ಹಳೆ ವೈಷಮ್ಯ ಹಿನ್ನೆಲೆ ವಿಜಯಪುರದಲ್ಲಿ ಗುಂಡಿನ ದಾಳಿ: ಓರ್ವನಿಗೆ ಗಾಯ

ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಕಂಟ್ರೀ ಪಿಸ್ತೂಲ್​ನಿಂದ ಗುಂಡಿನ ದಾಳಿ ಮಾಡಲಾಗಿದೆ. ಗುಂಡಿನ ದಾಳಿಯಿಂದ ರಾಜು ನ್ಯಾಮಗೊಂಡ ಎಂಬುವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಳೆ ವೈಷಮ್ಯ ಹಿನ್ನೆಲೆ ವಿಜಯಪುರದಲ್ಲಿ ಗುಂಡಿನ ದಾಳಿ: ಓರ್ವನಿಗೆ ಗಾಯ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jan 22, 2024 | 6:51 AM

ವಿಜಯಪುರ, ಜನವರಿ 22: ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಕೊಲ್ಹಾರ (Kolhar) ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಕಂಟ್ರೀ ಪಿಸ್ತೂಲ್​ನಿಂದ ಗುಂಡಿನ ದಾಳಿ (Shoot Out) ಮಾಡಲಾಗಿದೆ. ಗುಂಡಿನ ದಾಳಿಯಿಂದ ರಾಜು ನ್ಯಾಮಗೊಂಡ ಎಂಬುವರು ಗಾಯಗೊಂಡಿದ್ದಾರೆ. ಶಿವು ಜಗದಾಳೆ ಗುಂಡು ಹಾರಿಸಿದ ಆರೋಪಿ. ಘಟನೆಯಲ್ಲಿ ಗಾಯಗೊಂಡ ರಾಜು ನ್ಯಾಮಗೊಂಡ ಅವರನ್ನು ವಿಜಯಪುರ (Vijayapura) ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸಂಬಂಧಿಕರಾಗಿದ್ದು ವೈಷಮ್ಯ ಹೊಂದಿದ್ದರು ಎನ್ನಲಾಗಿದೆ. ಆರೋಪಿ ಶಿವು ಜಗದಾಳೆ ಸಂಬಂಧಿ ರಾಜು ನ್ಯಾಮಗೊಂಡ ಮೇಲೆ ಮೂರು ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಶಿವು ಜಗದಾಳೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ರೋಣಿಹಾಳ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ