ಕಿತು
ರಮೇಶ್ ಮನೆಯಲ್ಲಿ ಐಟಿ ದಾಳಿಯ ವೇಳೆ ಐಟಿಗೆ 2 ಕೋಟಿ ಹಣ ಸಿಕ್ಕಿತ್ತು. ಆ ಹಣಕ್ಕೆ ಐಟಿ ವಿಚಾರಣೆ ವೇಳೆ ಲೆಕ್ಕ ಕೊಡುವ ಸವಾಲು ರಮೇಶ್ ಮುಂದಿತ್ತು. ಅದಲ್ಲದೆ, ಐಟಿಗೆ ಬೇರೆ ಬೇರೆ ಆಸ್ತಿಗಳ ಕಾಗದ ಪತ್ರ, ದಾಖಲಾತಿಗಳೂ ಸಿಕ್ಕಿದ್ದವು. ಇವುಗಳಿಗೆಲ್ಲ ಲೆಕ್ಕ ಕೊಡುವ ಸ್ಥಿತಿಯಲ್ಲಿ, ರಮೇಶ್ ಇರಲಿಲ್ಲ.
ಈ ಮೂರು ವಿಚಾರಗಳಿಂದ ಬಹಳ ಹೆದರಿದ್ದ ರಮೇಶ್, ಐಟಿ ಅಧಿಕಾರಿಗಳು ಈ ಎಲ್ಲಾ ವಿಚಾರವನ್ನು ಬಹಿರಂಗಗೊಳಿಸುತ್ತಾರೆ. ತಾನು ಡಿಕೆ ಶಿವಕುಮಾರ್ ಮಾದರಿಯಲ್ಲೇ ಜೈಲು ಪಾಲಾಗುತ್ತೇನೆ. ತಾನು, ತನ್ನ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತೆ ಎಂದು ಹೆದರಿ ಸಾವಿಗೆ ಶರಣಾಗುವಂತೆ ಮಾಡಿತ್ತು ಎಂದು ವಿಶ್ವಸನೀಯ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Published On - 4:52 pm, Thu, 17 October 19