ಮೈಸೂರು: ದಂಪತಿ ಮಧ್ಯೆ ಜಗಳ ತಾರಕಕ್ಕೇರಿ ಪತ್ನಿಯನ್ನು ಹತ್ಯೆ ಮಾಡಲು ಮುಂದಾದ ವೇಳೆ ಅಡ್ಡಬಂದ ಮಾವನನ್ನೇ ಅಳಿಯ ಕೊಲೆ ಮಾಡಿರುವ ಘಟನೆ ಗೌಸಿಯಾನಗರದಲ್ಲಿ ನಡೆದಿದೆ. ಸಲೀಂ(50) ಮೃತ ದುರ್ದೈವಿ.
ಪತ್ನಿ ಹಸೀನಾ ಮೇಲೆ ಪತಿ ನದೀಂ ಅಹ್ಮದ್ ಖಾನ್ ಅನುಮಾನ ಪಡುತ್ತಿದ್ದ. ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು. ನಿನ್ನೆ ದಂಪತಿ ನಡುವೆ ಜಗಳ ತಾರಕಕ್ಕೇರಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ನದೀಂ ಮುಂದಾಗಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ಮಾವ ಸಲೀಂಗೆ ಅಳಿಯ ಚಾಕುವಿನಿಂದ ಇರಿದಿದ್ದಾನೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಲೀಂನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಲೀಂ ಮೃತಪಟ್ಟಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ನದೀಂಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Published On - 7:15 am, Wed, 12 February 20