ನವದೆಹಲಿ: 26 ವರ್ಷದ ನಟಿಯನ್ನು ಕೊಂದು ಆಕೆಯ ದೇಹವನ್ನು ತುಂಡು- ತುಂಡುಗಳಾಗಿ ಕತ್ತರಿಸಿದ ಆಘಾತಕಾರಿ ಘಟನೆ ಇಟಲಿಯಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಆರೋಪದ ಮೇಲೆ ಬ್ಯಾಂಕರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಟಿಯನ್ನು ಕೊಲೆ ಮಾಡಿ, ಆಕೆಯ ಶವವನ್ನು ತುಂಡು-ತುಂಡಾಗಿ ಕತ್ತರಿಸಿದ ಬಳಿಕ ಆಕೆಯ ಹೆಣವನ್ನು (Deadbody) ರಸ್ತೆಯೊಂದರ ಪಕ್ಕ ಎಸೆದಿದ್ದರು.
ಮೃತ ನಟಿಯನ್ನು ಕರೋಲ್ ಮಾಲ್ಟೆಸಿ ಎಂದು ಗುರುತಿಸಲಾಗಿದೆ. ಮಾರ್ಚ್ 20ರಂದು ಲೊಂಬಾರ್ಡಿ ಪ್ರದೇಶದ ಪಲ್ಲೈನ್ ಗ್ರಾಮದ ಬಳಿಯ ಬೆಟ್ಟದ ಮೇಲೆ ಮಹಿಳೆಯ ಛಿದ್ರಗೊಂಡ ಶವ ಪತ್ತೆಯಾಗಿತ್ತು. ಆ ನಟಿಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ನ ದೈನಿಕ ಮಿರರ್‌ನ ವರದಿ ಪ್ರಕಾರ, ಮಹಿಳೆಯ ಗುರುತು ಗೊತ್ತಾಗಬಾರದು ಎಂದು ಆಕೆಯ ದೇಹದ ಭಾಗಗಳನ್ನು ಸುಟ್ಟು, ನಾಲ್ಕು ಗೋಣಿಚೀಲಗಳಲ್ಲಿ ಪ್ಯಾಕ್ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಡೇವಿಡ್ ಫೊಂಟಾನಾ ಎಂಬ 43 ವರ್ಷದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಮತ್ತು ಮೃತದೇಹವನ್ನು ಬಚ್ಚಿಟ್ಟ ಆರೋಪ ಹೊರಿಸಲಾಗಿದೆ. ಆ ನಟಿಯ ಅಭಿಮಾನಿಯೊಬ್ಬರು ಮುಂದೆ ಬಂದು ಶವವನ್ನು ಗುರುತಿಸಿದ ನಂತರ ಆಕೆಯ ಶವವನ್ನು ಗುರುತಿಸಲಾಯಿತು. ಮೃತ ಮಹಿಳೆ ಮಿಲನ್‌ನ ರೆಸ್ಕಾಲ್ಡಿನಾ ಪುರಸಭೆಯಲ್ಲಿ ವಾಸಿಸುತ್ತಿದ್ದರು.
ಅಡಲ್ಟ್ ಸಿನಿಮಾದಲ್ಲಿ (ನೀಲಿಚಿತ್ರ) ನಟಿಸುತ್ತಿದ್ದ ಕರೋಲ್ ಮಾಲ್ಟೆಸಿ ಇದಕ್ಕೂ ಮೊದಲು ಸುಗಂಧ ದ್ರವ್ಯವನ್ನು ಮಾರಾಟ ಮಾಡುತ್ತಿದ್ದಳು. ನಂತರ ಕೊವಿಡ್ ಸಮಯದ ಬಳಿಕ ಆಕೆ ವಯಸ್ಕ ಸಿನಿಮಾಗಳಲ್ಲಿ ನಟಿಸಲಾರಂಭಿಸಿದ್ದರು. ವಿಚಾರಣೆ ವೇಳೆ ಆರೋಪಿ ಬ್ಯಾಂಕರ್ ಜನವರಿಯಲ್ಲಿ ನಟಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಶವವನ್ನು ಫ್ರೀಜರ್‌ನಲ್ಲಿಟ್ಟು ಒಂದು ತಿಂಗಳ ನಂತರ ಅದನ್ನು ರಸ್ತೆ ಪಕ್ಕದಲ್ಲಿ ಎಸೆದು ಬೆಂಕಿ ಹಚ್ಚಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Murder: ನಾಪತ್ತೆಯಾಗಿದ್ದ ಯುವಕನ ಕತ್ತು ಸೀಳಿ ಕೊಂದು, ಸೂಟ್ಕೇಸ್ನಲ್ಲಿ ತುಂಬಿ ಬಿಸಾಡಿದ ಹಂತಕರು
Murder: ಮನೆಯೊಳಗೆ ಮಗ, ಸೊಸೆ, ಮೊಮ್ಮಕ್ಕಳನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೃದ್ಧ