Raj Kundra Audi Car: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಹಿಟ್ ಅಂಡ್​ ರನ್ ಅಪಘಾತಕ್ಕೆ ತುತ್ತು

Raj Kundra Audi Car accident | ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಹಿಟ್ & ರನ್ ಕೇಸ್​ಗೆ ಸಂಬಂಧಿಸಿ ಅಪಘಾತ ಮಾಡಿದ್ದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಎಂಬುದು ಪತ್ತೆಯಾಗಿದೆ.

Raj Kundra Audi Car: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಹಿಟ್ ಅಂಡ್​ ರನ್ ಅಪಘಾತಕ್ಕೆ ತುತ್ತು
ರಾಜ್ ಕುಂದ್ರಾಗೆ ಸೇರಿದ್ದ AUDI R8 ಐಷಾರಾಮಿ ಕಾರು ಆಟೋ, ಬೈಕ್‌ಗೆ ಡಿಕ್ಕಿ ಹೊಡೆದಿದೆ.

Updated on: Feb 12, 2021 | 2:41 PM

ಬೆಂಗಳೂರು: ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಹಿಟ್ & ರನ್ ಕೇಸ್ ನಲ್ಲಿ ಅಪಘಾತಕ್ಕೊಳಗಾಗಿದ್ದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಎಂಬುದಾಗಿ ತಿಳಿದುಬಂದಿದೆ. ಈ ಹಿಟ್ ಆ್ಯಂಡ್ ರನ್ ಅಪಘಾತವಿ ಇದೇ ತಿಂಗಳ ಫೆಬ್ರವರಿ 7ರಂದು ನಡೆದಿದ್ದು ರಾಜ್ ಕುಂದ್ರಾಗೆ ಸೇರಿದ್ದ AUDI R8 ಐಷಾರಾಮಿ ಕಾರು ಆಟೋ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಫೆಬ್ರವರಿ 7 ರ ಮಧ್ಯಾಹ್ನ ಈ ಘಟನೆ ನಡೆದಿದ್ದು ಅಜಾಗರೂಕತೆ ಚಾಲನೆಯಿಂದ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಆರೋಪಿ ಮೊಹಮ್ಮದ್ ಸದಾಬ್‌ ಎಂಬುವ ವ್ಯಕ್ತಿ ಡ್ರೈವಿಂಗ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಆದರೆ ಈ ಮಧ್ಯೆ, 4 ತಿಂಗಳ ಹಿಂದೆಯೇ ಮುಂಬೈ ಮೂಲದ ಕಾರ್ ಡೀಲರ್​ಗೆ ತನ್ನ ಐಷಾರಾಮಿ ಕಾರನ್ನು ರಾಜ್ ಕುಂದ್ರಾ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ಬಳಿಕ ಇದು ಮುಂಬೈ ಡೀಲರ್ ಮೂಲಕ ಬೆಂಗಳೂರು ಕಾರ್ ಡೀಲರ್​ಗೆ ಮಾರಾಟವಾಗಿದೆ. ಮಾರಾಟವಾಗಿ 4 ತಿಂಗಳಾದರೂ ಕಾರಿನ ದಾಖಲೆ ಪತ್ರಗಳು ರಾಜ್ ಕುಂದ್ರಾ ಹೆಸರಿನಲ್ಲಿಯೇ ಇರುವುದು ಪತ್ತೆಯಾಗಿದೆ. RTO ಮೂಲಕ ಕಾರ್ ಮಾಲೀಕ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಪತಿ ರಾಜ್ ಕುಂದ್ರಾ ಎಂಬುದು ಗೊತ್ತಾಗಿದೆ.

ಸದ್ಯ ಅಪಘಾತ ವೆಸಗಿದ AUDI R8 ಐಷಾರಾಮಿ ಕಾರಿನ ದಾಖಲೆಗಳು ರಾಜ್ ಕುಂದ್ರಾರ ಹೆಸರಿನಲ್ಲಿದೆ. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇನ್ನು ಇತ್ತೀಚೆಗಷ್ಟೆ ನಟಿ ಶಿಲ್ಪ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ದಂಪತಿ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ವಿಶೇಷ ಎಂದರೆ ಇದು 7 ಸೀಟರ್ ಕಾರ್ ಆಗಿದ್ದು ಇದರ ಬೆಲೆ ಒಂದು ಕೋಟಿ ರೂ. ಗೂ ಹೆಚ್ಚಾಗಿದೆ.

ಶಿಲ್ಪಾ ಶೆಟ್ಟಿ-ರಾಜ್​​ ಕುಂದ್ರಾ

ಇದನ್ನೂಓದಿ:  Audi R8 ಕಾರಿನಲ್ಲಿ ಬಂದು.. ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕ ಪತ್ತೆ

Published On - 2:33 pm, Fri, 12 February 21