ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ A3 ವಿರೇನ್ ಖನ್ನಾನ ನಾರ್ಕೋ ಅನಾಲಿಸಿಸ್ ಟೆಸ್ಟ್ಗೆ ಒಳಪಡಿಸಲು ಕೋರ್ಟ್ ಅನುಮತಿ ನೀಡಿದೆ.
ಸಿಸಿಹೆಚ್ 33 ಕೋರ್ಟ್ನಿಂದ ನಾರ್ಕೋ ಟೆಸ್ಟ್ಗೆ ಅನುಮತಿ ದೊರೆತಿದೆ. ಆರೋಪಿ ಖನ್ನಾ ಡ್ರಗ್ಸ್ ಪಾರ್ಟಿ ಹಾಗೂ ಮಾದಕ ವಸ್ತುಗಳನ್ನು ತರಿಸುತ್ತಿದ್ದ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ CCB ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ನಾರ್ಕೋ ಟೆಸ್ಟ್ಗೆ ಮನವಿ ಸಲ್ಲಿಸಿದ್ದರು.
ಇದೀಗ, ಅನುಮತಿ ದೊರೆತ ಹಿನ್ನೆಲೆಯಲ್ಲಿ ಆರೋಪಿ ವಿರೇನ್ ಖನ್ನಾನನ್ನು ಪರೀಕ್ಷೆಗಾಗಿ ಅಹಮದಾಬಾದ್ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಆದ್ರೆ ಈ ಪರೀಕ್ಷೆಗೆ ವಿರೇನ್ ಖನ್ನಾ ಒಪ್ಪಿಗೆ ಕೂಡಾ ಅಗತ್ಯ. ಬಟ್, ವಿರೇನ್ ಖನ್ನಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.