ಶಿವಮೊಗ್ಗ: ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವು

|

Updated on: Mar 11, 2023 | 8:36 AM

ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನು ವಾಪಸ್ ಮನೆಗೆ ಜೀವಂತವಾಗಿ ಬರಲೇ ಇಲ್ಲ. ಪಾರ್ಟಿ ಮುಗಿಸಿ ವಾಪಸ್ ಮನೆಗೆ ಹೆಜ್ಜೆ ಹಾಕುತ್ತಿದ್ದ ಯುವಕನು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಇದೊಂದು ಅಪಘಾತವೋ ಅಥವಾ ಕೊಲೆಯೋ ಎನ್ನುವ ಅನುಮಾನ ಇದೀಗ ಕುಟುಂಬಸ್ಥರಿಗೆ ಶುರುವಾಗಿದೆ.

ಶಿವಮೊಗ್ಗ: ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವು
ಮೃತ ಸುರೇಶ್(22)
Follow us on

ಶಿವಮೊಗ್ಗ: ಪಾರ್ಟಿಗೆಂದು ಹೋಗಿದ್ದ ಸುರೇಶ್(22) ಎನ್ನುವ ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ನಗರದ ರೈಲ್ವೆ ಪ್ಲೈ ಓವರ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪದಲ್ಲಿ ಸ್ನೇಹಿತರಿಬ್ಬರು ಎಣ್ಣೆ ಪಾರ್ಟಿ ಮಾಡಿದ್ದರು. ಹೀಗೆ ಪಾರ್ಟಿಯಲ್ಲಿ ಎಣ್ಣೆ ಕುಡಿಯುತ್ತ ಕುಳಿತಿದ್ದ ಸುರೇಶ್​ನಿಗೆ, ವೇಗವಾಗಿ ಫಲ್ಸರ್ ಬೈಕ್​ನಲ್ಲಿ ಬಂದು ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಈ ವೇಳೆ ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಮೃತಪಟ್ಟಿದ್ದಾನೆ. ಸುರೇಶ್​ ಶಿವಮೊಗ್ಗದ ಶರಾವತಿ ನಗರದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದನು. ಈತನ ಪೋಷಕರು ಚಿಕ್ಕಮಗಳೂರಿನ ಕಡೂರಿನಲ್ಲಿ ವಾಸವಾಗಿದ್ದಾರೆ. ಇತನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಇದೀಗ ಸುರೇಶನ ಸಾವು ಕುಟುಂಬಸ್ಥರಿಗೆ ದೊಡ್ಡ ಆಘಾತ ತಂದಿದೆ. ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇನ್ನು ಮೃತ ಸುರೇಶ್​ ಮೈಮೇಲೆ ಅಪಘಾತದ ಯಾವುದೇ ದೊಡ್ಡ ಗಾಯಗಳಿಲ್ಲ. ಈ ನಡುವೆ ಆತ ಹೇಗೆ ಮೃತಪಟ್ಟನು ಎನ್ನುವ ಅನುಮಾನ ಮೃತನ ಕುಟುಂಬಸ್ಥರಿಗೆ ಕಾಡುತ್ತಿದೆ. ಮನೆಗೆ ಆಸರೆ ಆಗಬೇಕಿದ್ದ ಮಗನು ಸಾವಿನ ಮನೆ ಸೇರಿದ್ದು, ಹೆತ್ತವರು ಅನಾಥವಾಗಿದ್ದಾರೆ. ಆ ದಿನ ನಡೆದ ಘಟನೆಯಲ್ಲಿ ಸುರೇಶ್​ನ ತಲೆ ಮತ್ತು ಮತ್ತು ಭುಜಕ್ಕೆ ಸಣ್ಣ ಪುಟ್ಟ ಗಾಯವಾಗಿವೆ. ಅಪಘಾತವಾಗುತ್ತಿದ್ದಂತೆ ಬೈಕ್ ಸವಾರ ಸುರೇಶ್​ನನ್ನ ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿ. ಆಸ್ಪತ್ರೆ ಬಳಿ ಬರುವುದಾಗಿ ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಘಟನೆ ನಡೆದಿದ್ದು. ಆಕಸ್ಮಿಕವೋ ಆಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆಯೋ ಎನ್ನುವ ಅನುಮಾನಗಳು ಶುರುವಾಗಿದೆ.

ಇದನ್ನೂ ಓದಿ:Chhattisgarh Crime: ಪತ್ನಿಯನ್ನು ಕೊಲೆ ಮಾಡಿ, ತುಂಡು ತುಂಡಾಗಿ ಕತ್ತರಿಸಿ ನೀರಿನ ಟ್ಯಾಂಕ್​ ಒಳಗೆ 2 ತಿಂಗಳುಗಳ ಕಾಲ ಬಚ್ಚಿಟ್ಟಿದ್ದ ವ್ಯಕ್ತಿಯ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ನೇರವಾಗಿ ಮನೆಗೆ ಹೋಗಿದ್ದರೆ ಸುರೇಶ್ ಜೀವಂತವಾಗಿರುತ್ತಿದ್ದ. ಸ್ನೇಹಿತನ ಜೊತೆ ಎಣ್ಣೆ ಪಾರ್ಟಿಗೆ ಹೋಗಿ, ಎಣ್ಣೆ ಕುಡಿಯುತ್ತಿರುವಾಗಲೇ ಸುರೇಶ್ ಗಂಭೀರವಾಗಿ ಗಾಯಗೊಂಡು ಸಾವಿನ ಮನೆ ಸೇರಿದ್ದಾನೆ. ಇತ್ತ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಪೋಷಕರಿಗೆ ಚೇತರಿಸಿಕೊಳ್ಳಲಾಗದ ಅಘಾತವಾಗಿದೆ. ಅಪಘಾತದ ಈ ಕೇಸ್​ನಲ್ಲಿ ನೂರೆಂಟು ಅನುಮಾಗಳಿದ್ದು, ಪೊಲೀಸರ ತನಿಖೆಯಿಂದ ಹೊರಬೀಳಬೇಕಿದೆ.

ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 am, Sat, 11 March 23