ಬೆಂಗಳೂರು: ನಗರದ ಉಲ್ಲಾಳು ಬಳಿ ರೌಡಿಶೀಟರ್ನ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಅರುಣ್ ಎಂಬ ರೌಡಿಶೀಟರ್ನ ಬರ್ಬರ ಹತ್ಯೆಯಾಗಿದೆ. ಅರುಣ್ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಅರುಣ್ನನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಅರುಣ್ ಶವವನ್ನು ರವಾನಿಸಲಾಗಿದೆ.
ಹಣಕ್ಕಾಗಿ ಭಿಕ್ಷುಕಿ ಕೊಲೆ
ಇತ್ತ, ಅರಮನೆ ನಗರಿ ಮೈಸೂರಿನ ಕೆ.ಟಿ.ಸ್ಟ್ರೀಟ್ನಲ್ಲಿ ಭಿಕ್ಷುಕಿಯೊಬ್ಬರನ್ನು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿದೆ. ಹಣಕ್ಕಾಗಿ ಭಿಕ್ಷುಕಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಪೊಲೀಸರ ತನಿಖೆ ನಂತರ ಸಾವಿನ ಬಗ್ಗೆ ಮಾಹಿತಿ ಸಿಗಲಿದೆ. ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರೌಡಿಗಳ ನಡುವೆ ಮಾರಾಮಾರಿಯಲ್ಲಿ ರೌಡಿಶೀಟರ್ ಕೊಲೆ
ಮುನೇಶ್ವರ ದೇವಸ್ಥಾನದ ಬಳಿ ಅರುಣ್ ಕುಮಾರ್ ಕೊಲೆ ನಡಿದಿದೆ. ಕೃಷ್ಣ ಅಲಿಯಾಸ್ ಚಪ್ಪರ್ ಕೃಷ್ಣನ ಗ್ಯಾಂಗ್ನಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತ ರೌಡಿಶೀಟರ್ ಅರುಣ್ ಉಲ್ಲಾಳು ಕಾರ್ತಿಕ್, ಸಾದಿಕ್ ಗ್ಯಾಂಗ್ನಲ್ಲಿದ್ದ.
ಈ ಮೊದಲು ಒಂದೇ ಗುಂಪಿನಲ್ಲಿದ್ದ ಕೃಷ್ಣ, ಅರುಣ್ ಕುಮಾರ್ ವೈಮನಸ್ಸಿನಿಂದ ಬೇರೆ ಬೇರೆಯಾಗಿದ್ದರು. ಇಂದು, ಸ್ಥಳೀಯ ಜಾತ್ರೆಯಲ್ಲಿ ಮುಖಾಮುಖಿಯಾಗಿದ್ದ ಕೃಷ್ಣ, ಅರುಣ್ ರೌಡಿಗಳ 2 ಗುಂಪಿನ ಮಧ್ಯೆ ಹೊಡೆದಾಟದಲ್ಲಿ ಅರುಣ್ ಹತ್ಯೆಯಾಗಿದೆ.
ಇದನ್ನೂ ಓದಿ: ರಸ್ತೆ ಡಿವೈಡರ್ಗೆ ಬೈಕ್ ಡಿಕ್ಕಿ: ತಾಯಿ, ಮಾವನ ಜೊತೆ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು
Published On - 10:26 pm, Tue, 16 February 21