Chhattisgarh Crime: ಪತ್ನಿಯನ್ನು ಕೊಲೆ ಮಾಡಿ, ತುಂಡು ತುಂಡಾಗಿ ಕತ್ತರಿಸಿ ನೀರಿನ ಟ್ಯಾಂಕ್​ ಒಳಗೆ 2 ತಿಂಗಳುಗಳ ಕಾಲ ಬಚ್ಚಿಟ್ಟಿದ್ದ ವ್ಯಕ್ತಿಯ ಬಂಧನ

ಛತ್ತೀಸ್​ಗಢದ ಬಿಲಾಸ್​ಪುರದಲ್ಲಿ ಶ್ರದ್ಧಾ ವಾಕರ್ ರೀತಿಯ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ 2 ತಿಂಗಳುಗಳ ಕಾಲ ನೀರಿನ ಟ್ಯಾಂಕ್​ನಲ್ಲಿಟ್ಟಿದ್ದ ಘಟನೆ ನಡೆದಿದೆ.

Chhattisgarh Crime: ಪತ್ನಿಯನ್ನು ಕೊಲೆ ಮಾಡಿ, ತುಂಡು ತುಂಡಾಗಿ ಕತ್ತರಿಸಿ ನೀರಿನ ಟ್ಯಾಂಕ್​ ಒಳಗೆ 2 ತಿಂಗಳುಗಳ ಕಾಲ ಬಚ್ಚಿಟ್ಟಿದ್ದ ವ್ಯಕ್ತಿಯ ಬಂಧನ
ಬಂಧನ
Follow us
ನಯನಾ ರಾಜೀವ್
|

Updated on: Mar 07, 2023 | 9:10 AM

ಛತ್ತೀಸ್​ಗಢದ ಬಿಲಾಸ್​ಪುರದಲ್ಲಿ ಶ್ರದ್ಧಾ ವಾಕರ್ ರೀತಿಯ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ 2 ತಿಂಗಳುಗಳ ಕಾಲ ನೀರಿನ ಟ್ಯಾಂಕ್​ನಲ್ಲಿಟ್ಟಿದ್ದ ಘಟನೆ ನಡೆದಿದೆ. ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಪತಿ ಆಕೆಯನ್ನು ಹತ್ಯೆ ಮಾಡಿದ್ದ, ಕೊಲೆ ಮಾಡಿದ ನಂತರ ಆರೋಪಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನೀರಿನ ತೊಟ್ಟಿಗೆ ಎಸೆದಿದ್ದ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ, ದೇಹದ ಭಾಗಗಳಿದ್ದ ಚೀಲ ದೊರೆತಿತ್ತು. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆರೋಪಿ ಪತಿ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ಹೆಂಡತಿ ಯಾರೊಂದಿಗೋ ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನುವ ಭಾವನೆ ಮೂಡಿ ಆಕೆಯನ್ನು ಹತ್ಯೆಗೈದಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: ವಿಜಯನಗರ: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪಾಗಲ್ ಪ್ರೇಮಿ

ಮೃತರನ್ನು ಸೀತಾ ಸಾಹು ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪವನ್ ಠಾಕೂರ್ ಎಂದು ಗುರುತಿಸಲಾಗಿದೆ, ಸದ್ಯ ಈ ಪ್ರಕರಣದ ಆರೋಪಿ ಪವನ್ ಠಾಕೂರ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹತ್ಯೆ ಬಹಿರಂಗಗೊಂಡಿದ್ದು ಹೇಗೆ? ಆರೋಪಿಯು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಎನ್ನುವ ಆರೋಪದಲ್ಲಿ ಆತನನ್ನು ಬಂಧಿಸಿದ್ದರು, ಆರೋಪಿಯ ಮನೆಯ ಶೋಧ ನಡೆಸುವಾಗ ಪೊಲೀಸರಿಗೆ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿತ್ತು, ಏನೆಂದು ಪರೀಕ್ಷಿಸಿದಾಗ ಶವದ ತುಂಡುಗಳು ಪತ್ತೆಯಾಗಿದೆ, ನಕಲಿ ನೋಟು ಮುದ್ರಣ ಯಂತ್ರವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಪವನ್ ಠಾಕೂರ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತ್ನಿಯನ್ನು ಕೊಂದ ಬಳಿಕ ತನ್ನ ಇಬ್ಬರು ಪುತ್ರರನ್ನು ತನ್ನ ತಂದೆ-ತಾಯಿಯೊಂದಿಗೆ ಬಿಟ್ಟು ಹೋಗಿದ್ದ, ಇಬ್ಬರಿಗೂ 10 ವರ್ಷಗಳ ಹಿಂದೆ ಮದುವೆಯಾಗಿತ್ತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ