
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ನೇಹಿತರಿಂದಲೇ ರೌಡಿಶೀಟರ್ ಅಶೋಕ್ ಅಲಿಯಾಸ್ ದಡಿಯಾ ಎಂಬುವನನ್ನು ಬರ್ಬರ ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಭಾರತಿನಗರದಲ್ಲಿ ನಡೆದಿದೆ. ತಡರಾತ್ರಿ ಕಂಠಪೂರ್ತಿ ಕುಡಿದ ಸ್ನೇಹಿತರು ವೈಯಕ್ತಿಕ ದ್ವೇಶದ ಹಿನ್ನೆಲೆಯಲ್ಲಿ ರೌಡಿಶೀಟರ್ ಅಶೋಕ್ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಂಠಪೂರ್ತಿ ಕುಡಿದ ಬಳಿಕ ರೌಡಿಶೀಟರ್ ಅಶೋಕ್ನನ್ನು ಸ್ನೇಹಿತರು ಕೊಲೆಗೈದಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Published On - 4:26 pm, Fri, 8 May 20