ತೆಲಂಗಾಣ: ನಿರಂತರ ಕಿರುಕುಳ, ಲಿಂಗ ಪರಿವರ್ತನೆ ಮಾಡಿಕೊಂಡ ಪತಿಯನ್ನು ಕೊಂದ ಪತ್ನಿ

|

Updated on: Jan 08, 2024 | 2:30 PM

ಸಿದ್ದಿಪೇಟೆಯ ಬೋಯಿಗಳ್ಳಿಯ ವೇದಶ್ರೀ ಅವರು ನಸರಪುರ ಬೀದಿಯ ದಾರಿಪಲ್ಲಿ ವೆಂಕಟೇಶ್ ಎಂಬವವರೊಂದಿಗೆ 2014ರಲ್ಲಿ ಮದುವೆ ಆಗಿದ್ದರು. 2015ರಲ್ಲಿ ಅವರಿಗೆ ಒಂದು ಮಗು ಜನಿಸಿತ್ತು. ಬಳಿಕ ಹೆಚ್ಚುವರಿ ವರದಕ್ಷಿಣೆಗಾಗಿ ವೆಂಕಟೇಶ್  ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ. ಇದಲ್ಲದೆ, ಕಳೆದ ಕೆಲವು ದಿನಗಳಿಂದ ಅವರ ನಡವಳಿಕೆಯಲ್ಲಿ ಬದಲಾವಣೆಗಳಾಗಿತ್ತು.

ತೆಲಂಗಾಣ: ನಿರಂತರ ಕಿರುಕುಳ, ಲಿಂಗ ಪರಿವರ್ತನೆ ಮಾಡಿಕೊಂಡ ಪತಿಯನ್ನು ಕೊಂದ ಪತ್ನಿ
ಪ್ರಾತಿನಿಧಿಕ ಚಿತ್ರ
Follow us on

ಸಿದ್ದಿಪೇಟೆ, ಜನವರಿ 7: ತನಗೆ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿ ಹತ್ಯೆ (Murder) ಮಾಡಿದ ಪ್ರಕರಣವೊಂದು ಇಲ್ಲಿ ನಡೆದಿದೆ. ಕಳೆದ ತಿಂಗಳು 18 ಲಕ್ಷ ಕೊಡುವುದಾಗಿ ಒಪ್ಪಿಕೊಂಡಿದ್ದ ಪತ್ನಿ ಮೊದಲು ಮುಂಗಡವಾಗಿ 4.60 ಲಕ್ಷ ರೂ ಪಡೆದ ಪೂರ್ವ ಯೋಜಿತ ಸಂಚಿನ ಪ್ರಕಾರ ತನ್ನ ಮನೆಯಲ್ಲಿಯೇ ಪತಿಯನ್ನು ಕೊಂದಿದ್ದಾಳೆ. ಕಳೆದ ತಿಂಗಳು ನಡೆದ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಸೇರಿದಂತೆ ಮೂವರನ್ನು ಸಿದ್ದಿಪೇಟೆ (siddipet)ಒನ್‌ಟೌನ್ ಪೊಲೀಸರು ಶನಿವಾರ (ಜನವರಿ 6) ವಶಕ್ಕೆ ಪಡೆದಿದ್ದಾರೆ. ಸಿದ್ದಿಪೇಟೆ ಒನ್ ಟೌನ್ ಸಿಐ ಕೃಷ್ಣಾ ರೆಡ್ಡಿ ಹಾಗೂ ಎಸ್ ಐ ಕೃಷ್ಣಾ ರೆಡ್ಡಿ ನೀಡಿರುವ ವಿವರ ಹೀಗಿದೆ…

ಸಿದ್ದಿಪೇಟೆಯ ಬೋಯಿಗಳ್ಳಿಯ ವೇದಶ್ರೀ ಅವರು ನಸರಪುರ ಬೀದಿಯ ದಾರಿಪಲ್ಲಿ ವೆಂಕಟೇಶ್ (33) ಎಂಬವವರೊಂದಿಗೆ 2014ರಲ್ಲಿ ಮದುವೆ ಆಗಿದ್ದರು. 2015ರಲ್ಲಿ ಅವರಿಗೆ ಒಂದು ಮಗು ಜನಿಸಿತ್ತು. ಬಳಿಕ ಹೆಚ್ಚುವರಿ ವರದಕ್ಷಿಣೆಗಾಗಿ ವೆಂಕಟೇಶ್  ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ. ಇದಲ್ಲದೆ, ಕಳೆದ ಕೆಲವು ದಿನಗಳಿಂದ ಅವರ ನಡವಳಿಕೆಯಲ್ಲಿ ಬದಲಾವಣೆಗಳಾಗಿತ್ತು. ರಾತ್ರಿಯಲ್ಲಿ ಕಿವಿ ಚುಚ್ಚಿ ಮೂಗು ಚುಚ್ಚಿಕೊಂಡು ಹೆಣ್ಣಿನ ಬಟ್ಟೆ ಧರಿಸುತ್ತಿದ್ದರು. ಅವರು 2019 ರಲ್ಲಿ ಆತ ಟ್ರಾನ್ಸ್ಜೆಂಡರ್ ಆಗಿ ತಮ್ ಹೆಸರನ್ನು ರೋಜಾ ಎಂದು ಬದಲಾಯಿಸಿಕೊಂಡರು. ಪತಿ ಟ್ರಾನ್ಸ್ ವುಮೆನ್ ಆಗಿದ್ದಾರೆ ಎಂದು ತಿಳಿದ ವೇದಶ್ರೀ ಕಳೆದ ಏಳು ವರ್ಷಗಳಿಂದ ಪತಿಯಿಂದ ದೂರವಾಗಿದ್ದರು. ಮೇಲಾಗಿ ಮಗಳನ್ನು ಕೊಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದರು.  ವೇದಶ್ರೀ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆಗೆ ಹಲವು ಬಾರಿ ಸೀರೆ ಉಟ್ಟು ಹೋಗಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಇದರಿಂದಾಗಿಯೇ ಆಕೆ ಕೆಲಸ ಕಳೆದುಕೊಂಡಳು. ಬೇರೆ ಶಾಲೆಗೆ ಸೇರಿದರೂ ಇದೇ ಪರಿಸ್ಥಿತಿ. ಇದರಿಂದಾಗಿ ವೇದಶ್ರೀ ಕೆಲ ದಿನಗಳಿಂದ ಪಟ್ಟಣಕ್ಕೆ ಸೇರಿದ ಬೋಯಿನಿ ರಮೇಶ್ ಜತೆ ನಿಕಟ ಸಂಪರ್ಕ ಹೊಂದಿದ್ದಳು. ಅವನೊಂದಿಗೆ, ವೆಂಕಟೇಶ್ (ರೋಜಾ)ನ್ನು ಮುಗಿಸಲು ಸಂಚು ರೂಪಿಸಿದ್ದಳು.

ಪಟ್ಟಣದ ಕಾಕತೀಯ ಪಾದರಕ್ಷೆ ವ್ಯಾಪಾರಿ ರಮೇಶ್ ಎಂಬುವರೊಂದಿಗೆ ವೇದಶ್ರೀ ರೂ. 18 ಲಕ್ಷಕ್ಕೆ ಸಹಿ ಮಾಡಿದ್ದಾರೆ. ಎರಡು ಕಂತುಗಳಲ್ಲಿ 4.60 ಲಕ್ಷ ರೂ ಪಾವತಿ ಒಪ್ಪಂದ ಆಗಿತ್ತು.ಸಂಚು ಕಾರ್ಯಗತ ಮಾಡಲು ರಮೇಶ್ ಸ್ನೇಹಿತನಾಗಿದ್ದ ನಂಗನೂರು ಮಂಡಲದ ನಾಗರಾಜುಪಲ್ಲಿಯ ಇಪ್ಪಲ ಶೇಖರ್ ಎಂಬಾತನಿಗೆ ಕೊಲೆಯ ವಿಚಾರ ತಿಳಿಸಿದ್ದಾನೆ. ಯೋಜನೆಯ ಭಾಗವಾಗಿ, ಇಪ್ಪಲ ಶೇಖರ್ ಅವರನ್ನು ವೆಂಕಟೇಶ್ ಅವರಿಗೆ (ರೋಜಾ) ಪರಿಚಯಿಸಲಾಯಿತು ಮತ್ತು ಅವರು ಆಗಾಗ್ಗೆ ಭೇಟಿಯಾಗುತ್ತಿದ್ದರು.  ಇಪ್ಪಲ ಶೇಖರ್ ಅವರು ವೆಂಕಟೇಶ್ (ರೋಜಾ) ಅವರಿಗೆ ಕರೆ ಮಾಡಿ ವಾರಂಗಲ್ ನಿಂದ ಸಿದ್ದಿಪೇಟೆಗೆ ಕರೆ ತಂದಿದ್ದರು. ಕಳೆದ ವರ್ಷ ಡಿಸೆಂಬರ್ 11 ರಂದು ನಸರಪುರದ ಮನೆಯಲ್ಲಿ ಒಂಟಿಯಾಗಿದ್ದ ವೆಂಕಟೇಶ್ (ರೋಜಾ) ಜತೆ ಶೇಖರ್ ಕುಡಿದಿದ್ದ.

ಇದನ್ನೂ ಓದಿ: ಉತ್ತರಪ್ರದೇಶ: ಸುತ್ತಿಗೆಯಿಂದ ತಲೆಗೆ ಹೊಡೆದು ಪತಿಯನ್ನು ಹತ್ಯೆ ಮಾಡಿದ ಪತ್ನಿ

ಮದ್ಯದ ಅಮಲಿನಲ್ಲಿದ್ದ ವೆಂಕಟೇಶ್ (ರೋಜಾ) ಅವರನ್ನು ಇನ್ನಿಬ್ಬರ ಸಹಾಯದಿಂದ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ವೆಂಕಟೇಶ್ (ರೋಜಾ) ಸಾವಿನ ಬಗ್ಗೆ ಒನ್‌ಟೌನ್ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ವೆಂಕಟೇಶ್ (ರೋಜಾ) ಕೊಲೆ ಎಂದು ಪತ್ತೆಯಾದ ಕಾರಣ ಪೊಲೀಸರು ತನಿಖೆಯ ಭಾಗವಾಗಿ ಪುರಾವೆಗಳನ್ನು ಸಂಗ್ರಹಿಸಿದರು. ವೇದಶ್ರೀ ಜೊತೆಗೆ ಐವರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಮುಖ ಆರೋಪಿ ವೇದಶ್ರೀ ಹಾಗೂ ಬೋನಿ ರಮೇಶ್ ಹಾಗೂ ಇಪ್ಪಲ ಶೇಖರ್ ಅವರನ್ನು ಶನಿವಾರ ಪೊಲೀಸರು ಬಂಧಿಸಿ, ರಿಮಾಂಡ್‌ಗೆ ಕಳುಹಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಮೂವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಘಟನೆಯು ಸ್ಥಳದಲ್ಲಿ ಸಂಚಲನ ಮೂಡಿಸಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ