ಹೊಸ ವರ್ಷಾಚರಣೆ ವೇಳೆ ಸಪ್ಲೈಯರ್​ಗೆ ಚಾಕು ಇರಿದಿದ್ದ ಆರೋಪಿಗಳು ಅಂದರ್

|

Updated on: Jan 05, 2020 | 7:44 PM

ಬೆಂಗಳೂರು: ಹೊಸ ವರ್ಷದಂದು ಹೋಟೆಲ್ ಸಪ್ಲೇಯರ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಹರಿ, ಕರ್ಣ, ರಂಜಿತ್, ಸಂತೋಷ್, ವಿಜಯ್ ಸೇರಿ ಆರು ಮಂದಿ ಬಂಧಿತ ಆರೋಪಿಗಳು. ಜನವರಿ 1ರ ಹೊಸ ವರ್ಷಾಚರಣೆಗೆ ದೊಡ್ಡಬಾಣಸವಾಡಿಯ ಹೋಟೆಲ್​ವೊಂದರಲ್ಲಿ ಆರೋಪಿಗಳು ರೂಂ ಬುಕ್ ಮಾಡಿದ್ದರು. 4 ಮಂದಿ ಅಂತೇಳಿ ರೂಂ ಪಡೆದು ಸುಮಾರು 12ಕ್ಕೂ ಹೆಚ್ಚು ಮಂದಿ ರೂಂನಲ್ಲಿ ಸೇರಿದ್ದರು. ಹೋಟೆಲ್​ನಲ್ಲಿ ಜೋರಾಗಿ ಕೂಗುತ್ತ ಪಾರ್ಟಿ ಮಾಡ್ತಿದ್ರು. ಈ ವೇಳೆ ಗಲಾಟೆ ಮಾಡ್ಬೇಡಿ, ಇತರೆ ಗ್ರಾಹಕರಿಗೆ […]

ಹೊಸ ವರ್ಷಾಚರಣೆ ವೇಳೆ ಸಪ್ಲೈಯರ್​ಗೆ ಚಾಕು ಇರಿದಿದ್ದ ಆರೋಪಿಗಳು ಅಂದರ್
Follow us on

ಬೆಂಗಳೂರು: ಹೊಸ ವರ್ಷದಂದು ಹೋಟೆಲ್ ಸಪ್ಲೇಯರ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಹರಿ, ಕರ್ಣ, ರಂಜಿತ್, ಸಂತೋಷ್, ವಿಜಯ್ ಸೇರಿ ಆರು ಮಂದಿ ಬಂಧಿತ ಆರೋಪಿಗಳು.

ಜನವರಿ 1ರ ಹೊಸ ವರ್ಷಾಚರಣೆಗೆ ದೊಡ್ಡಬಾಣಸವಾಡಿಯ ಹೋಟೆಲ್​ವೊಂದರಲ್ಲಿ ಆರೋಪಿಗಳು ರೂಂ ಬುಕ್ ಮಾಡಿದ್ದರು. 4 ಮಂದಿ ಅಂತೇಳಿ ರೂಂ ಪಡೆದು ಸುಮಾರು 12ಕ್ಕೂ ಹೆಚ್ಚು ಮಂದಿ ರೂಂನಲ್ಲಿ ಸೇರಿದ್ದರು. ಹೋಟೆಲ್​ನಲ್ಲಿ ಜೋರಾಗಿ ಕೂಗುತ್ತ ಪಾರ್ಟಿ ಮಾಡ್ತಿದ್ರು. ಈ ವೇಳೆ ಗಲಾಟೆ ಮಾಡ್ಬೇಡಿ, ಇತರೆ ಗ್ರಾಹಕರಿಗೆ ತೊಂದರೆಯಾಗತ್ತೆ ಅಂತಾ ಸಪ್ಲೈಯರ್ ಇರ್ಶಾದ್ ಹೇಳಿದ್ದರು.

ಇದರಿಂದ ಕೆರಳಿದ ಆರೋಪಿಗಳು ಇರ್ಶಾದ್​ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ಇರ್ಶಾದ್​ಗೆ ತೀವ್ರ ಗಾಯವಾಗಿತ್ತು. ಆರೋಪಿಗಳು ಹಲ್ಲೆ ನಡೆಸುವ ಸಂಪೂರ್ಣ ದೃಶ್ಯ ಹೋಟೆಲ್​ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯ ವಶಕ್ಕೆ ಪಡೆದ ಬಾಣಸವಾಡಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.