ನೈಸ್ ರಸ್ತೆಯಲ್ಲಿ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್

|

Updated on: Jan 08, 2021 | 11:36 PM

ನೈಸ್ ರಸ್ತೆಯಲ್ಲಿ ದರೋಡೆಗೆ ಯತ್ನಿಸ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡ್ತಿದ್ದ ಆರೋಪಿ ಶಿವಕುಮಾರ್ ಅಲಿಯಾಸ್​ ದಡಿಯಾ ಶಿವಕುಮಾರ್​ನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ನೈಸ್ ರಸ್ತೆಯಲ್ಲಿ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್
ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್
Follow us on

ಬೆಂಗಳೂರು: ನೈಸ್ ರಸ್ತೆಯಲ್ಲಿ ದರೋಡೆಗೆ ಯತ್ನಿಸ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡ್ತಿದ್ದ ಆರೋಪಿ ಶಿವಕುಮಾರ್ ಅಲಿಯಾಸ್​ ದಡಿಯಾ ಶಿವಕುಮಾರ್​ನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್​ ಹಾಗೂ ಆತನ ಸಹಚರ ಪ್ರವೀಣ ಎಂಬಾತ ಕನಕಪುರ, ಮಾಗಡಿ, ಬಿಡದಿ, ನೈಸ್ ​ರಸ್ತೆಯಲ್ಲೇ ಹೆಚ್ಚು ದರೋಡೆ ನಡೆಸಿದ್ದರು ಎಂದು ಹೇಳಲಾಗಿದೆ. ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

ರಾಬರಿ ಮಾಡಿ‌‌ದ ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಳ್ತಿದ್ದ ಇಬ್ಬರು ಖದೀಮರು ಈ ಹಿಂದೆ ದರೋಡೆ ಕೇಸ್​ನಲ್ಲಿ ಜೈಲು‌ ಸೇರಿದ್ದರು. ಆದರೆ, ಜೈಲಿನಿಂದ ಹೊರಬಂದ ನಂತರ ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದರು. ಅಂತೆಯೇ, ಇಂದು ರಾತ್ರಿ ವೇಳೆ ದರೋಡೆಗೆ ಯತ್ನಿಸುವಾಗ ನೈಸ್ ರಸ್ತೆ ಸಿಬ್ಬಂದಿಗೆ ಶಿವಕುಮಾರ್​ ರೆಡ್ ಹ್ಯಾಂಡ್ ಆಗಿ‌ ಸಿಕ್ಕಿಬಿದ್ದಿದ್ದಾನೆ. ಇನ್ನು, ಮತ್ತೊಬ್ಬ ಆರೋಪಿ ಪ್ರವೀಣ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದು ಆತನಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸದಾಶಿವನಗರ: ಹಣ ಕಸಿದು ಪರಾರಿಯಾಗುತ್ತಿದ್ದ ಕಳ್ಳರಿಗೆ ಸ್ಥಳೀಯರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ

Published On - 11:31 pm, Fri, 8 January 21